ಮತಾಂತರ ನಿಷೇಧ ವಿದೇಯಕದ ಉದ್ದೇಶವೇನು?

 

ರಾಜ್ಯದಲ್ಲಿ ಆಶವೊಡ್ಡಿ, ಬಲವಂತವಾಗಿ ಮತಾಂತರ ಮಾಡುತ್ತಿರುವವರನ್ನ  ಹೆಡಮುರಗಿ ಕಟ್ಟಲು ರಾಜ್ಯ ಸರ್ಕಾರ ಮತಾಂತರ ನಿಷೇಧ ವಿದೇಯಕವನ್ನ ನಿನ್ನೆ ಚಳಿಗಾಲದ ಅಧಿವೇಶಣದಲ್ಲಿ ಊಟದ ವಿರಾಮದ ಬಳಿಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಾಜರಿ ಇರಲಿಲ್ಲ. ಹಾಗಾಗಿ ವಿಪಕ್ಷ ನಾಯಕರು ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸಿದರು.

ಮತಾಂತರ ವಿದೇಯಕ ಉದ್ದೇಶವನ್ನ ನೋಡೊದಾದ್ರೆ, ಯಾರೆ ಆಮೀಷವೊಡ್ಡಿ ಮತಾಂತರ ಮಾಡಲು ಮುಂದಾದ್ರೆ ಕನಿಷ್ಠ ೩ ರಿಂದ ೧೦ ವರ್ಷ ಜೈಲು ಶಿಕ್ಷೆ, ೫೦ ಸಾವಿರ ದಂಢ ವಿಧಿಸಲಾಗುತ್ತದೆ.  ಮತಾಂತರ ಮಾಡಿರುವುದು ಸಾಭೀತಾದ್ರೆ, ಮತಾಂತರಗೊಂಡವರಿಗೆ ೫ ಲಕ್ಷ ಪರಿಹಾರ ನೀಡಬೇಕು. ಮತಾಂತರಕ್ಕಾಗಿಯೇ ಅನ್ಯ ಧರ್ಮಿಯ ಜತೆ ಮದುವೆ ಅಸಿಂಧು ಎಂದು ಘೋಷಿಸಲಾಗುತ್ತದೆ. ಮತಾಂತರ ಗೊಂಡ ವ್ಯಕ್ತಿಗೆ ಸಾಮಾಜಿಕ ಸ್ಥಾನ, ಸರ್ಕಾರದ ನೆರವು ನಿರಾಕರಣೆಯಾಗುತ್ತದೆ. ಮತಾಂತರದಲ್ಲಿ ತೊಡಗುವ ಸಂಘ ಸಂಸ್ಥೆಗಳಿಗೆ, ಸರ್ಕಾರದ ಅನುದಾನ  ಸ್ಥಗಿತಗೊಳ್ಳುತ್ತದೆ. ಒಂದುವೇಳೆ  ಮತಾಂತರಕ್ಕೆ ಒಳಗಾದವರೆ ಮಾತೃ ಧರ್ಮಕ್ಕೆ  ಮರಳುವ ಇಚ್ಛೆ ಇದ್ರೆ  ಯಾವುದೇ ಅಪರಾಧವಿಲ್ಲ.  ಮತಾಂತರಗೊಳ್ಳುವವರು ೩೦ ದಿನಕ್ಕಿಂತ ಮುಂಚೆ  ಜಿಲ್ಲಾಧಿಕಾರಿಗೆ ತಿಳಿಸಬೇಕು. ಅರ್ಜಿ ಸಲ್ಲಿಸಿದವರನ್ನ ಜಿಲ್ಲಾಧಿಕಾರಿ ಪೊಲೀಸರ ಸಮ್ಮುಖದಲ್ಲಿ ವಿಚಾರಿಸಬೇಕು. ಕಾನೂನು ಬಾಹಿರವಾಗಿ ಮತಾಂತರ ನಡೆಯುತ್ತಿದ್ದರೆ ಕೇಸ್‌ ದಾಖಲಿಸಬೇಕು.‌

 

Please follow and like us:

Leave a Reply

Your email address will not be published. Required fields are marked *

Next Post

ಬೆಳೆ ಹಾನಿಗೆ, ಅಧಿವೇಷಣದಲ್ಲೇ ಸಿಕ್ತು ಪರಿಹಾರ..!

Wed Dec 22 , 2021
ಅತೀವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬೆನ್ನಲೆ ಎನ್‌.ಡಿ.ಆರ್‌.ಎಫ್‌ ನಿಯಮಗಳ ಅಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದ್ರೆ ಬಸವರಾಜ್‌ ಮೊಮ್ಮಾಯಿ ಅವರು ಇರುವ ಮೊತ್ತಕ್ಕೆ ಹೆಚ್ಚುವರಿ ಹಣ ಸೇರಿಸಿ ರೈತರಿಗೆ ನೀಡಲು ಮುಂದಾಗಿದೆ. ಚಳಿಗಾಲದ ಅಧಿವೇಷಣದಲ್ಲಿ ಬೆಳೆ ಹಾನಿ ವಿಚಾರ ಬಂದಾಗ ಬಸವರಾಜ್‌ ಬೊಮ್ಮಾಯಿ ತಿಳಿಸಿದಂತೆ ಒಂದು ಹೇಕ್ಟರ್‌ ಒಣ ಬೇಸಾಯಕ್ಕೆ ೬೮೦೦ ರೂ ಗೆ ಹೆಚ್ಚುವರಿಯಾಗಿ ೧೩೬೦೦, ನೀರಾವರಿಗೆ ಜಮೀನಿಗೆ ೧೩೫೦೦ ಇದ್ದ ಹಣಕ್ಕೆ, ಹೆಚ್ಚುವರಿಯಾಗಿ ೨೫೦೦೦ ಹಣ ನೀಡುತ್ತೆ.  […]

Advertisement

Wordpress Social Share Plugin powered by Ultimatelysocial