LEGEND LEGUE:ಲೆಜೆಂಡ್ಸ್ ಕ್ರಿಕೆಟ್ ಕಪ್ ಗೆದ್ದ ವರ್ಲ್ಡ್ ಜೈಂಟ್ಸ್;

 ಕೋರಿ ಆಯಂಡರ್ಸನ್ ಬ್ಯಾಟಿಂಗ್ ಸಾಹಸದಿಂದ ಬೃಹತ್ ಮೊತ್ತ ಕಲೆಹಾಕಿದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಏಶ್ಯನ್ ಲಯನ್ಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಡ್ಯಾರೆನ್ ಸ್ಯಾಮಿ ನಾಯಕತ್ವದ ವರ್ಲ್ಡ್ ಜೈಂಟ್ಸ್ ತಂಡವು ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಚೊಚ್ಚಲ ವಿಜಯಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಗುರಿ ಬೆನ್ನತ್ತಿದ ಏಶ್ಯನ್ ಲಯನ್ಸ್ ತಂಡ 231 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ವರ್ಲ್ಡ್ ಜೈಂಟ್ಸ್ ತಂಡವು 25 ರನ್ ಜಯ ಸಾಧಿಸಿತು.

ವರ್ಲ್ಡ್ ಜೈಂಟ್ಸ್ ತಂಡಕ್ಕೆ ಕೋರಿ ಆಯಂಡರ್ಸನ್, ಕೆವಿನ್ ಪೀಟರ್ಸನ್, ಹ್ಯಾಡಿನ್ ಮತ್ತು ಸ್ಯಾಮಿ ಬ್ಯಾಟಿಂಗ್ ನೆರವು ನೀಡಿದರು. ಆಯಂಡರ್ಸನ್ ಕೇವಲ 43 ಎಸೆತಗಳಿಂದ ಅಜೇಯ 94 ರನ್ ಗಳಿಸಿದರೆ, ಪೀಟರ್ಸನ್ 48 ರನ್, ಸ್ಯಾಮಿ 38 ರನ್ ಮತ್ತು ಹ್ಯಾಡಿನ್ 37 ರನ್ ಗಳಿಸಿದರು.

ಗುರಿ ಬೆನ್ನತ್ತಿದ ಲಯನ್ಸ್ ಗೆ ಯಾರೊಬ್ಬರೂ ನಿಂತು ಆಡಿ ಬೆಂಬಲ ನೀಡಲಿಲ್ಲ. ಯೂಸುಫ್ ಅಜೇಯ 39 ರನ್, ಜಯಸೂರ್ಯ 38 ರನ್, ದಿಲ್ಶನ್ ಮತ್ತು ತರಂಗ ತಲಾ 25 ರನ್ ಗಳಿಸಿದರು. ಅಲ್ಬಿ ಮೋರ್ಕೆಲ್ ಮೂರು ವಿಕೆಟ್ ಕಿತ್ತರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆನಡಾದಲ್ಲಿ ಲಸಿಕೆ ವಿರೋಧಿ ಪ್ರತಿಭಟನೆ; ರಹಸ್ಯ ಸ್ಥಳಕ್ಕೆ ಪ್ರಧಾನಿ ಟ್ರುಡೊ ಸ್ಥಳಾಂತರ.

Sun Jan 30 , 2022
ಟೊರಾಂಟೋ: ಕೋವಿಡ್ 19 ಸೋಂಕು ವಿರುದ್ಧದ ಲಸಿಕೆಯನ್ನು ಕಡ್ಡಾಯ ಮಾಡಿದ್ದನ್ನು ವಿರೋಧಿಸಿ ಕೆನಡಾದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಒಂಟಾರಿಯೊದ ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸೆರಿದ್ದು, ಕೋವಿಡ್ -19 ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರು.ಈ ಹಿನ್ನೆಲೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.ಗಡಿಯಾಚೆಗಿನ ಟ್ರಕ್‌ ಚಾಲಕರಿಗೆ ಕೋವಿಡ್‌ ಲಸಿಕೆ ಕಡ್ಡಾಯದ ವಿರುದ್ಧ ‘ಫ್ರೀಡಮ್ […]

Advertisement

Wordpress Social Share Plugin powered by Ultimatelysocial