ಜೈಲು ವಾಸದ ನಂತರ ಮಲತಂದೆಯನ್ನ ಖುಲಾಸೆಗೊಳಿಸಿದ ಕೋರ್ಟ್.!ಲೈಂಗಿಕ ಕಿರುಕುಳದ ಸುಳ್ಳು ಕೇಸ್ ದಾಖಲಿಸಿದ್ದ ಅಪ್ರಾಪ್ತೆ;

ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಆಕೆಯ ಮಲತಂದೆಯನ್ನು ಬಂಧಿಸಿದ್ದ ಕೋರ್ಟ್, ಇತ್ತೀಚಿಗೆ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಕಾರಣ ಇಷ್ಟೇ, ತನ್ನ ಮಲತಂದೆಯ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಸುಳ್ಳು ದೂರು ದಾಖಲಿಸಿದ್ದೇನೆಂದು ಹುಡುಗಿ‌ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾಳೆ.

ಕಳೆದ ನಾಲ್ಕು ತಿಂಗಳಿಂದ ಜೈಲು ವಾಸದಲ್ಲಿದ್ದ ಪಾಪದ ತಂದೆಯನ್ನು ಈಗ ಬಿಡುಗಡೆ ಮಾಡಿ, ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

ಮಹಾರಾಷ್ಟ್ರದ ಕೊಂಡಿವಲಿ ಪೊಲೀಸ್ ಠಾಣೆಯಲ್ಲಿ 16 ವರ್ಷದ ಹುಡುಗಿಯೊಬ್ಬಳು 2018ರಲ್ಲಿ ತನ್ನ ಮಲತಂದೆಯ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು. ತನ್ನ ಪ್ರೇಮಿ ಹಾಗೂ ಜನಗಳ ಎದುರು ತನಗೆ ಅವಮಾನ ಮಾಡಿದ ಮಲತಂದೆಯ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಹುಡುಗಿ ಈ ಸುಳ್ಳು ದೂರು ನೀಡಿದ್ದಳೆಂದು ವರದಿಯಾಗಿದೆ. ಅಂದಿನಿಂದ ಪ್ರಕರಣದ ಟ್ರಯಲ್ಸ್ ನಡೆದು ನಾಲ್ಕು ತಿಂಗಳ ಹಿಂದೆ ಮಲತಂದೆಯನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿತ್ತು.

ಮಲತಂದೆಯ ವಿರುದ್ಧ ದ್ವೇಷದ ಕಾವಿನಲ್ಲಿ ಬೇಯುತ್ತಿದ್ದ ಹದಿನಾರು ವರ್ಷದ ಹುಡುಗಿ, ತನ್ನ ತಾಯಿಯ ಬಳಿ ಹೋಗಿ ಆತ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಹೇಳಿಕೊಂಡಿದ್ದಾಳೆ. ಹುಡುಗಿಯ ಮಾತುಗಳನ್ನು ನಂಬಿದ ತಾಯಿ ತನ್ನ ಪಕ್ಕದ ಮನೆಯವರ ಸಹಾಯದಿಂದ ಕೊಂಡಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ‌ ಪೊಲೀಸರು ತಕ್ಷಣ ತಂದೆಯನ್ನು ಬಂಧಿಸಿದ್ದಾರೆ.

ಆದರೆ ಆನಂತರ ಸತ್ಯ ತಿಳಿದ ಹುಡುಗಿಯ ತಾಯಿ, ಪೊಲೀಸ್ ಠಾಣೆಗೆ ಬಂದು ನಿಜಾಂಶ ತಿಳಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನೂ ಎನ್ನುವುದನ್ನ ನೋಡುವುದಾದರೆ ಆಕೆಯ ತಾಯಿಯ ಹೇಳಿಕೆಯ ಪ್ರಕಾರ, ಹುಡುಗಿ ಅದೇ ಏರಿಯಾದಲ್ಲಿದ್ದ 20 ವರ್ಷದ ಹುಡುಗನನ್ನು ಪ್ರೀತಿಸಿದ್ದಳು, ಅವನನ್ನೇ ಮದುವೆಯಾಗಬೇಕೆಂಬ ಕನಸು ಕಂಡಿದ್ದಳು. ಆದರೆ ಆತ ಗಾಂಜಾ ಹಾಗೂ ಡ್ರಗ್ಸ್ ವ್ಯಸನಿಯಾಗಿದ್ದ. ಆಕೆಯ ತಂದೆಗೆ ಹುಡುಗನ ಬಗ್ಗೆ ತಿಳಿದಿತ್ತು ಹಾಗೂ ಆತ ಅವರ ಪ್ರೀತಿಯನ್ನು ಒಪ್ಪಿರಲಿಲ್ಲ. ಹೀಗೆ ಒಂದು ದಿನ ಅವರಿಬ್ಬರು ಕೈಕೈ ಹಿಡಿದು ಸುತ್ತುತ್ತಿರುವುದನ್ನು ಕಂಡಿದ್ದಾರೆ. ಅದೇ ಸ್ಥಳದಲ್ಲಿ ಜನರ ಮುಂದೆ ಇಬ್ಬರಿಗೂ ಛೀಮಾರಿ ಹಾಕಿದ್ದಾರೆ, ಈ ಘಟನೆಗೆ ದ್ವೇಷ ತೀರಿಸಿಕೊಳ್ಳಲು ಹುಡುಗಿ ಈ ಸುಳ್ಳು ದೂರು ನೀಡಿದ್ದಾಳೆಂದು ತಿಳಿಸಿದ್ದಾರೆ. ಪೊಲೀಸರು ಈ ಸಂಬಂಧ ಆ ಹುಡುಗಿಯ ಪ್ರೇಮಿಯ ಹೇಳಿಕೆಯನ್ನು ಪಡೆದಿದ್ದಾರೆ. ಆತನೂ ಇದೇ ವಿಷಯ ಬಾಯ್ಬಿಟ್ಟಿದ್ದಾನೆ.

ಆರು ತಿಂಗಳ ಕಾಲ ಬಾಲಾಪರಾಧಿ ಕೇಂದ್ರದಲ್ಲಿದ್ದ ಹುಡುಗಿಗೆ ತನ್ನ ಪೋಷಕರ ನೆನಪುಗಳು ಕಾಡಲು ಶುರುವಾಯಿತು. ಆನಂತರ ತಾನು ಮಾಡಿದ ಕೃತ್ಯದ ಬಗ್ಗೆ ಅರಿವಾಗಿ, ತಾನು ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಕೊನೆಗೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾಳೆ. ಇಷ್ಟೆಲ್ಲಾ ಆದರೂ ಆಕೆಯ ಮಲತಂದೆ ಅವಳನ್ನ ಮನೆಗೆ ಸಂತೋಷದಿಂದಲೇ ಮತ್ತೆ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಇದೇ ತಿಂಗಳಲ್ಲಿ ಆಕೆಯ ಮದುವೆಯನ್ನು ನಿಶ್ಚಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿವಾದ! ಆಂಧ್ರಪ್ರದೇಶಕ್ಕೂ ಕಾಲಿಟ್ಟಿದೆ.

Thu Feb 17 , 2022
ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದ ಇದೀಗ ಆಂಧ್ರಪ್ರದೇಶಕ್ಕೂ ವ್ಯಾಪಿಸಿದೆ. ವಿಜಯವಾಡದ ಲೊಯೊಲಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲರು ಬುರ್ಖಾ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಒಳಗೆ ಪ್ರವೇಶ ನೀಡಲಿಲ್ಲವೆಂದು ವರದಿಯಾಗಿದೆ.‌ ಪಠಾಣ್ ಸದಿಖನಿಸಾ ಎನ್ನುವ ವಿದ್ಯಾರ್ಥಿನಿ,‌ ಕಾಲೇಜು ಪ್ರಿನ್ಸಿಪಲ್ ಬುರ್ಖಾ ಧರಿಸಿದ್ದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಓದುತ್ತಿದ್ದೇವೆ. ಮೊದಲ ದಿನದಿಂದಲೂ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದೇವೆ, ಹಿಂದೆಂದೂ ಇಂತಹ […]

Advertisement

Wordpress Social Share Plugin powered by Ultimatelysocial