ಜಿ. ಪಿ. ರಾಮಣ್ಣ

ಜಿ. ಪಿ. ರಾಮಣ್ಣ ಹುಟ್ಟಿದ್ದು ಡಿಸೆಂಬರ್ 20. ಅವರು ಬೆಂಗಳೂರಿನವರು. ಹೊಂಬೆಗೌಡ ಶಾಲೆ, ಕ್ರೈಸ್ಟ್ ಕಾಲೇಜು ಇವರು ವಿದ್ಯಾಭ್ಯಾಸ ಮಾಡಿದ ಶೈಕ್ಷಣಿಕ ಮಂದಿರಗಳು. ಕೆಲಸ ಮಾಡಿದ್ದು ಎಚ್ಎಎಲ್ ಸಂಸ್ಥೆಯಲ್ಲಿ.

ಕನ್ನಡದ ಬಗ್ಗೆ ಅಪಾರ ಪ್ರೀತಿಯ ರಾಮಣ್ಣ ರಂಗನಟ, ನಿರ್ದೇಶಕ, ನಿರೂಪಕ, ದೂರದರ್ಶನ-ಆಕಾಶವಾಣಿ ಕಲಾವಿದ, ರಸಪ್ರಶ್ನೆ (ಕ್ವಿಜ್) ಗುರು, ಲೇಖಕ ಮತ್ತು ‘ಪರಂಪರಾ’ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ. ಎಚ್ಎಎಲ್ ಸಂಸ್ಥೆಯಲ್ಲೂ ಅವರು ಅಪಾರ ಕನ್ನಡ ಮತ್ತು ಸಾಂಸ್ಕೃತಿಕ ಕೆಲಸ ಮಾಡಿದವರು.ಜಿ. ಪಿ. ರಾಮಣ್ಣ ಮಹತ್ವದ ಕನ್ನಡದ ಪರಿಚಾರಕರಲ್ಲೊಬ್ಬರು. ಅವರು ಪರಂಪರಾ ಕಲ್ಚರಲ್‌ ಫೌಂಡೇಶನ್‌ ಸ್ಥಾಪಕರಾಗಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ.

ಕನ್ನಡದ ಬಗ್ಗೆ ಅಪಾರ ಪ್ರೀತಿಯ ರಾಮಣ್ಣ ರಂಗನಟ, ನಿರ್ದೇಶಕ, ನಿರೂಪಕ, ದೂರದರ್ಶನ-ಆಕಾಶವಾಣಿ ಕಲಾವಿದ, ರಸಪ್ರಶ್ನೆ (ಕ್ವಿಜ್) ಗುರು, ಲೇಖಕ ಮತ್ತು ‘ಪರಂಪರಾ’ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ. ಎಚ್ಎಎಲ್ ಸಂಸ್ಥೆಯಲ್ಲೂ ಅವರು ಅಪಾರ ಕನ್ನಡ ಮತ್ತು ಸಾಂಸ್ಕೃತಿಕ ಕೆಲಸ ಮಾಡಿದವರು.
ಪರಂಪರಾ ಕಲ್ಚರಲ್‌ ಫೌಂಡೇಶನ್‌ ಸಂಸ್ಥೆಯು ಮೊದಲಿಗೆ ಬೇರೆ ಬೇರೆ ಹೆಸರಿನಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಅನೇಕ ಸಾಂಸ್ಕೃತಿಕ ಹಾಗೂ ರಂಗಚಟುವಟಿಕೆಗಳನ್ನು ಮತ್ತು ಕನ್ನಡ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. 23-3-2015ರಂದು ಪರಂಪರಾ ಕಲ್ಚರಲ್‌ ಫೌಂಡೇಶನ್‌ ಹೆಸರಿನಲ್ಲಿ ನೋಂದಾವಣೆಗೊಂಡು ಅಂದಿನಿಂದ ನಿರಂತರವಾಗಿ ಕನ್ನಡ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಕಲೆ ಮಾನವನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ ಎನ್ನುವ ತತ್ದದಲ್ಲಿ ನಂಬಿಕೆ ಇರಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಜಾನಪದ ಸೇರಿದಂತೆ ಹಲವು
ಕನ್ನಡದ ಕಲಾಪ್ರಕಾರಗಳ ಪೋಷಣೆಯನ್ನು ಮಾಡಿಕೊಂಡು ಬರುತ್ತಿದೆ.
ರಾಮಣ್ಣ ಎಷ್ಟು ಜನರಿಗೆ ಆಪ್ತರು ಎಂಬುದಕ್ಕೆ ಅವರ ಕುರಿತು ಮೂಡಿಬಂದಿರುವ ಅಭಿನಂದನಾ ಗ್ರಂಥ “ಕಲಾ ಸಂಪನ್ನ” ದೊಡ್ಡ ಸಾಕ್ಷಿ.
ರಾಮಣ್ಣ ಅವರು ನಟಿಸಿರುವ ರಂಗ ಪ್ರಯೋಗಗಳು ಅನೇಕ, ಪರಂಪರಾದಲ್ಲಿ ಹೇಳುತ್ತಿರುವ ಕಥೆಗಳು ನೂರಾರು, ಸಂಯೋಜಿಸಿ ನಿರೂಪಿಸುತ್ತಿರುವ ಕಾರ್ಯಕ್ರಮಗಳು ಅಸಂಖ್ಯಾತ; ಅಂಕಣಕಾರರಾಗಿ, ಅನುವಾದಕಾರರಾಗಿ, ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಕಲಾವಿದರಾಗಿ, ಸಂಘಟಕರಾಗಿ ಅವರು ಮಾಡುತ್ತಿರುವ ಕೆಲಸ ಅಪಾರ ಎಂಬುದನ್ನು ಕನ್ನಡ ಲೋಕ ಕಾಣುತ್ತಿದೆ.
ಆತ್ಮೀಯ ರಾಮಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಕ್ಷಣ ಬೇಕಾಗಿದ್ದರೆ...

Tue Dec 20 , 2022
ತಕ್ಷಣ ಬೇಕಾಗಿದ್ದರೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details… Please follow and like us:

Advertisement

Wordpress Social Share Plugin powered by Ultimatelysocial