ಜಾತ್ರೆಯಲ್ಲಿ ಕೈ ಹಿಡಿದು ಎಳೆದಾಡಿದ ಯುವಕ: ನೊಂದ ಯುವತಿ ಆತ್ಮಹತ್ಯೆ!.

ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆಂದು ನೊಂದ ಯುವತಿ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ. ಸಂಕೋನಟ್ಟಿ ಗ್ರಾಮದ ಸ್ವಪ್ನಾ ಸುಭಾಷ ಹಿಪ್ಪರಗಿ (19) ಆತ್ಮಹತ್ಯೆಗೆ ಶರಣಾಗಿದ್ದಾಳೆ.ಸಂಕೋನಟ್ಟಿ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಆಕೆಯ ಕೈ ಹಿಡಿದು ಎಳೆದಾಡಿದ ಯುವಕ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಕೇಳಿದ್ದರು. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ತಂದೆ ಸುಭಾಷ ಹೇಳಿದ್ದರು.ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳ ಕೈ ಹಿಡಿದು ಎಳೆದಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ .

Mon Jan 30 , 2023
ಅವಧಿ ಮೀರಿ ಬಾರ್ ನಡೆಸುತ್ತಿದ್ದ ಹಿನ್ನಲೆ ದಾಳಿ ದೊಮ್ಮಲೂರು ಬಳಿ ಇರುವ ರೆಸ್ಟೋರೆಂಟ್ ಮೇಲೆ ತಡರಾತ್ರಿ ದಾಳಿ ಕ್ರೇಜಿ ಬಾಯ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ಒಟ್ಟು ಹತ್ತು ಜನ ಸಿಸಿಬಿ ಅಧಿಕಾರಿಗಳಿಂದ ನಡೆದ ದಾಳಿ ಅವಧಿ ಮೀರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಾಹಿತಿ ಹಿನ್ನಲೆ ರೈಡ್ ಮಾಡಿದ ಸಿಸಿಬಿ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial