ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್​ ಶೆಟ್ಟಿ ಬಿಚ್ಚಿಟ್ಟ ರೀಲ್​ ಮತ್ತು ರಿಯಾಲಿಟಿ

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಅವರ ಕೊನೇ ಚಿತ್ರ ಜೇಮ್ಸ್​ ಸಿನಿಮಾ ನೋಡಿದವರಿಗೆ ಈಗಾಗಲೇ ರೀಲ್​ ಮತ್ತು ರಿಯಾಲಿಟಿ ರಹಸ್ಯ ಗೊತ್ತಾಗಿರುತ್ತೆ. ಯಾರೂ ಊಹಿಸಿರದ, ಅನಿರೀಕ್ಷಿತ ದುರ್ಘಟನೆಯೊಂದು ಸಂಭವಿಸಿ ಹೋಗಿದೆ. ಅಪ್ಪು ನಮ್ಮನ್ನು ಅಗಲಿ 4 ತಿಂಗಳು ಕಳೆದರೂ ಅಭಿಮಾನಿಗಳ ಮನದಲ್ಲಿ ಮಡುಗಟ್ಟಿರುವ ನೋವು ಇನ್ನೂ ಕರಗಿಲ್ಲ.

ಅಪ್ಪು ಅವರ ಕೊನೇ ಚಿತ್ರ ಜೇಮ್ಸ್​ ಮಾ.17ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಭಾರವಾದ ಮನಸ್ಸಿನಲ್ಲೇ ಸಿನಿಮಾ ನೋಡುತ್ತಿದ್ದಾರೆ. ಅಪ್ಪು ನೆನೆದು ಕಣ್ಣೀರಿಡುತ್ತಿದ್ದಾರೆ. ಈ ನೋವು ಜೇಮ್ಸ್​ ತಂಡಕ್ಕೂ ಹೊರತಾಗಿಲ್ಲ. ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸ್ನೇಹಿತನ ಪಾತ್ರ ಮಾಡಿರುವ ನಟ ಶೈನ್​ ಶೆಟ್ಟಿ ‘JAMES’ನ ರೀಲ್​ ಮತ್ತು ರಿಯಲ್​ ರಹಸ್ಯ ಬಿಚ್ಚಿಟ್ಟಿದ್ದಾರೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಶೈನ್​ ಶೆಟ್ಟಿ, ‘ಜೇಮ್ಸ್​ ಸಿನಿಮಾದಲ್ಲಿ ನಾವು ಐದು ಜನ J.A.M.E.S.(ಜೇಮ್ಸ್​) ಸ್ನೇಹಿತರು. ಅದರಲ್ಲಿ ‘S’ ಅಂದ್ರೆ ಸಂತೋಷ್​. ನಾವು ನಾಲ್ಕು ಜನ(J.A.M.E.) ಸತ್ತೋಗ್ತೀವಿ. ಅಪ್ಪು ಸರ್(ಸಂತೋಷ್​)​ ಒಬ್ಬರು ಉಳಿದುಕೊಳ್ತಾರೆ. ನಿಜ ಜೀವನದಲ್ಲಿ ನಾವು ನಾಲ್ಕು ಜನ ಉಳ್ಕೊಂಡಿದ್ದೀವಿ. ಆದರೆ ಅಪ್ಪು ಸರ್​ ಇಲ್ಲ. ಪ್ರೀ ರಿಲೀಸ್​ ಕೂಡ ಅದೇ ಗ್ರೌಂಡ್​ನಲ್ಲಿ ಆಯ್ತು…’ ಎನ್ನುತ್ತಲೇ ಭಾವುಕರಾದರು.

‘ಜೇಮ್ಸ್​ ಸಿನಿಮಾ ಶೂಟಿಂಗ್​ ನನಗೆ ಶೂಟಿಂಗ್​ ಅನ್ನಿಸಲೇ ಇಲ್ಲ. ನಾವೆಲ್ಲ ಅಪ್ಪು ಸರ್​ ಜತೆ 13 ದಿನ ಇದ್ವಿ ಅನ್ನಿಸುತ್ತಿತ್ತು. ನಾನು ಅಪ್ಪು ವ್ಯಕ್ತಿತ್ವಕ್ಕೆ ನಾನು ಅಭಿಮಾನಿ ಆದೆ. ಪುನೀತ್​ ಸರ್ ಜತೆ ಶುರುವಾದ ನನ್ನ ಜರ್ನಿ ಕೊನೆಗೆ ಅಪ್ಪು ಅಣ್ಣಾ ಎನ್ನುವ ತನಕ ಬಂತು. ಅವರ ಮೊದಲ ನೋಟದಲ್ಲೇ ಇಂಪ್ರೆಷನ್​ ಆಗಿಬಿಡ್ತೀವಿ. ‘ಏನ್​ ಮಾಡ್ತಾ ಇದ್ದೀರಿ ಶೈನ್​ ನೀವು?’ ಅಂತ ಅಪ್ಪು ಸರ್​ ಕೇಳಿದ್ರು. ಸಣ್ಣದೊಂದು ಹೋಟೆಲ್​ ಮಾಡಿದ್ದೀನಿ, ದಸರಾ ಹಬ್ಬದ ದಿನ ಉದ್ಘಾಟನೆ ಇದೆ ಅಂದೆ. ‘ಓಹ್​ ನೀವು ನನ್ನ ಕರೆಯಲ್ವಾ’ ಅಂದ್ರು. ಸರ್​ ದೊಡ್ಡ ಹೋಟೆಲ್​ ಮಾಡಿದಾಗ ಕರೀತಿನಿ ಅಂದೆ. ‘ಹೇ ಇದಕ್ಕೂ ಬರ್ತೀನಿ’ ಅಂದ್ರು. ನನಗೆ ಖುಷಿ ಜತೆಗೆ ಶಾಕ್​ ಆಯ್ತು. ದೊಡ್ಡ ನಟ ನನ್ನ ಹೋಟೆಲ್​ಗೆ ಬಂದು ಉದ್ಘಾಟನೆ ಮಾಡಿದ್ರು… ಇದು ನನ್ನ ಪುಣ್ಯ’ ಎನ್ನುತ್ತಲೇ ಶೈನ್​ ಶೆಟ್ಟಿ ಭಾವುಕರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಡದಿಯ ತೋಟದಲ್ಲಿ 3,000 ನಾಟಿ ಕೋಳಿಗಳನ್ನು ಸಾಕುತ್ತಿದ್ದೇನೆ : ಎಚ್‌ಡಿಕೆ

Fri Mar 18 , 2022
ಬೆಂಗಳೂರು: ಕುಕ್ಕುಟೋದ್ಯಮದಲ್ಲಿ ಸಣ್ಣ ಪ್ರಮಾಣದ ಕೋಳಿ ಸಾಕಣೆದಾರರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.ಶಾಸಕರ ಭವನದಲ್ಲಿಂದು ಕೋಳಿ ಸಾಕಣೆದಾರರ ಸಮಸ್ಯೆಗಳ ಕುರಿತಾದ ರಾಜ್ಯದ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; “ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಬಲೀಕರಣ ಹಾಗೂ ನಿರುದ್ಯೋಗವನ್ನು ಹತ್ತಿಕ್ಕುವ ಶಕ್ತಿಯುಳ್ಳ ಕೋಳಿ ಸಾಕಣೆಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.ಸದ್ಯಕ್ಕೆ ಕುಕ್ಕುಟೋದ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, […]

Advertisement

Wordpress Social Share Plugin powered by Ultimatelysocial