ಹಳ್ಳಿಗೆ ಸುಮ್ಮನೆ ಹೋಗಿ ಮಲಗಿ ಬರೋದಾ? ತಿಳಿದುಕೊಂಡು ಹೋಗಬೇಕಲ್ವಾ?

ನೀನೇ ಹೇಳಿ ಬಿಡಪ್ಪ. ಹಳ್ಳಿಯಲ್ಲಿ ಹೋಗಿ ಮಲಗ್ತಿಯಲ್ಲಾ, ಹಳ್ಳಿಯಲ್ಲಿ ಮಲಗಿದವರಿಗೆ ಪಶುಸಂಗೋಪನೆ ಸಮಸ್ಯೆಗಳು ಗೊತ್ತಾಗಬೇಕಲ್ವಾ? ತಿಳಿದುಕೊಂಡು ಹೋಗಬೇಕಲ್ಲಾ,?`”ಇದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಆರ್.‌ಅಶೋಕ್ ಅವರ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ’ ಗ್ರಾಮವಾಸ್ತವ್ಯದ ಬಗ್ಗೆ ಕಾಲೆಳೆದ ಪರಿ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಆರ್.‌ ಅಶೋಕ್ ಅವರು ಪುಣ್ಯಕ್ಕೆ ಪಶುಸಂಗೋಪನೆ ಸಚಿವರು ಇಲ್ಲ, ಇದ್ದಿದ್ರೆ ಲೆಕ್ಕದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಓಡಿ ಹೋಗಬೇಕಿತ್ತು‌ ಎಂದರು.ಈ ವೇಳೆ ತಮ್ಮ ಮಾತನ್ನು ಅಶೋಕ್ ಅವರ ಕಡೆಗೆ ತಿರುಗಿಸಿದ, “ ನೀನೇ ಹೇಳಿ ಬಿಡಪ್ಪ. ಹಳ್ಳಿಯಲ್ಲಿ ಹೋಗಿ ಮಲಗ್ತಿಯಲ್ಲಾ, ಹಳ್ಳಿಯಲ್ಲಿ ಮಲಗಿದವರಿಗೆ ಇದೆಲ್ಲಾ ಗೊತ್ತಾಗಬೇಕಲ್ವಾ? ತಿಳಿದುಕೊಂಡು ಹೋಗಬೇಕಲ್ಲಾ, ಸುಮ್ಮನೆ ಮಲಗಿ ಬರೋದಾ?” ಎಂದು ಪ್ರಶ್ನಿಸಿದರು.ನಾನು ಸಣ್ಣ ವಯಸ್ಸಿನಲ್ಲಿ ಅದೆಲ್ಲಾ ಮಾಡಿ ಬಂದಿದ್ದೇನೆ. ಆದರೆ, ನಾನು ಹೇಳಿದ್ದು, ನಿಮ್ಮ ಲೆಕ್ಕ ನೋಡಿ ಅವರು ಓಡಿ ಹೋಗ್ತಿದ್ರು ಎಂದು ಸ್ಪಷ್ಟಪಡಿಸಿದರು.ಇದಕ್ಕೆ ನಕ್ಕು, ಅವರು ಅದಕ್ಕೆ ಬಂದಿಲ್ಲ, ಉತ್ತರ ಕೊಟ್ಟಿಲ್ಲ, ಸಹವಾಸ ಬೇಡ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ ಎಂದರು ಸಿದ್ದರಾಮಯ್ಯ. 25, 000 ರಾಸುಗಳು ಸತ್ತು ಹೋಗಿವೆ ಚರ್ಮರೋಗದಿಂದ‌. ಪಶುಸಂಗೋಪನೆ ನಿರ್ದೇಶಕರು ಕೊಟ್ಟ ಉತ್ತರದಲ್ಲಿ 1 ಕೋಟಿ 14 ಲಕ್ಷ ಜಾನುವಾರು ಇವೆ ಎಂದಿದ್ದಾರೆ. ಮತ್ತೊಮ್ಮೆ ಕೊಡುವಾಗ 1 ಕೋಟಿ 29 ಲಕ್ಷ ಇದೆ ಎಂದು ಹೇಳಿದ್ದಾರೆ. 15 ಲಕ್ಷ ಏನಾಯ್ತು ಎಂದಿದ್ದಕ್ಕೆ ಉತ್ತರ ಇಲ್ಲ. ಅವರೇ ಕೊಟ್ಟ ಉತ್ತರ ಬೇಜವಾಬ್ದಾರಿ ಇರಬಹುದು. ಅವರಿಗೆ ಬೇಜವಾಬ್ದಾರಿ ಇದೆ ಎಂದರೆ ಸರ್ಕಾರಕ್ಕೆ ಬೇಜವಾಬ್ದಾರಿ ಇದೆ ಎಂದು ಅರ್ಥ ಎಂದು ಕಿಡಿಕಾರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅರುಣ್ ಜೇಟ್ಲಿನಿರ್ಭೀತ, ನೇರ ನಡೆ ನುಡಿಯ, ಅಭಿವೃದ್ಧಿಶೀಲ ಚಿಂತಕ

Wed Dec 28 , 2022
  ಅವರು ವಕೀಲರಾಗಿ, ರಾಜಕಾರಣಿಯಾಗಿ, ಅದ್ಭುತ ವಾಗ್ಮಿಯಾಗಿ, ಎದ್ದುಕಾಣುವ ವ್ಯಕ್ತಿತ್ವದವರಾಗಿದ್ದವರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲಾ ಸಚಿವರಾಗಿದ್ದ ಅರುಣ್ ಜೇಟ್ಲಿ, ವಿರೋಧ ಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದವರು. ಅರುಣ್ ಜೇಟ್ಲಿ 1952ರ ಡಿಸೆಂಬರ್ 28ರಂದು ಕಿಶನ್ ಜೇಟ್ಲಿ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಪುತ್ರರಾಗಿ ದೆಹಲಿಯಲ್ಲಿ ಜನಿಸಿದರು. ತಂದೆ ಕಿಶನ್ ವಕೀಲರಾಗಿದ್ದರು. 1969-70ರಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, 1973ರಲ್ಲಿ ನವದೆಹಲಿಯ […]

Advertisement

Wordpress Social Share Plugin powered by Ultimatelysocial