‘ಕೆಜಿಎಫ್​’ ಏನೂ ಹೊಸದಲ್ಲ, 1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು:

 

ಹಲವು ದೊಡ್ಡ ಬಜೆಟ್ ಚಿತ್ರಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಲಾಭದಾಯಕವಾಗಿದೆ. ಬೇರೆ ಭಾಷೆಯವರಿಗೆ ನಮ್ಮ ಚಿತ್ರರಂಗದ ಪರಿಚಯವಾಗುತ್ತದೆ. ‘ಬಾಹುಬಲಿ’ ತೆರೆಕಂಡ ನಂತರದಲ್ಲಿ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.

ಆದರೆ, ಆ ಮೊದಲೇ ಈ ರೀತಿಯ ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ. ‘ಕೆಜಿಎಫ್​’ ಹಾಗೂ ‘ಆರ್​ಆರ್​ಆರ್​’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದಿದ್ದಾರೆ .

ಕಮಲ್ ಹಾಸನ್ ಅವರು ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ, ‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಹಲವು ವಿಚಾರಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ.

‘ಪ್ಯಾನ್​ ಇಂಡಿಯಾ ಎಂಬ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ವಿ. ಶಾಂತಾರಾಮ್​ ಅವರು ಪ್ಯಾನ್​ ಇಂಡಿಯಾ ಸಿನಿಮಾ ಮಾಡಿದ್ದರು. 1960ರ ‘ಮುಘಲ್​-ಇ-ಅಜಾಮ್​’ ಹಾಗೂ 1965ರ ‘ಚೆಮ್ಮೀನ್​’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ‘ಆರ್​ಆರ್​ಆರ್​’, ‘ಕೆಜಿಎಫ್​’ ಮಾಡಿರುವುದು ಹೊಸತಲ್ಲ. ನಾವು ಬೇರೆಬೇರೆ ಭಾಷೆಗಳನ್ನು ಮಾತನಾಡುತ್ತೇವೆ. ಆದರೆ, ದೇಶಮಟ್ಟದಲ್ಲಿ ನಾವೆಲ್ಲರೂ ಒಂದು’ ಎಂದಿದ್ದಾರೆ ಕಮಲ್ ಹಾಸನ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವಾಲಯ ನೌಕರರ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ!

Fri May 27 , 2022
ಬೆಂಗಳೂರು,ಮೇ27- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರರ ಸಂಘ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಚಿವಾಲಯದ ಶೇ.40ರಷ್ಟು ನೌಕರರು ಕರ್ತವ್ಯಕ್ಕೆ ಎಂದಿನಂತೆ ಹಾಜರಾಗಿದ್ದರೆ 60ರಷ್ಟು ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಹೀಗಾಗಿ ಸಚಿವಾಲಯದಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು. ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ನೌಕಕರಿಗೆ ಅಡ್ಡಿಪಡಿಸಿದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸುವುದಾಗಿ ಹಾಗೂ ಶಿಸ್ತು ಕ್ರಮವ ಕೈಗೊಳ್ಳುವ ಎಚ್ಚರಿಕೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು […]

Advertisement

Wordpress Social Share Plugin powered by Ultimatelysocial