ಎಂದಾದ್ರೂ ನೋಡಿದ್ದೀರಾ ʻಜೌಲಿʼ ಡಾನ್ಸ್.

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಜೌಲಿ(Zaouli) ನೃತ್ಯ ಮಾಡುವ ವ್ಯಕ್ತಿಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೌಲಿ ನೃತ್ಯ ನೋಡಲು ಕಣ್ಣಿಗೆ ಸಂತೋಷವನ್ನು ತರಿಸುತ್ತೆ. ಆದ್ರೆ, ಅದು ಅಷ್ಟೇ ಅತ್ಯಂತ ಕಷ್ಟಕರವಾದ ನೃತ್ಯ ಎನ್ನಲಾಗುತ್ತೆ.

ವಿಡಿಯೋದಲ್ಲಿ, ಆಫ್ರಿಕಾದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನೃತ್ಯ ಪ್ರದರ್ಶನ ನಡೆಯುತ್ತಿದೆ. ಅಲ್ಲೊಬ್ಬ ವ್ಯಕ್ತಿ ವಿಶೇಷ ವೇಷ ಭೂಷಣ ಧರಿಸಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು.

ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) ಪ್ರಕಾರ, ಜೌಲಿಯು ಕೋಟ್ ಡಿ’ಐವೋರ್‌ನ ಬೌಫಲ್ ಮತ್ತು ಜುನೌಲಾ ವಿಭಾಗಗಳ ಗುರೋ ಸಮುದಾಯಗಳಿಂದ ಅಭ್ಯಾಸ ಮಾಡುವ ಜನಪ್ರಿಯ ಸಂಗೀತ ಮತ್ತು ನೃತ್ಯವಾಗಿದೆ.

‘ಇದು ಸ್ತ್ರೀಲಿಂಗ ಸೌಂದರ್ಯಕ್ಕೆ ಗೌರವವಾಗಿದೆ. ಜೌಲಿಯು ಬ್ಲೌ ಮತ್ತು ಡಿಜೆಲಾ ಎಂಬ ಎರಡು ಮುಖವಾಡಗಳಿಂದ ಪ್ರೇರಿತವಾಗಿದೆ. ಇದರ ಇನ್ನೊಂದು ಹೆಸರು, ಡಿಜೆಲಾ ಲೌ ಜೌಲಿ ಎಂದರೆ ಜೌಲಿ, ಡಿಜೆಲಾ ಅವರ ಮಗಳು. ಈ ಒಂದೇ ನೃತ್ಯದಲ್ಲಿ ಶಿಲ್ಪ (ಮುಖವಾಡ), ನೇಯ್ಗೆ (ವೇಷಭೂಷಣ), ಸಂಗೀತ (ಬ್ಯಾಂಡ್ ಮತ್ತು ಹಾಡು) ವನ್ನು ಒಟ್ಟಿಗೆ ನೋಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಲಂಕಾ ವಿರುದ್ಧ ಭಾರತಕ್ಕೆ 4 ವಿಕೆಟ್ ಗೆಲುವು

Fri Jan 13 , 2023
ಕೊಲ್ಕತ್ತ, ಜ.12-ಕೆ.ಎಲ್. ರಾಹುಲ್ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಇಂದು ಇಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಪೈಕಿ ಭಾರತ 2-0 ಯಿಂದ ಸರಣಿ ಕೈವಶ ಮಾಡಿಕೊಂಡಿದೆ. ಗೆಲುವಿಗೆ ಅಗತ್ಯವಿದ್ದ 216 ರನ್ ಗಳ ಬೆನ್ನಹತ್ತಿದ ಭಾರತ 43.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ಗೆಲುವಿನ ನಗೆ […]

Advertisement

Wordpress Social Share Plugin powered by Ultimatelysocial