ಸ್ಪೆಷಲ್‌ ಪೋಸ್ಟರ್ ರಿಲೀಸ್ ಮಾಡಿದ ‘ಮಾಫಿಯಾ’ ಟೀಮ್

 

‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ ‘ಮಾಫಿಯಾ’ ಸಿನಿಮಾದ ಕೊನೇ ಹಂತದ ಕೆಲಸಗಳು ಚಾಲ್ತಿಯಲ್ಲಿವೆ. ಈಗಾಗಲೇ ಒಂದಷ್ಟು ಪೋಸ್ಟರ್‌ಗಳಿಂದ ಗಮನಸೆಳೆದಿರುವ ಈ ಸಿನಿಮಾ ಈಗ ಮತ್ತೊಂದು ಹೊಸ ಪೋಸ್ಟರ್‌ ರಿಲೀಸ್ ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ವಿಭಿನ್ನ ಪೋಸ್ಟರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಈವರೆಗೂ ರಿಲೀ ಆಗಿರುವ ಪೋಸ್ಟರ್‌ನಲ್ಲಿ ಅದನ್ನೇ ಹೈಲೈಟ್ ಮಾಡಲಾಗಿತ್ತು. ಆದರೆ ಈಗ ರಿಲೀಸ್ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಪ್ರಜ್ವಲ್ ಮತ್ತು ಆದಿತಿ ಪ್ರಭುದೇವ ಇದ್ದು, ಸಖತ್ ರೊಮ್ಯಾಂಟಿಕ್‌ ಫೀಲ್‌ನಲ್ಲಿದೆ ಈ ಪೋಸ್ಟರ್ಈ ಚಿತ್ರವನ್ನು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ನಿರ್ಮಿಸುತ್ತಿದ್ದಾರೆ. ‘ಮಮ್ಮಿ’, ‘ದೇವಕಿ’ ಸಿನಿಮಾಗಳ ಖ್ಯಾತಿಯ ಲೋಹಿತ್ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, ಇದು ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಚಿತ್ರ. ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಸಹ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್‌ ಜೊತೆಗೆ ಅವರ ತಂದೆ ದೇವರಾಜ್ ಕೂಡ ಬಣ್ಣ ಹಚ್ಚಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಪ್ರಜ್ವಲ್, ‘ಈ ಸಿನಿಮಾದಲ್ಲಿ ನನ್ನ ಅಪ್ಪನ ಜೊತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ. ಈ ಹಿಂದೆ ‘ಅರ್ಜುನ’ ಚಿತ್ರದಲ್ಲಿ ಇಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಆದರೆ ಇದರಲ್ಲಿ ಇಬ್ಬರು ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅವರು ಸೀನಿಯರ್ ಆಫೀಸರ್. ನಾನು ಜ್ಯೂನಿಯರ್’ ಎನ್ನುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಕೋ ಲೇಔಟ್ ಪೊಲೀಸರ ಕಾರ್ಯಾ‍ಚರಣೆ.

Fri Jan 6 , 2023
ಮೊಬೈಲ್ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ ಘಟನೆ ವರದಿಯಾಗಿ ಎರಡು ಘಂಟೆಯೊಳಗೆ ಮೂವರ ಬಂಧನ ಮಾರಿಮುತ್ತು, ಸೈಯ್ಯದ್ ಶುಹೇಬ್, ಭರತ್ ಬಂಧಿತರು ಬಂಧಿತರಿಂದ 8.50 ಲಕ್ಷ ಮೌಲ್ಯದ 35 ಮೊಬೈಲ್ ವಶಕ್ಕೆ ಡಿಸೆಂಬರ್ 28 ರಂದು ಟೆಕ್ಕಿಯೊಬ್ಬನ ಐ ಪೋನ್ ಎಗರಿಸಿದ್ದ ಆರೋಪಿಗಳು ಮೈಕೋ ಲೇಔಟ್ ಬಳಿಯ ಬಿಳೆಕಹಳ್ಳಿ ಬಳಿ ಮೊಬೈಲ್ ಎಗರಿಸಿದ್ರು ಕೃತ್ಯದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ 112 ಗೆ ಕರೆಮಾಡಿದ್ದ ಟೆಕ್ಕಿ ಸುಜೀತ್ ಕದ್ದ ಬೈಕ್ […]

Advertisement

Wordpress Social Share Plugin powered by Ultimatelysocial