ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ ‘ಜೇಮ್ಸ್’ ಬಿಡುಗಡೆಯಾಗಲಿ ಎಂದು ಚಿತ್ರತಂಡ ಪ್ರಕಟ ಮಾಡಿದೆ.

 

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ ‘ಜೇಮ್ಸ್’ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಈ ಚಿತ್ರದ ಮೂಲಕ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ ‘ಜೇಮ್ಸ್’ ಬಿಡುಗಡೆಯಾಗಲಿ ಎಂದು ಚಿತ್ರತಂಡ ಪ್ರಕಟ ಮಾಡಿದೆ.ಸದ್ಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಪ್ಪು ಅವರನ್ನು ಈ ಟೀಸರ್‌ನಲ್ಲಿ ನೋಡಿ ಅಭಿಮಾನಿ ಬಳಗ, ಸಿನಿಮಾರಂಗ ಭಾವುಕತೆಯನ್ನು ವ್ಯಕ್ತ ಪಡಿಸುತ್ತಿದೆ.ಬಹು ನಿರೀಕ್ಷೆಯ ಸಿನಿಮಾ ‘ಜೇಮ್ಸ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಬೇರೆಯದ್ದೇ ಲೆವೆಲ್ ಸಿನಿಮಾವಿದು ಅಂತ ಟೀಸರ್ ನೋಡಿದ ಮೇಲೆ ಅನಿಸಿದೆ. ಪುನೀತ್ ರಾಜ್‌ಕುಮಾರ್ ಖಡಕ್ ಎಂಟ್ರಿ. ಪವರ್‌ಫುಲ್ ಅಯಕ್ಷನ್ ಸೀಕ್ವೆನ್ಸ್‌ ಚಿತ್ರದಲ್ಲಿ ಹೇಗೆ ಇರಲಿದೆ ಎನ್ನುವ ಬಗ್ಗೆ ಈ ಟೀಸರ್ ಹೇಳಿದೆ.ಟೀಸರ್‌ನಲ್ಲಿ ಒಂದು ಡೈಲಾಗ್ ಇದೆ. ನನಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎನ್ನುವ ಡೈಲಾಗ್. ಅಪ್ಪು ಅವರಿಗೆ ಶಿವಣ್ಣ ಧ್ವನಿ ನೀಡಿದ್ದಾರೆ. ಈ ಡೈಲಾಗ್‌ ಪುನೀತ್‌ ರಾಜ್‌ಕುಮಾರ್ ಅವರ ವಿಚಾರದಲ್ಲಿ ನಿಜ ಆಗಿ ಬಿಟ್ಟಿದೆ. ಟೀಸರ್ ರಿಲೀಸ್ ಆದ 60 ನಿಮಿಷದಲ್ಲಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಜೊತೆಗೆ 60 ನಿಮಿಷದೊಳಗೆ 1ಮಿಲಿಯನ್ ವೀವ್ಸ್ ಮತ್ತು 180 ಸಾವಿರ ಲೈಕ್ಸ್ ಪಡೆದುಕೊಂಡಿದೆ.ಅದರಲ್ಲೂ ಚೇಸಿಂಗ್, ಆಕ್ಷನ್, ಡೈಲಾಗ್ಸ್ ಪುನೀತ್‌ ರಾಜ್‌ಕುಮಾರ್ ನಾನಾ ಲುಕ್ ಎಲ್ಲವೂ ಮಸ್ತ್ ಎನಿಸುತ್ತೆ. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಬೇರೆಯದ್ದೇ ಅವತಾರ ತಾಳಿದ್ದಾರೆ. ಅಪ್ಪು ಸಿನಿಮಾಗಳಲ್ಲಿ ಈ ಜೇಮ್ಸ್ ಸಿನಿಮಾ ಮತ್ತಷ್ಟು ಪವರ್‌ಫುಲ್ ಆಗಿರುತ್ತೆ ಎನ್ನುವುದನ್ನು ಟೀಸರ್ ನೋಡಿಯೇ ಹೇಳಬಹುದು.ಟೀಸರ್ ರಿಲೀಸ್ ಆಗುತ್ತಿದ್ದ ಹಾಗೆ ಕನ್ನಡದ ಬಹುತೇಕ ಎಲ್ಲಾ ಕಲಾವಿದರು ಈ ಟೀಸರ್ ಹಂಚಿಕೊಂಡಿದ್ದಾರೆ. ಜೊತೆಗೆ ಅಪ್ಪು ಅವರನ್ನು ನೆನೆದು ತಮಗನ್ನಿಸಿದನ್ನು ಬರೆದು ಪೊಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ ನಿರ್ದೇಶಕ ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್, ಶಿವರಾಜ್ ಕುಮಾರ್, ಯುವ ರಾಜ್‌ಕುಮಾರ್, ಪವನ್ ಒಡೆಯರ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಇದ್ದಾರೆ.’ಜೇಮ್ಸ್’ ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ‘ಜೇಮ್ಸ್’ ಚಿತ್ರದ ಟೀಸರ್ ಅನ್ನು ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೂರು ಭಾಷೆಯಲ್ಲೂ ರಿಲೀಸ್ ಆಗಿರುವ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಲ್ಸ್ ರಾಯ್ಸ್ ಡಾನ್, ವ್ರೈತ್ ಆಸ್ಟ್ರೇಲಿಯಾದಲ್ಲಿ ನಿಧನರಾದರು;

Fri Feb 11 , 2022
ಆಸ್ಟ್ರೇಲಿಯಾದ ರೋಲ್ಸ್ ರಾಯ್ಸ್ ಡಾನ್ ಮತ್ತು ವ್ರೈತ್‌ನಲ್ಲಿ ಸೂರ್ಯ ಬೇಗನೆ ಅಸ್ತಮಿಸಿದ್ದಾನೆ. 2021 ರಲ್ಲಿ US ಮಾರುಕಟ್ಟೆಯಿಂದ ಹಿಂತೆಗೆದುಕೊಂಡ ನಂತರ ಸ್ಥಳೀಯವಾಗಿ ಆರ್ಡರ್ ಮಾಡಲು ಕೂಪ್ ಮತ್ತು ಕನ್ವರ್ಟಿಬಲ್ ಇನ್ನು ಮುಂದೆ ಲಭ್ಯವಿರುವುದಿಲ್ಲ. “2021 ರಲ್ಲಿ ದಾಖಲೆಯ ವರ್ಷದ ನಂತರ ಫ್ಯಾಂಟಮ್, ಕಲ್ಲಿನಾನ್, ಘೋಸ್ಟ್, ವ್ರೈತ್ ಮತ್ತು ಡಾನ್‌ಗೆ ಜಾಗತಿಕ ಬೇಡಿಕೆ ಮತ್ತು ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ” ಎಂದು ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಆಸ್ಟ್ರೇಲಿಯಾದ ವಕ್ತಾರರು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial