ನಿಖಿಲ್‌ಗಾಗಿ ಅನಿತಾ ಕುಮಾರಸ್ವಾಮಿ ತ್ಯಾಗ – ರಾಮನಗರದಿಂದ ನಿಖಿಲ್ ಸ್ಪರ್ಧೆ ಖಚಿತ

ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜಕೀಯ ಗೆಲುವು ತಂದುಕೊಟ್ಟ ಕ್ಷೇತ್ರದಿಂದಲೇ ಇದೀಗ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ರೆಡಿಯಾಗಿದ್ದಾರೆ. ಅನಿತಾ ಕುಮಾರಸ್ವಾಮಿ ಶಾಸಕಿಯಾಗಿರುವ ರಾಮನಗರ ಕ್ಷೇತ್ರವನ್ನ ಈ ಭಾರಿ ಮಗನಿಗೆ ತ್ಯಾಗ ಮಾಡೋದಕ್ಕೆ ರೆಡಿಯಾಗಿದ್ದು, 2023ರ ವಿಧಾನಸಭಾ ಚುನಾವಣೆಗೆ ರಾಮನಗರದಿಂದ ನಿಖಿಲ್‌ ಸ್ಪರ್ಧೆ ಮಾಡಲಿದ್ದಾರೆ. ಈ ಕುರಿತಂತೆ ಈ ಹಿಂದೆಯೇ ಕುಮಾರಸ್ವಾಮಿ ಸುಳಿವು ಕೊಟ್ಟಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ , ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ 1ಲಕ್ಷಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದರು. ನಿಖಿಲ್‌ಗೆ ರಾಜಕೀಯ ಭವಿಷ್ಯ ಕಲ್ಪಿಸಬೇಕು ಎಂದು ಹೊರಟಿದ್ದಈ ಸೋಲು ದೇವೇಗೌಡ್ರು ಹಾಗೂ ಕುಮಾರಸ್ವಾಮಿಯವರಿಗೆ ಭಾರೀ ಆಘಾತ ತಂದಿತ್ತು.

 

ನಿಖಿಲ್‌ ರಾಜಕೀಯ ಗೆಲುವು ಅನಿವಾರ್ಯ

ಈಗಾಗಲೇ ಗೌಡರ ಕುಟುಂಬದಿಂದ ಪ್ರತಿಯೊಬ್ಬರೂ ರಾಜಕೀಯಕ್ಕೆ ಬಂದಿದ್ದಾರೆ ಎಲ್ಲರೂ ರಾಜಕೀಯವಾಗಿ ನೆಲೆಕಂಡಿದ್ದಾರೆ, ಗುರುತಿಸಿಕೊಂಡಿದ್ದಾರೆ. ದೇವೇಗೌಡ್ರು ಪ್ರಧಾನಿಯಾಗಿದ್ರು.ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದರು. ಸದ್ಯಕ್ಕೆ ಚನ್ನಪಟ್ಟಣ ಶಾಸಕರಾಗಿದ್ದಾರೆ. ಹೆಷ್ಚ್‌ ಡಿ ರೇವಣ್ಣ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕಿ, ರೇವಣ್ಣ ಪತ್ನಿ ಭವಾನಿ ರೇವಣ್ಣ ಮಾಜಿ ಜಿಲ್ಲಾ ಪಂ.ಸದಸ್ಯೆ, ರೇವಣ್ಣ ಒಬ್ಬ ಪುತ್ರ ಪ್ರಜ್ವಲ್‌ ರೇವಣ್ಣ ಸಂಸದರಾಗಿದ್ರೆ ಮತ್ತೊಬ್ಬ ಪುತ್ರ ಸೂರಜ್‌ ರೇವಣ್ಣ ವಿಧಾನ ಪರಿಷತ್‌ ಸದಸ್ಯ

ಕುಟುಂಬದಲ್ಲಿ ನಿಖಿಲ್‌ ಒಬ್ಬರೇ ರಾಜಕೀಯವಾಗಿ ನೆಲೆಕಂಡಿಲ್ಲ. ಇಷ್ಟು ದಿನ ಸಿನಿಮಾಗಳಲ್ಲಿ ಬ್ಯುಸಿ ಇದ್ದ ನಿಖಿಲ್‌ ರಾಜಕೀಯದತ್ತ ಮುಖ ಮಾಡಿದ್ದಾರೆ. ಸಿನಿಮಾ ರಾಜಕೀಯ ಎರಡರಲ್ಲೂ ಆಸಕ್ತಿ ಇರೋ ನಿಖಿಲ್‌ ಮೊದಲ ಆದ್ಯತೆ ರಾಜಕೀಯ ಎಂದಿದ್ದಾರೆ. ಹಾಗಾಗಿ ನಿಖಿಲ್‌ಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವ ಸಲುವಾಗಿ ಈ ಬಾರಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿರುವ ಕ್ಷೇತ್ರದಿಂದ ನಿಖಿಲ್‌ ಸ್ಪರ್ಧೆಗೆ ಇಳಿಯಲಿದ್ದಾರೆ.

ರಾಮನಗರ ಜನ ಜೆಡಿಎಸ್‌ ಕೈ ಬಿಡಲ್ಲ

ರಾಮನಗರಕ್ಕೂ ಜೆಡಿಎಸ್‌ಗೂ ಅವಿನಾಭಾವ ಸಂಬಂಧ. ಜೆಡಿಎಸ್‌ ಸ್ಪರ್ಧಿಗೆ ಅಲ್ಲಿ ಗೆಲುವು ಖಚಿತ ಅದರಲ್ಲೂ ದೇವೇಗೌಡರ ಕುಟುಂಬದಿಂದ ಯಾರೇ ನಿಂತರೂ ಅವರನ್ನ ರಾಮನಗರ ಜನತೆ ಕೈಬಿಡಲ್ಲ. ಉದಾಹರಣೆಗೆ ಕಳೆದ ಬಾರಿ ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆಗ ಒಂದು ಕ್ಷೇತ್ರದ ಆಯ್ಕೆ ಬಂದಾಗ ಚನ್ನಪಟ್ಟಣ ಆಯ್ಕೆ ಮಾಡಿಕೊಂಡು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರು. ಆಗ ನಡೆದ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನ ಜೆಡಿಎಸ್‌ನಿಂದ ಕಣಕ್ಕಿಳಿಸಿದಾಗ ರಾಮನಗರದಿಂದ ಗೆದ್ದು ಬರ್ತಾರೆ. ಇದೇ ನಂಬಿಕೆ ಮೇರೆಗೆ ನಿಖಿಲ್‌ ಕುಮಾರಸ್ವಾಮಿಯರನ್ನ ಈ ಕ್ಷೇತ್ರದಿಂದ ಕಣಕ್ಕಿಳಿಸೋದಕ್ಕೆ ತಯಾರಿ ನಡೆಸಿದ್ದು, ತಾತ, ಅಪ್ಪನಂತೆಯೇ ಮೊಮ್ಮಗನ ಕೈ ಹಿಡಿತಾರಾ ರಾಮನಗರ ಜನತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಶಾಸಕ ಸಂಸದರ ಮಧ್ಯೆ ಅಸಮಾಧಾನ –ಬಿಜೆಪಿಯಲ್ಲಿ ಶುರುವಾಯ್ತಾ ಬಂಡಾಯ

Sat Dec 17 , 2022
ಹೆಚ್‌ ವಿಶ್ವನಾಥ್‌ ವಿರುದ್ಧ ಸಂಸದ ಶ್ರೀನಿವಾಸ್‌ ಗಂಭಿರ ಆರೋಪ ಮಾಡಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ವಿಶ್ವನಾಥ್‌ 15 ಕೋಟಿ ತೆಗೆದುಕೊಂಡ್ರು 4-5 ಕೋಟಿ ಖರ್ಚು ಮಾಡಿ ಇನ್ನುಳಿದ 10 ಕೋಟಿ ಮನೆಗೆ ತೆಗೆದುಕೊಂಡು ಹೋದ್ರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಡಿಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೇ ಬಿಜೆಪಿ ಸಂಸದರು ಈ ರೀತಿ ಆರೋಪ ಮಾಡಿರೋದು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು. […]

Advertisement

Wordpress Social Share Plugin powered by Ultimatelysocial