ಈ ವರ್ಷ ತೆರೆ ಮೇಲೆ ಬರ್ತಿದೆ ಸೂಪರ್​ ಸ್ಟಾರ್​ಗಳ ಸಿನಿಮಾ!

2022ರಲ್ಲಿ ಅನೇಕ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದು, ದೇಶ-ವಿದೇಶಗಳಲ್ಲೂ ಭಾರೀ ಸದ್ದು ಮಾಡಿತ್ತು. ಹೊಸ ವರ್ಷದ ಆರಂಭದಲ್ಲೇ ಸಾಲು ಸಾಲು ಸಿನಿಮಾಗಳು (Movies 2023) ರಿಲೀಸ್​ಗೆ ರೆಡಿಯಾಗಿದೆ. 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿ ರಿಲೀಸ್ ಮಾಡಿದೆ.

ಕಳೆದ ವರ್ಷ ಬಾಲಿವುಡ್​ (Bollywood Movie) ಭಾರೀ ಒಡೆತ ತಿಂದಿದೆ. ಸ್ಟಾರ್ ನಟರ ಸಿನಿಮಾಗಳೇ ನೆಲ ಕಚ್ಚಿತ್ತು. ಯಾವ ಸಿನಿಮಾ ಕೂಡ ಹೇಳಿಕೊಳ್ಳುವ ಕಲೆಕ್ಷನ್ ಮಾಡಲಿಲ್ಲ. ಮತ್ತೊಂದೆಡೆ ಬಾಯ್ಕಾಟ್​ ಬಾಲಿವುಡ್​ಗೆ ಅನೇಕ​ ಸಿನಿಮಾಗಳು ಬಲಿಯಾದವು. ಸೌತ್​ ಸಿನಿಮಾಗಳು ಕಳೆದ ವರ್ಷ ಸಖತ್ ಸದ್ದು ಮಾಡಿದೆ. ಕೆಜಿಎಫ್, RRR ಸಿನಿಮಾ ದೇಶ ವಿದೇಶಗಳು ದಾಖಲೆ ಬರೆಯಿತು. ಕಾಂತಾರ ಸಿನಿಮಾ ಬಾಲಿವುಡ್​ ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ವರ್ಷ ಬಾಲಿವುಡ್​ ನ ಅನೇಕ ಸಿನಿಮಾಗಳು ತೆರೆಗೆ ಬರಲಿದ್ದು, ಬಿಗ್​ ಬಜೆಟ್​ ನಲ್ಲಿ ತಯಾರಾಗ್ತಿರುವ ಸೌತ್ ಸಿನಿಮಾಗಳು (South Movie) ಕೂಡ ಈ ವರ್ಷ ರಿಲೀಸ್​ ಆಗಲು ರೆಡಿಯಾಗಿವೆ. ಐಎಂಡಿಬಿ ಸಂಸ್ಥೆ ಈ ವರ್ಷ ರಿಲೀಸ್​ ಆಗುತ್ತಿರುವ ಭಾರತೀಯ ಸಿನಿಮಾಗಳ 20 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ (IMDb) ರಿಲೀಸ್ ಮಾಡಿದೆ.ಪಠಾಣ್, ಜವಾನ್​: ಬಾಲಿವುಡ್​ ಬಾದ್ ಷಾ ಶಾರುಖ್ ಖಾನ್​ ಅಭಿನಯದ ಪಠಾಣ್​ ಸಿನಿಮಾ ಜನವರಿ 25 ರಂದು ರಿಲೀಸ್​ ಆಗಲಿದೆ. ಶಾರುಖ್​ಗೆ ನಟಿ ದೀಪಿಕಾ ಪಡುಕೊಣೆ ಜೋಡಿಯಾಗಿದ್ದು, ಚಿತ್ರದ ಬೇಷರಂ ಹಾಡು ಬಿಡುಗಡೆ ಆದಾಗಿಲಿಂದಲೂ ಭಾರೀ ವಿವಾದ ಸೃಷ್ಟಿಸಿದೆ. ಚಿತ್ರವನ್ನು ಬ್ಯಾನ್ ಮಾಡ್ಬೇಕು ಎನ್ನುವ ಕೂಗು ಕೇಳಿ ಬಂದಿದೆ. 4 ವರ್ಷದ ಬಳಿಕ ತೆರೆ ಮೇಲೆ ಬರ್ತಿರುವ ಶಾರುಖ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಶಾರುಖ್ ಅಭಿನಯದ ಮತ್ತೊಂದು ಸಿನಿಮಾ ಜವಾನ್ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ.ಟೈಗರ್ 3 : ಸಲ್ಮಾನ್ ಖಾನ್ ಬಹುನಿರೀಕ್ಷಿತ ಸಿನಿಮಾ ಟೈಗರ್ 3 ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ, ಏಪ್ರಿಲ್ 21 ರಂದು ಸಿನಿಮಾ ರಿಲೀಸ್ ಮಾಡೋದಾಗಿ ಘೋಷಣೆ ಮಾಡಲಾಲಿದೆ. ಏಕ್ ಥಾ ಟೈಗರ್ ಸಿನಿಮಾ ರಿಲೀಸ್ ಆಗಿ 10 ವರ್ಷ ಪೂರೈಸುತ್ತಿರುವ ಹಿನ್ನೆಲೆ ಇದೇ ವರ್ಷ ಟೈಗರ್ 3 ಕೂಡ ಇದೆ ವರ್ಷ ರಿಲೀಸ್ ಆಗಲಿದೆ.
ಸಲಾರ್​: ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ‘ಸಲಾರ್‌’ ಸಿನಿಮಾ ತಯಾರಾಗುತ್ತಿದೆ. ಹೊಂಬಾಳೆ ಸಿನಿಮಾ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ಕೂಡ ಸೆಪ್ಟೆಂಬರ್​ 28 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ. ತೆರೆ ಮೇಲೆ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.
ಪುಪ್ಪ-2:ಪುಪ್ಪ ದಿ ರೈಸ್​ 2021ರಲ್ಲಿ ತೆರೆ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಪುಪ್ಪ ಪಾರ್ಟ್ 2 ಸಿದ್ದವಾಗ್ತಿದೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ ಕೂಡ ಇದೆ ವರ್ಷ ತೆರೆಗೆ ಬರಲು ರೆಡಿಯಾಗಿದೆ.
ತಮಿಳು ಸಿನಿಮಾ:ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಕೂಡ ಇದೇ ವರ್ಷ ರಿಲೀಸ್ ಆಗಲಿದೆ. ತಮಿಳಿನ ದಳಪತಿ ವಿಜಯ್ ಅಭಿನಯದ ವರಿಸು ಸಿನಿಮಾ ಜನವರಿ 11 ಕ್ಕೆ ರಿಲೀಸ್ ಆಗಲಿದೆ. ಪೊನ್ನಿಯಿನ್ ಸೆಲ್ವನ್​ 2 ಸಿನಿಮಾ ಕೂಡ ಇದೆ ವರ್ಷ ತೆರೆಗೆ ಬರಲು ರೆಡಿಯಾಗಿದೆ.ಸಿನಿಮಾಗಳ ಲಿಸ್ಟ್​ ಕಮಲ್ ಹಾಸನ್ ಅಭಿನಯದ ಇಂಡಿಯನ್ ಮೂವಿ, ಪ್ರಭಾಸ್ ಅಭಿನಯದ ಆದಿಪುರುಷಲು ಹಾಗೂ ಅಜಿತ್ ಅಭಿನಯದ ತುಣಿವು ಸಿನಿಮಾ ಕೂಡ ಇದೇ ವರ್ಷ ತೆರೆಗೆ ಬರಲು ರೆಡಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಬಾರಿಗೆ ಅಮೇರಿಕಾದಲ್ಲಿ ಜಡ್ಜ್.

Mon Jan 9 , 2023
  (ನ್ಯೂಸ್ ಕಡಬ)  ಅಮೆರಿಕ, ಜ.09. ಭಾರತೀಯ ಮೂಲದ ಸಿಖ್ ಮಹಿಳೆಯೊಬ್ಬರು ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದು, ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಮೊದಲ ಸಿಖ್ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ. ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ […]

Advertisement

Wordpress Social Share Plugin powered by Ultimatelysocial