SMARTPHONE:ಒಪ್ಪೋ ರೆನೋ 7 ಪ್ರೊ ಮತ್ತು ರೆನೋ 7 ಸ್ಮಾರ್ಟ್‌ಫೋನ್‌ ಬಿಡುಗಡೆ;

ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಖರೀದಿಗೆ ಸಿಗುತ್ತಿದೆ. ಇದರ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ 39,999ರೂ. ಬೆಲೆ ನಿಗದಿ ಮಾಡಲಾಗಿದೆ.ಭಾರತದಲ್ಲಿ ಮೊನ್ನೆಯಷ್ಟೆ ಒಪ್ಪೋ ಕಂಪನಿ ತನ್ನ ರೆನೋ ಸರಣಿಯ ಅಡಿಯಲ್ಲಿ ಎರಡು ಹೊಸ ಒಪ್ಪೋ ರೆನೋ 7 ಪ್ರೊ ಮತ್ತು ರೆನೋ 7 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ರೆನೋ 7 ಪ್ರೊ ಮತ್ತು ಒಪ್ಪೋ ರೆನೋ 7  ಸ್ಮಾರ್ಟ್‌ಫೋನ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿರುವ ರೆನೋ 7ಪ್ರೊ ಸ್ಮಾರ್ಟ್‌ಫೋನ್‌ (Smartphone) ಇದೀಗ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಸೇಲ್ ಲೈವ್ ಆಗಿದೆ. ಹಾಗಾದ್ರೆ ಒಪ್ಪೋ ರೆನೋ 7 ಪ್ರೊ ಫೋನಿನ ವಿಶೇಷತೆ ಏನು?, ಎಷ್ಟು ಬೆಲೆ?, ಆಫರ್​ಗಳು ಏನೇನಿವೆ ಎಂಬುದನ್ನು ನೋಡುವುದಾದರೆ.

ಏನು ವಿಶೇಷತೆ?:

ಒಪ್ಪೋ ರೆನೋ 7ಪ್ರೊ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 1 ಆಧಾರಿತ ಕಲರ್‌ ಒಎಸ್‌ 12ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM + 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ imx709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಬೆಲೆ – ಆಫರ್:

ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಖರೀದಿಗೆ ಸಿಗುತ್ತಿದೆ. ಇದರ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ 39,999ರೂ. ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಫೋನ್ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಬರುತ್ತದೆ. ನೋ ಕಾಸ್ಟ್ ಇಎಮ್​ಐ ಆಯ್ಕೆಯಲ್ಲಿ ಈ ಫೋನನ್ನ ನೀವು 6,667 ರೂ. ಗೆ ಖರೀದಿಸಬಹುದು. ಅಂತೆಯೆ ಶೇ. 10 ರಷ್ಟು ಆಯ್ದ ಬ್ಯಾಂಕ್​ಗಳಿಗೆ ಡಿಸ್ಕೌಂಟ್ ಕೂಡ ಇದೆ.

ಇದರ ಜೊತೆ ಬಿಡುಗಡೆ ಆದ ಒಪ್ಪೋ ರೆನೋ 7 ಸ್ಮಾರ್ಟ್‌ಫೋನ್‌ 28,999ರೂ. ಬೆಲೆಯನ್ನು ಹೊಂದಿದೆ. ಇದು ಫ್ಲಿಪ್‌ಕಾರ್ಟ್, ಒಪ್ಪೋ ಆನ್‌ಲೈನ್ ​​ಸ್ಟೋರ್, ಮತ್ತು ರಿಟೇಲ್‌ ಸ್ಟೋರ್‌ ನಲ್ಲಿ ಫೆಬ್ರವರಿ 17ರಿಂದ ಖರೀದಿಗೆ ಲಭ್ಯವಾಗಲಿದೆ. ಇದು 6.4 ಇಂಚಿನ ಫುಲ್‌ ಹೆಚ್‌ಡಿ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 180Hz ಟಚ್‌ ರೆಸ್ಪಾನ್ಸ್‌ ರೇಟ್‌ ಹಾಗೂ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ RAM ಸಾಮರ್ಥ್ಯವನ್ನು ನೀವು ಹೆಚ್ಚು ಅಗತ್ಯವಿರುವಾಗ ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್​ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್‌-ಆಂಗಲ್‌ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮರಾ ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 65W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನಾದ ಪ್ರಚಾರ ಮತ್ತೆ ಭರಾಟೆ! ಗಾಲ್ವಾನ್ ನದಿಯ ತಿರುವಿನಿಂದ 1.2 ಕಿಮೀ ದೂರದಲ್ಲಿ PLA ಧ್ವಜವನ್ನು ಹಾರಿಸಿರುವುದನ್ನು ಉಪಗ್ರಹ ಚಿತ್ರ ಖಚಿತಪಡಿಸುತ್ತದೆ

Tue Feb 8 , 2022
  ಈ ವರ್ಷದ ಜನವರಿಯಲ್ಲಿ, ಚೀನಾ ತನ್ನ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ತಮ್ಮ ರಾಷ್ಟ್ರಧ್ವಜವನ್ನು ಹಾರಿಸುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ವಿವಾದವು ಸ್ಫೋಟಗೊಂಡಿತ್ತು. ಜೂನ್ 15, 2020 ರಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಭಾರತೀಯ ಸೇನೆಯ ಪಡೆಗಳು ಘರ್ಷಣೆ ನಡೆಸಿದ ಸ್ಥಳದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಧ್ವಜವನ್ನು ಹಾರಿಸಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮವು ಹೇಳಿಕೊಂಡಿದೆ, ಇದು ಎರಡೂ ಕಡೆಗಳಲ್ಲಿ ಅನೇಕ ಸಾವುನೋವುಗಳಿಗೆ ಕಾರಣವಾಯಿತು. ಆದಾಗ್ಯೂ, […]

Advertisement

Wordpress Social Share Plugin powered by Ultimatelysocial