RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!

ವದೆಹಲಿ: ಸಾಲ ಪೂರ್ತಿ ಪಾವತಿಯ ಬಳಿಕ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸಂಬಂಧಿಸಿದ ಆಸ್ತಿ ದಾಖಲೆ ಪತ್ರಗಳನ್ನು ಸಕಾಲಕ್ಕೆ ನೀಡದೇ ಸತಾಯಿಸುತ್ತಿದ್ದವು. ಈ ಸಮಸ್ಯೆ ಬಗೆಹರಿಸಲು ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಅಖಾಡಕ್ಕೆ ಇಳಿದಿದೆ.

ಈ ಸಂಬಂಧ, ಸಾಲಗಾರರೊಂದಿಗೆ (borrowers) ಹೇಗೆ ವ್ಯವಹರಿಸಬೇಕು ಮತ್ತು ಸಾಲ ಪಾವತಿಯಾದ ಬಳಿಕ ನಂತರ ಯಾವೆಲ್ಲ ಕ್ರಮಗಳನ್ನು ಅನುಸರಿಸುವ ಕುರಿತು ಮಾರ್ಗಸೂಚಿ (guidelines) ಸೂತ್ರಗಳನ್ನು ಸೆ.13, ಬುಧವಾರ ಬಿಡುಗಡೆ ಮಾಡಿದೆ. ಬ್ಯಾಂಕುಗಳು(Banks), ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿಗಳು(NBFCs) ಮತ್ತು ರೆಗ್ಯುಲೆಟೇಡ್ ಎಂಟಿಟೀಸ್(Regulated Entities – RE) ಅಂದರೆ, ಇತರ ಎಲ್ಲ ಹಣಕಾಸು ಸಂಸ್ಥೆಗಳಿಗೆ ಈ ಮಾರ್ಗಸೂಚಿ ಸೂತ್ರಗಳು ಅನ್ವಯವಾಗಲಿವೆ(RBI Guidelines).

ಪೂರ್ಣ ಪ್ರಮಾಣದಲ್ಲಿ ಸಾಲ ಮರು ಪಾವತಿಸಿದ ಬಳಿಕ ಅಥವಾ ಸಾಲದ ಖಾತೆಯನ್ನು ಮುಚ್ಚಿದ 30 ದಿನಗಳ ಬಳಿಕ ಸಂಬಂಧಿಸಿದ ಹಣಕಾಸು ಸಂಸ್ಥೆಗಳು, ಸಾಲಗಾರರ ಮೂಲ ಚರಾಸ್ತಿ ಅಥವಾ ಸ್ಥಿರಾಸ್ತಿ ದಾಖಲೆ ಪತ್ರಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ.

ಸಾಲಗಾರರಿಗೆ ತಮ್ಮ ಚರಾಸ್ತಿ ಅಥವಾ ಸ್ಥಿರಾಸ್ತಿಗಳ ಮೂಲ ದಾಖಲೆ ಪತ್ರಗಳನ್ನು ಬ್ಯಾಂಕ್ ಕಚೇರಿಗಳು ಅಥವಾ ಸಾಲದ ಖಾತೆ ಇರುವ ಬ್ಯಾಂಕ್‌ ಶಾಖೆಯಿಂದಲೇ ಪಡೆದುಕೊಳ್ಳುವ ಆಯ್ಕೆಗಳನ್ನು ಸಾಲಗಾರರಿಗೆ ನೀಡಬೇಕು. ಇದು ಸಾಲಗಾರರ ಆದ್ಯತೆಯ ಅನುಸಾರ ಅವರಿಗೆ ಈ ಅವಕಾಶವನ್ನು ಒದಸಬೇಕು ಎಂದು ಆರ್‌ಬಿಐ ಹೇಳಿದೆ.

RBI Guidelines ಸಾಲಗಾರರು ನಿಧನರಾದರೆ.

ಒಬ್ಬನೇ ಸಾಲಗಾರ ಅಥವಾ ಜಂಟಿ ಸಾಲಗಾರರ ಸಾವಿನ ಬಳಿಕ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಎಲ್ಲ ಹಣಕಾಸು ಸಂಸ್ಥೆಗಳು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಮೂಲ ಚರ / ಸ್ಥಿರ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಉತ್ತಮವಾದ ಕಾರ್ಯವಿಧಾನವನ್ನು ಹೊಂದಿರಬೇಕು. ಅಂತಹ ಕಾರ್ಯವಿಧಾನಗಳನ್ನು ಹಣಕಾಸು ಸಂಸ್ಥೆ, ಬ್ಯಾಂಕುಗಳ ವೆಬ್‌ಸೈಟ್‌ನಲ್ಲಿ ಇತರ ರೀತಿಯ ನೀತಿಗಳು ಮತ್ತು ಗ್ರಾಹಕರ ಮಾಹಿತಿಗಾಗಿ ಕಾರ್ಯವಿಧಾನಗಳೊಂದಿಗೆ ಪ್ರದರ್ಶಿಸಬೇಕು ಎಂದು ಆರ್‌ಬಿಐ ಅಧಿಸೂಚನೆ ತಿಳಿಸಿದೆ.

ದಾಖಲೆ ನೀಡಲು ವಿಳಂಬವಾದ್ರೆ ದಂಡ

ಮೂಲ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾದರೆ ಅಥವಾ ಸಾಲದ ಇತ್ಯರ್ಥದ ನಂತರ 30 ದಿನಗಳ ನಂತರ ಸಂಬಂಧಿತ ನೋಂದಾವಣೆಯೊಂದಿಗೆ ನಮೂನೆಯನ್ನು ಸಲ್ಲಿಸಲು ವಿಫಲವಾದಲ್ಲಿ, ಅಂತಹ ವಿಳಂಬಕ್ಕಾಗಿ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಯಾಕೆ ವಿಳಂಬವಾಗಿದೆ ಎಂಬ ಕುರಿತು ಮಾಹಿತಿಯನ್ನು ಸಾಲಗಾರರಿಗೆ ನೀಡಬೇಕಾಗುತ್ತದೆ. ಹೀಗಿದ್ದೂ, ಒಂದು ವೇಳೆ ವಿಳಂಬ ಮುಂದುವರಿದರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಮೂಲ ದಾಖಲೆಗಳನ್ನು ಒದಗಿಸುವ ದಿನದವರೆಗೆ ಪರಿಹಾರವಾಗಿ ನಿತ್ಯ 5000 ರೂ. ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಒಂದು ವೇಳೆ, ಸಾಲಗಾರರ ಚರಾಸ್ಥಿ ಮತ್ತು ಸ್ಥಿರಾಸ್ತಿಗಳ ಮೂಲ ದಾಖಲೆಗಳು ನಾಶವಾದರೆ, ಆ ದಾಖಲೆಗಳನ್ನು ನಕಲಿ ಪ್ರತಿಗಳು ಅಥವಾ ದೃಢೀಕೃತ ಆಸ್ತಿ ದಾಖಲೆ ಪತ್ರಗಳನ್ನು ಪಡೆಯುವುದಕ್ಕೆ ನೆರವು ಒದಗಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಹೆಚ್ಚುವರಿಯಾಗಿ ಹಣಕಾಸಂಸ್ಥೆಗಳು, ಬ್ಯಾಂಕುಗಳು ನೀಡಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಹೊರಡಿಸಿರುವ ಈ ಎಲ್ಲ ಮಾರ್ಗದರ್ಶಿ ಸೂತ್ರಗಳು 2023 ಡಿಸೆಂಬರ್ 1ರಿಂದ ಅನ್ವಯವಾಗಲಿವೆ.

ರೆಗ್ಯುಲೆಟೇಡ್ ಎಂಟಿಟೀಸ್ ಎಂದರೇನು?

ಬ್ಯಾಂಕುಗಳು, ನಾನ್ ಫೈನಾನ್ಶಿಯಲ್ ಕಂಪನಿಗಳು ಹಾಗ ರೆಗ್ಯುಲೇಟೆಡ್ ಎಂಟಿಟೀಸ್ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಮೂದಿಸುತ್ತದೆ. ಇಲ್ಲಿ ರೆಗ್ಯುಲೇಟೆಡ್ ಎಂಟಿಟೀಸ್ ಎಂದರೆ, ಎಲ್ಲಾ ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಎಲ್ಲಾ ನಗರ ಪ್ರಾಥಮಿಕ ಸಹಕಾರಿ ಬ್ಯಾಂಕುಗಳು, ಎಲ್ಲಾ ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಆಸ್ತಿ ಪುನರ್‌ ನಿರ್ಮಾಣ ಸಂಸ್ಥೆಗಳು ಸೇರ್ಪಡೆಯಾಗಿರುತ್ತವೆ.

The post RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!

ಕಡಿಮೆ ಓದಿ

Please follow and like us:

tmadmin

Leave a Reply

Your email address will not be published. Required fields are marked *

Next Post

Mysuru Dasara 2023: ಮೈಸೂರಿಗೆ 300 ಹೆಚ್ಚುವರಿ ಬಸ್‌ಗಾಗಿ ಮನವಿ

Wed Sep 13 , 2023
ಮೈಸೂರು, ಸೆಪ್ಟೆಂಬರ್‌ 13: ಈ ಬಾರಿ ಶಕ್ತಿ ಯೋಜನೆ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾವವರ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ. ಹಾಗಾಗಿ ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ನೀಡುವಂತೆ ಸಾರಿಗೆ ಇಲಾಖೆ ಜೊತೆ ಮಾತುಕತೆ ನಡೆಯುತ್ತಿದೆ.   ಶಕ್ತಿ ಯೋಜನೆಯಿಂದ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಮುಂದಿನ ತಿಂಗಳು ದಸರಾ ಮಹೋತ್ಸವ ಇರುವುದರಿಂದ ಹೆಚ್ಚಿನ ಸಂಖ್ಯೆ […]

Advertisement

Wordpress Social Share Plugin powered by Ultimatelysocial