ಮಲಯಾಳಂನಲ್ಲಿ ಟ್ವೀಟ್ ಮಾಡಿದ ದುಬೈ ದೊರೆಗೆ ಅರೇಬಿಕ್ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದ ಕೇರಳ ಸಿಎಂ..!

ದುಬೈ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿ ಮಾಡಿದ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಮಲಯಾಳಂನಲ್ಲಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಟ್ವೀಟ್ ಜೊತೆಗೆ, ದುಬೈ ಎಕ್ಸ್‌ಪೋ 2020ರ ಸ್ಥಳದಲ್ಲಿ ವಿಜಯನ್‌ಗೆ ನೀಡಿದ ಸ್ವಾಗತದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಕೇರಳ ಸಿಎಂ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.ಯುಎಇ ಕೇರಳದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ದುಬೈ ಮತ್ತು ಯುಎಇಯ ಆರ್ಥಿಕ ಮತ್ತು ಅಭಿವೃದ್ಧಿಯ ಬೆಳವಣಿಗೆಯಲ್ಲಿ ಕೇರಳಿಗರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಶೇಖ್ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ. ಇತ್ತ ಪಿಣರಾಯಿ ವಿಜಯನ್ ಕೂಡ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ಕೇರಳದ ಅಭಿವೃದ್ಧಿಯಲ್ಲಿ ದುಬೈನ ಬೆಂಬಲಕ್ಕಾಗಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಸಿಎಂ ಧನ್ಯವಾದ ತಿಳಿಸಿದ್ದಾರೆ.ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್, ಭಾರತೀಯ ರಾಯಭಾರಿ ಸಂಜಯ್ ಸುಧೀರ್, ಕಾನ್ಸುಲ್ ಜನರಲ್ ಅಮನ್ ಪುರಿ ಮತ್ತು ಲುಲು ಗ್ರೂಪ್‌ನ ಅಧ್ಯಕ್ಷರು ಮತ್ತು ಅಬುಧಾಬಿ ಚೇಂಬರ್‌ನ ಉಪಾಧ್ಯಕ್ಷ ಯೂಸುಫ್ ಅಲಿ ಎಂ.ಎ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪಿಜ್ಜಾ, ಚಿಕನ್, ಉಪ್ಪು ಹಾಕಿದ ಡಂಪ್ಲಿಂಗ್ಸ್,ʼಬಿಯರ್ʼ ಕುಡಿಯುವಾಗ ಇವುಗಳನ್ನ ತಿನ್ಬೇಡಿ.

Thu Feb 3 , 2022
ಕೆಎನ್‌ಎನ್‌ಡಿಜಿಲ್‌ ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಬಿಯರ್ ಇಲ್ಲದ ಪಾರ್ಟಿ ಅಪೂರ್ಣ ಅಂತಾನೇ ಪರಿಗಣಿಸಲಾಗ್ತಿದೆ. ವಾಸ್ತವವಾಗಿ, ಬಿಯರ್ ಕುಡಿಯುವುದು ಆಧುನಿಕ ಜೀವನಶೈಲಿಯ ಪ್ರಮುಖ ಭಾಗವಾಗಿಬಿಟ್ಟಿದೆ. ಬಿಯರ್ ಸೇವನೆಯೂ ಹೆಚ್ಚಾಗಿದ್ದು, ಇದು ಇತರ ಆಲ್ಕೋಹಾಲ್ʼಗಳಿಗಿಂತ ಕಡಿಮೆ ಮಾದಕತೆಯನ್ನು ಹೊಂದಿರುತ್ತೆ.ಇನ್ನು ತಣ್ಣನೆಯ ಬಿಯರ್ ಶಾಖವನ್ನ ನಿವಾರಿಸುತ್ತದೆ. ಹೆಚ್ಚಿನ ಜನರ ಪಾರ್ಟಿಗಳಲ್ಲಿ ಬಿಯರ್ ಜೊತೆಗೆ ಪಿಜ್ಜಾ, ಚಿಕನ್, ಉಪ್ಪು ಹಾಕಿದ ಡಂಪ್ಲಿಂಗ್ಸ್, ಡ್ರೈ ಫ್ರೂಟ್ಸ್ ಇತ್ಯಾದಿಗಳನ್ನ ನೀಡಲಾಗುತ್ತದೆ.ಬಿಯರ್ ಅಥವಾ ಆಲ್ಕೋಹಾಲ್ ಕುಡಿಯಲು ಕೆಲವು ನಿಯಮಗಳಿವೆ. […]

Advertisement

Wordpress Social Share Plugin powered by Ultimatelysocial