ಕೋಟಿಜನರ ಮನಮುಟ್ಟಿದೆ “ಜ್ಯೂಲಿಯೆಟ್ 2” ಚಿತ್ರದ ಬಾಂಧವ್ಯದ ಹಾಡು.

ಪ್ರಪಂಚದಲ್ಲಿ ಎಲ್ಲಾ ಪ್ರೀತಿಗಿಂತ ಹೆತ್ತವರ ಪ್ರೀತಿ ದೊಡ್ಡದು. ಆ ಪ್ರೀತಿಯ ಬಗ್ಗೆ ಎಷ್ಡ ಹೇಳಿದರೂ ಕಡಿಮೆ. ಅದರಲ್ಲೂ ತಾಯಿಗೆ ಮಗನ‌ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಹೆಚ್ಚು ಎನ್ನುವುದು ವಾಡಿಕೆ. ವಿಭಿನ್ನ ಕಥಾಹಂದರ ಹೊಂದಿರುವ “ಜ್ಯೂಲಿಯೆಟ್ 2” ಚಿತ್ರಕ್ಕಾಗಿ ಸುಕೀರ್ತ್ ಶೆಟ್ಟಿ ತಂದೆ – ಮಗಳ ಬಾಂಧವ್ಯ ಸಾರುವ “ಕರುಳ ಬಳ್ಳಿಯ ನೋವಿನಲಿ ತಾಯಿಯ ಮಮತೆ ಲಾಲಿ ಹಾಡುತ್ತೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ” ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಕೋಟಿಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಮಲ್ಲಿಕಾ ಮಟ್ಟಿ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಟೀಸರ್ ಎಲ್ಲರ ಮನ ಗೆದ್ದಿದೆ. ಫೆಬ್ರವರಿ 14 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಫೆಬ್ರವರಿ 24 ರಂದು ಚಿತ್ರ ತೆರೆಗೆ ಬರಲಿದೆ.Pl production & Virat motion picture ಲಾಂಛನದಲ್ಲಿ ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರುವ “ಜ್ಯೂಲಿಯೆಟ್ 2″ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.”ಪ್ರೇಮಂ ಪೂಜ್ಯಂ” ಖ್ಯಾತಿಯ ಬೃಂದಾ ಆಚಾರ್ಯ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್, ರಕ್ಷಿತಾ ಬೋಳಾರ್, ಲಕ್ಷ್ಮೀಶ್ ಭಟ್, ಮುಂತಾದವರಿದ್ದಾರೆ.ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಶಾಂತೋ ವಿ ಆಂಟೊಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು.ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ರಿಲಯನ್ಸ್ ಎಂಟರ್ಟೈನ್ಮೆಂಟ್ ಮೂಲಕ ಬಿಡುಗಡೆಯಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫಿಲಂ ಸಿಟಿ ನಿರ್ಮಾಣಕ್ಕಾಗಿ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಮುಖ್ಯಮಂತ್ರಿ ಮನವಿ.

Thu Feb 9 , 2023
ಸಾಂಸ್ಕೃತಿಕ ನಗರಿ ಮೈಸೂರು ಚಿತ್ರರಂಗದ ಗಣ್ಯರಿಗೆ ಅಚ್ಚುಮೆಚ್ಚಿನ ಊರು. ಚೆಂದದ ಊರಿನ ಆಸುಪಾಸಿನಲ್ಲಿ 250 ಕ್ಕೂ ಅಧಿಕ ಪ್ರೇಕ್ಷಣೀಯ ಸ್ಥಳಗಳಿದೆ. ಇಂತಹ ಭವ್ಯ ಪರಂಪರೆಯುಳ್ಳ ಐತಿಹಾಸಿಕ ನಗರಿಯಲ್ಲಿ ಫಿಲಂ ಸಿಟಿ ಸ್ಥಾಪಿಸಬೇಕೆಂಬುದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಲವು ಚಿತ್ರರಂಗದ ಗಣ್ಯರ ಅಭಿಪ್ರಾಯ.ಕೆಲವು ದಿನಗಳ ಹಿಂದೆ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ […]

Advertisement

Wordpress Social Share Plugin powered by Ultimatelysocial