ಜೆಡಿಎಸ್ ಜನತಾ ಜಲಧಾರೆ ಯಾತ್ರೆ ಆರಂಭ:

ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆಗೆ ಇಂದು ಚಾಲನೆ ದೊರೆತಿದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಲಮಟ್ಟಿಯಲ್ಲಿ ಪವಿತ್ರ ಜಲವನ್ನು ಕಲಶಕ್ಕೆ ತುಂಬುವ ಮೂಲಕ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಮಂಡ್ಯದ ಕೆ ಆರ್ ಎಸ್ ಜಲಾಶಯದ ಬಳಿ ಪೂಜೆ ಮಾಡುವ ಮೂಲಕ ಜನತಾ ಜಲಧಾರೆಗೆ ಚಾಲನೆ ನೀಡಿದರು.

ಈ ಯಾತ್ರೆಯಲ್ಲಿ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಕ್ಕೆ ತುಂಬಿ ಕೊಳ್ಳಲಾಗುತ್ತದೆ. ನಂತರ ಕಳಶದ ವ್ಯವಸ್ಥೆಯುಳ್ಳ ವಾಹನಗಳಲ್ಲಿ ನೀರನ್ನು ಸಂಗ್ರಹಿಸಲಾಗುವುದು.

ಜಲಧಾರೆಯ ಕಳಶವನ್ನು ಹೊತ್ತ ಗಂಗಾ ರಥಗಳು ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದೆ. ಮೇ 8 ರ ನಂತರ ಬೆಂಗಳೂರು ತಲುಪಲಿದೆ. ನಂತರ ಕಳಶದ ನೀರನ್ನು ಒಂದು ಕಲಶಕ್ಕೆ ತೆಗೆದು ಜೆಡಿಎಸ್ ಕಚೇರಿಯಲ್ಲಿ ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶನಿವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ,

Sat Apr 16 , 2022
ನವದೆಹಲಿ:ಕಾಂಗ್ರೆಸ್‌ನ ಪ್ರಮುಖ ನಾಯಕರು ಶನಿವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರ ಮತ್ತು ರಾಜಸ್ಥಾನದಲ್ಲಿ ಪಕ್ಷದ ‘ಚಿಂತನ ಶಿಬಿರ’ ನಡೆಸುವ ಬಗ್ಗೆಯೂ ಕಾಂಗ್ರೆಸ್ ನಾಯಕರು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಮತ್ತು ಪಕ್ಷದಲ್ಲಿ ಬದಲಾವಣೆಗಳನ್ನು ಸೂಚಿಸಲು, ಮತ್ತು ಗುಜರಾತ್, ಹಿಮಾಚಲ […]

Advertisement

Wordpress Social Share Plugin powered by Ultimatelysocial