ರಷ್ಯಾ-ಉಕ್ರೇನ್ ಯುದ್ಧದಿಂದ ತೈಲ ಬೆಲೆಯು ವೇಗವಾಗಿ ಆಕಾಶದೆತ್ತರಕ್ಕೆ ಏರುತ್ತಿದೆ.

ಈಗ ಒಂದು ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಿಂದ  ತೈಲ ಬೆಲೆಯು ವೇಗವಾಗಿ ಆಕಾಶದೆತ್ತರಕ್ಕೆ ಏರುತ್ತಿದೆ.
ಇದೇ ಸಂದರ್ಭದಲ್ಲಿ ಇತರ ಪ್ರಮುಖ ತೈಲ ಉತ್ಪಾದಕರಾದ ಇರಾನ್ ಮತ್ತು ವೆನೆಜುವೆಲಾ ಕೂಡ ಪೆಟ್ರೋಲಿಯಂ ಮಾರಾಟದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿವೆ. ವಿದೇಶಿ ವಿನಿಮಯ ಬಿಕ್ಕಟ್ಟು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿರುವ (Oil Price Hike) ಕಾರಣ ಇಂಧನ ಬಳಕೆಯನ್ನು ಕಡಿಮೆ ಮಾಡಲು ನೇಪಾಳ (Nepal Government) ಸರ್ಕಾರವು ಈ ತಿಂಗಳು ಸಾರ್ವಜನಿಕ ವಲಯದ ಕಚೇರಿಗಳಿಗೆ ಎರಡು ದಿನಗಳ ರಜೆಯನ್ನು ಘೋಷಿಸುವ (Holiday For Cut Fuel Consumption) ಸಲಹೆಯನ್ನು ಪರಿಗಳಿಸುವುದಾಗಿ ತಿಳಿಸಿದೆ.

ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯು ನಿರ್ವಹಿಸುತ್ತಿದ್ದ ತೈಲ ಕ್ಷೇತ್ರವೊಂದು (Al-Fil oil field) ಬೆದರಿಕೆಯ ಕಾರಣಗಳಿಗಾಗಿ ಮುಚ್ಚಲ್ಪಟ್ಟಿದೆ. ಉತ್ತರ ಆಫ್ರಿಕಾದ (North Africa) ರಾಷ್ಟ್ರವಾದ ಲಿಬಿಯಾವನ್ನು (Libya) ಮತ್ತೆ ಸಶಸ್ತ್ರ ಸಂಘರ್ಷಕ್ಕೆ (Protest forces) ಎಳೆಯುವ ಬೆದರಿಕೆಯೊಡ್ಡುವ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಈ ಮಧ್ಯೆ ತಾನು ನಿರ್ವಹಿಸುತ್ತಿದ್ದ ತೈಲ ಕ್ಷೇತ್ರವನ್ನು (National Oil Corporation) ಒತ್ತಾಯಪೂರ್ವಕವಾಗಿ ಮುಚ್ಚಲಾಯಿತು ಎಂದು ಸ್ವತಃ ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯು (Oil Company) ಭಾನುವಾರ ಹೇಳಿದೆ. ಶನಿವಾರದಂದು ದೇಶದ ದಕ್ಷಿಣದಲ್ಲಿರುವ ಅಲ್-ಫೀಲ್ ಕ್ಷೇತ್ರಕ್ಕೆ ಜನರ ಗುಂಪೊಂದು ಪ್ರವೇಶಿಸಿ ತೈಲ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಿದೆ ಎಂದು ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಆಯಿಲ್ ಕಾರ್ಪೊರೇಷನ್ ಹೇಳಿದೆ.

ಡಿಜೆ.ಹಳ್ಳಿ, ಕೆಜಿ ಹಳ್ಳಿ (DJ Halli, KG Halli Riots) ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ (Hubballi Stone Pelting) ಸಾಮ್ಯತೆ ಇದ್ದು, ದುಷ್ಕೃತ್ಯ ಎಸಗಿದ ಮತೀಯ ಶಕ್ತಿಗಳನ್ನು ಮಟ್ಟ ಹಾಕೋದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಎಚ್ಚರಿಸಿದ್ದಾರೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿಂದ ಕಲ್ಲು ತೂರಾಟಕ್ಕೆ ತುತ್ತಾಗಿದ್ದ ಹನುಮಾನ ಮಂದಿರ(Hanuman Temple)ಕ್ಕೆ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಮೊದಲು ದೂರು ಕೊಟ್ಟು ಹೊದವರು, ಮರಳಿ ಗುಂಪು‌ ಗುಂಪಾಗಿ ಬರ್ತಾರೆ ಅಂದ್ರೆ ಏನು ಅರ್ಥ. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ, ವಾಹನಗಳು ಜಖಂಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಬಿಜೆಪಿಯ ಕಾರ್ಯಕಾರಿಣಿಯ ಸಭೆಯಲ್ಲಿ ಭಾಗಿಯಾಗಲು ಹೊಸಪೇಟೆಗೆ ತೆರಳುತ್ತಿದ್ದರು. ಸಚಿವರು ತೆರಳುತ್ತಿದ್ದ ಮಾರ್ಗ ಮಧ್ಯೆದಲ್ಲಿ ಎರಡು ಕಾರ್ ಗಳು ಅಪಘಾತಕ್ಕೆ ಒಳಗಾಗಿದ್ದವು. ಕೂಡಲೇ ತಮ್ಮ ವಾಹನ ನಿಲ್ಲಿಸಿದ ಶೋಭಾ ಕರಂದ್ಲಾಜೆ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು. ಅಂಬುಲೆನ್ಸ್ ಗಾಗಿ ಕಾಯುತ್ತಾ ಕುಳಿತುಕೊಳ್ಳದೇ ತಮ್ಮದೇ ವಾಹನದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ತಮ್ಮ ಕಾರ್ಯಕ್ರಮಕ್ಕೆ ವಿಳಂಬವಾಗುತ್ತಿರೋದನ್ನು ಗಮನಿಸಿದ ಸಚಿವರು, ರಸ್ತೆಯಲ್ಲಿ ಬಂದ ಸವಾರನ ಬೈಕ್ ನಲ್ಲಿ ಲಿಫ್ಟ್ ಪಡೆದು ಹೊಸಪೇಟೆ ತಲುಪಿದ್ದಾರೆ.

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 49,550 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.50,140, ರೂ. 49,550, ರೂ. 49,550 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 49,550 ರೂ. ಆಗಿದೆ. ಇಂದು, ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 691, ರೂ. 6,910 ಹಾಗೂ ರೂ. 69,100 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,200 ಆಗಿದ್ದರೆ ದೆಹಲಿಯಲ್ಲಿ ರೂ. 69,100 ಮುಂಬೈನಲ್ಲಿ ರೂ. 69,100 ಹಾಗೂ ಕೊಲ್ಕತ್ತದಲ್ಲೂ ರೂ. 69,100 ಗಳಾಗಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ.!

Mon Apr 18 , 2022
ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು. ಚರ್ಮದ ಹಲವು ಸಮಸ್ಯೆಗಳಿಗೆ ಕರ್ಬೂಜ ಹಣ್ಣಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ತಿಳಿಯಿರಿ. * ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು ಹಾಗೂ ಹಾಲಿನ ಕೆನೆಗೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ನಂತರ […]

Advertisement

Wordpress Social Share Plugin powered by Ultimatelysocial