ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದ ಅಭಿಮಾನಿ.

ಮಂಗಳೂರು, ಜನವರಿ, 29: ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಸಾನಿಯಾ ಅಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ಪುತ್ತೂರಿನಲ್ಲಿ ನಡೆದಿದೆ‌.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಮೂವತ್ತನೇ ವರ್ಷದ ಕೋಟಿಚೆನ್ನಯ್ಯ ಜೋಡುಕರೆ ಕಂಬಳ ಕೂಟ ನಡೆಯುತ್ತಿದ್ದು, ಶನಿವಾರ ರಾತ್ರಿ ವಿಶೇಷ ಅಹ್ವಾನಿತರಾಗಿ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಾನಿಯಾ ಐ ಲವ್ ಯೂ ಪುತ್ತೂರು ಎಂಬ ವಾಕ್ಯದೊಂದಿಗೆನೇ ಭಾಷಣ ಆರಂಭಿಸಿದ್ದರು.‌

ಸಾನಿಯಾ ಕೈ ಹಿಡಿದು ಎಳೆದ ಅಭಿಮಾನಿ

ಈ ವೇಳೆ ಅಭಿಮಾನಿಯೋರ್ವ ಭಾಷಣದುದಕ್ಕೂ ಸಾನಿಯಾ ಐ ಲವ್ ಯೂ ಎಂದು ಕೂಗುತ್ತಿದ್ದ. ಭಾಷಣ ಮುಗಿಸಿ ಕಾರ್ಯಕ್ರಮದಿಂದ ನಿರ್ಗಮಿಸಲು ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ ಅಭಿಮಾನಿ ಸೆಲ್ಫಿಗಾಗಿ ಸಾನಿಯಾ ಕೈ ಹಿಡಿದಿದ್ದಾನೆ‌. ಇದರಿಂದ ಮುಜುಗರಕೊಳ್ಳಗಾದ ಸಾನಿಯಾ ಸೆಲ್ಫಿಯನ್ನು ತಿರಸ್ಕರಿಸಿ ತೆರಳಿದ್ದಾರೆ.

ಮದ್ಯದ ನಶೆಯಲ್ಲಿ ಅಭಿಮಾನಿ ಕೃತ್ಯ

ಅಭಿಮಾನಿ ಮದ್ಯದ ನಶೆಯಲ್ಲಿ ಕೃತ್ಯ ಎಸಗಿದ್ದು, ಸಾನಿಯಾ ಭಾಷಣದುದ್ದಕ್ಕೂ ಆಭಾಸಗೊಳ್ಳುವಂತೆ ವರ್ತಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಈ ವ್ಯಕ್ತಿ ಜನರಿಗೆ ಕಿರಿಕಿರಿಯಾಗುವಷ್ಟು ತೊಂದರೆ ಮಾಡಿದ್ದಾನೆ. ನಂತರ ಸಾನಿಯಾ ತೆರಳುತ್ತಿದ್ದಂತೆಯೇ ಸ್ಥಳೀಯ ಯುವಕರು ಪಾನಮತ್ತ ಅಭಿಮಾನಿಗೆ ಧರ್ಮದೇಟು ನೀಡಿ ಕಂಬಳದಿಂದ ಹೊರಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭ್ಯವಾಗಿದೆ. ಆದರೆ ಯಾರೂ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕ್ರಮವಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.

ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ

ಅದಕ್ಕೂ ಮುನ್ನ ವೇದಿಕೆಯಲ್ಲಿ ಭಾಷಣ ಮಾಡಿದ ನಟಿ ಸಾನಿಯಾ ಅಯ್ಯರ್, ನನಗೆ ತುಳು ಬರುವುದಿಲ್ಲ. ಆದರೆ ನನಗೆ ತುಳು ಭಾಷೆ ಅಂದರೆ ತುಂಬಾ ಇಷ್ಟ. ಕಂಬಳ ಕೇವಲ ಸಾಂಸ್ಕೃತಿಕ ಕಲೆ ಅಥವಾ ಕ್ರೀಡೆ ಅಲ್ಲ‌. ಕಂಬಳ ಎನ್ನುವುದು ಜೀವನದ ಮೌಲ್ಯವಾಗಿದೆ. ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳ ಹಿಂದೆ ಪಾಠಗಳಿವೆ ಎಂದು ಹೇಳಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದ ಸಿರಿಧಾನ್ಯಗಳನ್ನು ಅಪ್ಪಿಕೊಂಡ ಪ್ರಧಾನಿ ಮೋದಿ.

Sun Jan 29 , 2023
ನವದೆಹಲಿ: ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವ ಅಭಿಯಾನಗಳಲ್ಲಿ ಜನರು ವ್ಯಾಪಕವಾಗಿ ಭಾಗವಹಿಸುತ್ತಿರುವುದರಿಂದ ಹೊಸ ಕ್ರಾಂತಿಯು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ. ‘ಜನರು ಎರಡೂ ಅಭಿಯಾನಗಳಲ್ಲಿ ಭಾಗವಹಿಸುತ್ತಿರುವುದರಿಂದ ಕ್ರಾಂತಿ ನಡೆಯುತ್ತಿದೆ. ಜನರು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ಫಿಟ್ ನೆಸ್ ಅನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ; ಅಂತೆಯೇ ಜನರು ದೊಡ್ಡ ಪ್ರಮಾಣದಲ್ಲಿ […]

Advertisement

Wordpress Social Share Plugin powered by Ultimatelysocial