ಮತ್ತೊಂದು ದಾಖಲೆ ಬರೆದ ಪವರ್ ಸ್ಟಾರ್ ಪುನೀತ್ ಅಭಿನಯದ ”ಜೇಮ್ಸ್” ಸಿನಿಮಾ!

ಬೆಂಗಳೂರು ಕನ್ನಡ ಚಿತ್ರರಂಗದಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಬಿಡುಗಡೆ ಆದ್ಮಲೇ ಒಂದಲ್ಲ ಒಂದು, ರೆಕಾರ್ಡ್​ಗಳನ್ನು ಮಾಡೋದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿದೆ‌. ಹೌದು ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯ ನಟರು, ಕನ್ನಡ ಚಿತ್ರಗಳ ಅದ್ದೂರಿ ಮೇಕಿಂಗ್ ಹಾಗೂ ಕ್ವಾಲಿಟಿ ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್‌ ಬಗ್ಗೆ ಮಾತನಾಡುತ್ತಿದ್ದಾರೆ.

ಅದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಕಾರಣ. ಆದರೆ, ಎರಡು ಸಿನಿಮಾಗಳು ಒಂದೊಂದು ರೀತಿಯಲ್ಲಿ ತನ್ನದೇ ರೆಕಾರ್ಡ್​ಗಳನ್ನು ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿವೆ. ಅಷ್ಟೆ ಅಲ್ಲ ಕನ್ನಡ ಸಿನಿಮಾಗಳ ತಾಕತ್ ಏನು ಎಂಬುದನ್ನು ತೋರಿಸಿ ಕೊಟ್ಟಿವೆ.

ಅದರಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಂಚೂಣಿಯಲ್ಲಿದೆ. ಯಶ್ ಈ ಚಿತ್ರದಲ್ಲಿ ತಾಯಿ ಕಂಡ ಆಸೆಯಂತೆ ಬದುಕಿದ, ರಾಕಿ ಬಾಯ್ ಆಗಿ ಅಬ್ಬರಿಸುವ ಮೂಲಕ ವಿಶ್ವಾದ್ಯಂತ 1000ಕ್ಕೂ ಹೆಚ್ಚು ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುವ ಮೂಲಕ ದಾಖಲೆ ಬರೆದಿದೆ. ಆದರೆ, ಪವರ್ ಸ್ಟಾರ್ ನಟನೆಯ ಜೇಮ್ಸ್ ಚಿತ್ರ, ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಆಗುವ ಮೂಲಕ ಕೆಜಿಎಫ್ ಚಾಪ್ಟರ್ 2,‌ ಸಿನಿಮಾವನ್ನು ಹಿಂದಿಕ್ಕುವ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

ಹೌದು ಸಿನಿಮಾ ಪ್ರದರ್ಶಕರ ಲೆಕ್ಕಾಚಾರದ ಪ್ರಕಾರ, ಈ ಹಿಂದೆ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ, 75 ಲಕ್ಷ ಟಿಕೆಟ್ ಮಾರಾಟ ಆಗಿತ್ತು. ಈ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಶ್ ಮುರಿಯುತ್ತಾರೆ ಅಂತಾ ಹೇಳಲಾಗಿತ್ತು, ಆದರೆ ಅದು ಆಗಿಲ್ಲ. ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬರೀ 75 ಲಕ್ಷ ಟಿಕೆಟ್ ಮಾತ್ರ ಮಾರಾಟ ಆಗಿದೆ.

ಆದರೆ, ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ನಟನೆಯ, ಕೊನೆಯ ಜೇಮ್ಸ್ ಚಿತ್ರ, ಕರ್ನಾಟಕದಲ್ಲಿ ಬರೋಬ್ಬರಿ ಒಂದು ಕೋಟಿಗೆ ಹೆಚ್ಚು ಟಿಕೆಟ್ ಮಾರಾಟ ಆಗುವ ಮೂಲಕ ದಾಖಲೆ ಬರೆದಿದೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಇತಿಹಾಸದಲ್ಲಿ ಒಂದು ಕೋಟಿಗೂ ಹೆಚ್ಚು ಟಿಕೆಟ್ ಮಾರಾಟ ಆದ ಮೊಟ್ಟ ಮೊದಲ ಸಿನಿಮಾ ಜೇಮ್ಸ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ' ಚಿತ್ರ ವಿಮರ್ಶೆ: ಮೊಬೈಲ್‌ ಕಂಟಕ ಪೋಷಕರಿಗೆ ಸಂಕಟ!

Sun May 15 , 2022
ಈಗಿನ ಕಾಲದ ಮಕ್ಕಳು ಎಷ್ಟು ಚೂಟಿ ಎಂಬುದನ್ನು ತಿಳಿದುಕೊಳ್ಳುವ ತವಕವಿದ್ದರೆ ಅವರ ಕೈಗೆ ಮೊಬೈಲ್‌ ಕೊಟ್ಟು ನೋಡಬೇಕು. ದೊಡ್ಡವರನ್ನೂ ಮೀರಿಸುವ ಮಟ್ಟಿಗೆ ಮೊಬೈಲ್‌ ಬಳಕೆಯಲ್ಲಿ ಪರಿಣಿತರಾಗಿರುತ್ತಾರೆ. ಆದರೆ ಅದರಿಂದಾಗುವ ಲಾಭವೇನು… ನಷ್ಟವೇನು..? ಮೊಬೈಲ್‌ ಬಳಕೆ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ..? ಅದರಿಂದಾಗುವ ಅನಾಹುತಗಳೇನು… ಇತ್ಯಾದಿ ವಿಷಯಗಳ ಮೇಲೆ “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಸಿನಿಮಾ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ. ಪೋಷಕರಿಗೇ ಚಳ್ಳೆ ಹಣ್ಣು […]

Advertisement

Wordpress Social Share Plugin powered by Ultimatelysocial