ಭಾರತ್ ಜೋಡೊ ಸಮಾರೋಪಕ್ಕೆ ಗೈರಾಗಲಿರುವ ಜೆಡಿಯು.

ಹೊಸದಿಲ್ಲಿ: ಶ್ರೀನಗರದಲ್ಲಿ ಈ ತಿಂಗಳ 30ರಂದು ನಡೆಯುವ ಭಾರತ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಲಲನ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ರಾಜಕೀಯ ಕಾರ್ಯಕ್ರಮ ಪೂರ್ವನಿಗದಿಯಾಗಿರುವ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಲವು ಬಿಜೆಪಿಯೇತರ ಪಕ್ಷಗಳನ್ನು ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್ ಆಹ್ವಾನಿಸಿದ್ದರೂ, ಎಷ್ಟು ಪಕ್ಷಗಳು ಭಾಗವಹಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ. 2024ರ ಲೋಕಸಭಾ ಚುನಾವಣೆಗೆ ಸಜ್ಜಾಗಲು ಪಕ್ಷದ ಸಂಘಟನಾತ್ಮಕ ಪುನಶ್ಚೇತನಕ್ಕೆ ಇದು ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯೇತರ ಒಕ್ಕೂಟ ರಚನೆ ಬಗ್ಗೆ ಭಿನ್ನಾಭಿಪ್ರಾಯ ಇರುವ ನಡುವೆಯೇ ಹಲವು ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದಾಗಿ ಸ್ಪಷ್ಟಪಡಿಸಿವೆ.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಸಂಯುಕ್ತ ಜನತಾದಳ ಈ ಹಿಂದೆ ಘೋಷಿಸಿರುವ ಹಿನ್ನೆಲೆಯಲ್ಲಿ ಜೆಡಿಯು ನಡೆ ಕುತೂಹಲ ಮೂಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡೂರಿನಲ್ಲಿ "ಕವಡೆ" ಆಟ ಶುರು .

Fri Jan 27 , 2023
“ಕವಡೆ” ಇದೊಂದು ದೇಸಿ ಕ್ರೀಡೆ‌. ಗ್ರಾಮೀಣ ಭಾಗದಲ್ಲಂತೂ ಈ ಆಟ ಹೆಚ್ಚು ಜನಪ್ರಿಯ. ಈಗ “ಕವಡೆ” ಹೆಸರಿನ ಚಿತ್ರವೊಂದು ಆರಂಭವಾಗಿದೆ.ಈ ಹಿಂದೆ “ಜಾಡಘಟ್ಟ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ, ಜೊತೆಗೆ ನಾಯಕನಾಗೂ ಅಭಿನಯಿಸಿದ್ದ ರಘು ಎಸ್ ಈ “ಕವಡೆ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಮಣಿ ನಿರ್ಮಿಸುತ್ತಿದ್ದಾರೆ.ಶ್ರೀ ಕ್ಷೇತ್ರ ದುರ್ಗಾಸ್ಥಳ ರಾಮದುರ್ಗ ಗುರುಗಳ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ದುರ್ಗಾಸ್ಥಳದಲ್ಲಿ ಇತ್ತೀಚೆಗೆ ಚಿತ್ರೀಕರಣ ಆರಂಭವಾಯಿತು. ರಘು ಅವರ ಸಹೋದರ ಭೀರೇಶ್ ಎಂ ಎಸ್ ಕ್ಯಾಮೆರಾ […]

Advertisement

Wordpress Social Share Plugin powered by Ultimatelysocial