ಅಲ್‌ಖೈದಾ ಮುಖ್ಯಸ್ಥ ಜವಾಹಿರಿಯನ್ನ ಹೊಡೆದು ಹಾಕಿದ್ದೀವಿ ಅನ್ನೋದೇ ಡೌಟು

ಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಎಕ್ಯೂ ಮುಖ್ಯಸ್ಥ ಜವಾಹಿರಿಯನ್ನ ಹೊಡೆದು ಹಾಕಿದ್ವಿ ಅಂತ ಹೇಳಿದ್ದ ಅಮೆರಿಕ, ಈಗ ಆತ ಸತ್ತಿದ್ದಾನೋ ಇಲ್ವೋ ಅನ್ನೋದೇ ನಮಗೆ ಡೌಟು ಅಂತ ಹೇಳಿದೆ. ಕ್ರಿಶ್ಚಿನ್‌ ಅಬಿಜೈದ್‌ (Christine Abizaid) ಈಕೆ ಅಮೆರಿಕದ ನ್ಯಾಷನಲ್‌ ಕೌಂಟರ್‌ ಟೆರರಿಸಂ ಸೆಂಟರ್‌ನ ಡೈರೆಕ್ಟರ್‌.ಇವರು ಈ ಬಗ್ಗೆ ಮಾತನಾಡಿದ್ದಾರೆ.. ನಮಗೆ ಆ ಎಕ್ಯೂ ಉಗ್ರಸಂಘಟನೆಯ ಮೇಲೆನೇ ಪ್ರಶ್ನೆ ಇದೆ. ಆ ಸಂಘಟನೆಯವರು ತಮ್ಮ ಉತ್ತರಾಧಿಕಾರಿಯನ್ನೂ ಘೋಷಣೆ ಮಾಡಿಲ್ಲ. ಆ ಬಗ್ಗೆ ಏನನ್ನೂ ಮಾಹಿತಿಯೇ ನಮಗೆ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಆ ಮೂಲಕ ಜವಾಹಿರಿ ಸತ್ತಿದ್ದಾನೋ ಇಲ್ವೋ ಇನ್ನೂ ನಮಗೆ ಕ್ಲಿಯರ್‌ ಇಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಕಳೆದ ವರ್ಷ ಅಂದ್ರೆ 2022ರ ಜುಲೈ 31ನೇ ತಾರೀಖು ಮಧ್ಯ ರಾತ್ರಿ ನಮ್ಮ ಪಡೆಗಳು ಜವಾಹಿರಿಯನ್ನ ಮುಗಿಸಿವೆ ಅಂತ ಅಮೆರಿಕ ಅಧ್ಯಕ್ಷ ಬೈಡೆನ್‌ ಅಧಿಕೃತವಾಗಿ ಅನೌನ್ಸ್‌ ಮಾಡಿದ್ರು. ಆದ್ರೆ ಈಗ ಅಮೆರಿಕದ ಇಂಟಲಿಜೆನ್ಸ್ ಅಧಿಕಾರಿಗಳೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರೋದು ಸಾಕಷ್ಟು ಕುತೂಹಲ ಹಾಗೇ ಆತಂಕಕ್ಕೆ ಕಾರಣವಾಗಿದೆ. ಈ ಜವಾಹಿರಿ, ಅಮೆರಿಕದ ಮೇಲೆ ನಡೆದಿದ್ದ ದಾಳಿಗಳ ಹಿಂದೆ ಲಾಡೆನ್‌ನ ಬಂಟನಾಗಿ ಕೈ ಜೋಡಿಸಿದ್ದ ಅಂತ ಆರೋಪಿಸಿ ಅಮೆರಿಕ ಈತನ ಮೇಲೆ ಸೇಡು ಇಟ್ಟುಕೊಂಡಿತ್ತು. ಆ ದಶಕಗಳ ಸೇಡನ್ನ ಈಡೇರಿಸಿಕೊಂಡಿದ್ದೀವಿ.. ಲಾಡೆನ್‌ ರೀತಿನೇ ಈತನನ್ನೂ ನಾವು ಫಿನಿಶ್‌ ಮಾಡಿದ್ದೀವಿ. ನಮ್ಮ ತಂಟೆಗೆ ಬರೋರಿಗೆಲ್ಲಾ ಇದೆ ಗತಿ ಅಂತ ಅಮೆರಿಕ ಕಳೆದ ವರ್ಷ ದೊಡ್ಡ ದನಿಯಲ್ಲಿ ಹೇಳಿಕೊಂಡಿತ್ತು. ಆದ್ರೆ ಈಗ ಉಲ್ಟಾ ಹೊಡೆದಿದೆ. ಇನ್ನು ಇದಕ್ಕೆ ಪುಷ್ಠಿ ಕೊಡುವ ಹಾಗೆ ಕಳೆದ ಕೆಲದಿನಗಳ ಹಿಂದೆ ಜವಾಹಿರಿಯದು ಅಂತ ಹೇಳಲಾದ ವಿಡಿಯೋವೊಂದು ಫುಲ್‌ ಹರಿದಾಡ್ತಿತ್ತು. ಆದ್ರೆ ಇದು ಹಳೆ ವಿಡಿಯೋ ಇರಬೇಕು..ಜವಾಹಿರಿಯನ್ನ ಹೊಡೆದಿರೋದಾಗಿ ಅಮೆರಿಕ ಅಧ್ಯಕ್ಷರೇ ಹೇಳಿದ್ದಾರಲ್ಲ ಅಂತ ಮಾಧ್ಯಮಗಳು ವರದಿ ಮಾಡಿದ್ವು..ಈಗ ಖುದ್ದು ಅದೇ ಅಮೆರಿಕನೇ ಉಗ್ರನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಮನೆ ಮೇಲೆ ರೈಡ್ ಆಗಿಲ್ಲ,

Wed Jan 11 , 2023
ತೀರ್ಥಹಳ್ಳಿ:ಮನೆ ಮೇಲೆ ಅಥವಾ ಅವರ ಮನೆ ಬಳಿಯಿರುವ ಕಚೇರಿ ಮೇಲೆ ಯಾವುದೇ ತನಿಖಾ ಸಂಸ್ಥೆ ದಾಳಿ ನಡೆದಿಲ್ಲ. ಇದು ಬಿಜೆಪಿಯ ಕಪೋಲ ಕಲ್ಪಿತ ಸುದ್ದಿ ಎಂಬುದಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವ ರಾಷ್ಟ್ರೀಯ ತನಿಖಾ ತಂಡ ( NIA) ಹಾಗೂ ಜಾರಿ ನಿರ್ದೇಶನಾಲಯದ ( ED) ಅಧಿಕಾರಿಗಳು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ […]

Advertisement

Wordpress Social Share Plugin powered by Ultimatelysocial