ಕಿ. ರಂ. ನಾಗರಾಜ ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರು.

ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ ಮತ್ತು ಸಾಹಿತ್ಯಾಭಿಮಾನಿ ಬಳಗದಲ್ಲಿಅವರು ಕಿರಂ ಎಂದೇ ಚಿರಪರಿಚಿತರು.ಕಿತ್ತಾನೆ ರಂಗಪ್ಪ ನಾಗರಾಜ ಅವರು 1943ರ ಡಿಸೆಂಬರ್ 25ರಂದು ಹಾಸನ ಜಿಲ್ಲೆಯ ಕಿತ್ತಾನೆಯಲ್ಲಿ ಜನಿಸಿದರು. ಕಿತ್ತಾನೆಯಲ್ಲಿ ಪ್ರಾಥಮಿಕ ಅಭ್ಯಾಸವನ್ನು ಪೂರ್ಣಗೊಳಿಸಿದರು. ಬಿ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು, ಎಂ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದರು.ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಿರಂ, ನಿರಂತರ ಮೂರು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ನಡುವೆ ಎರಡು ವರ್ಷಗಳಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಜೊತೆಗೆ, ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಎಂ.ಫಿಲ್, ಪಿಎಚ್.ಡಿ ಪದವಿಗಾಗಿ ಸಂಶೋಧನೆಗೆ ಅವಕಾಶ ಕಲ್ಪಿಸಿದರು. ಕಾವ್ಯಮಂಡಲ ಹೆಸರಿನಲ್ಲಿ ಸಂಶೋಧನಾ ಕೇಂದ್ರವನ್ನು ತೆರೆದು, ಇದರಲ್ಲಿ ಸಂಶೋಧನಾಸಕ್ತರಿಗೆ ಅವಕಾಶ ಕಲ್ಪಿಸಿದರು. ನಿವೃತ್ತಿಯ ನಂತರ ಕಾವ್ಯಮಂಡಲದ ನಿರ್ದೇಶಕರಾಗಿ, ಬೆಂಗಳೂರು ವಿಶ್ವವಿದ್ಯಾಲಯ, ನ್ಯಾಷನಲ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಕೇಂದ್ರಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಜೊತೆಗೆ, ಕೆಲವು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿಗಳ ಪಠ್ಯಕ್ರಮ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಕಿ.ರಂ.ನಾಗರಾಜ ಅವರು ಹಲವು ಪಠ್ಯಪುಸ್ತಕಗಳ ಸಂಪಾದನೆ, ನೂರಾರು ಲೇಖನಗಳು, ಮುನ್ನುಡಿಗಳನ್ನು ಬರೆದಿದ್ದಾರೆ. ಕೃತಿ ಬಿಡುಗಡೆಯಲ್ಲಿ ಆಡಿರುವ ಮಾತುಗಳು, ವಿಚಾರಸಂಕಿರಣಗಳಲ್ಲಿ ಮಂಡಿಸಿರುವ ಪ್ರಬಂಧಗಳು, ಸಾವಿರಾರು ಉಪನ್ಯಾಸಗಳು, ಅನೇಕ ಸಾಹಿತ್ಯಶಿಬಿರಗಳ ಆಯೋಜನೆ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆಯನ್ನುಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕಸಾಹಿತ್ಯ ಅಕಾಡಮಿಗಳ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು.ಕಿರಂ ಅವರ ಬರಹಗಳು ಹಲವು ವ್ಯಾಪ್ತಿಗಳಲ್ಲಿವೆ. ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಮಧ್ಯಮ ವ್ಯಾಯೋಗ (ಅನುವಾದ) ಇವು ನಾಟಕಗಳು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅರಣ್ಯ ಇಲಾಖೆ ಹಾಗೂ ಆಂಧ್ರ ಮೂಲದ ಹರೀಶ್ ರವರಿಂದ ನಮ್ಮ ಜಮೀನು ಗಳನ್ನು ಬಿಡಿಸಿಕೊಡಿ ಎಂದು ಸಾಗುವಳಿದಾರರಿಂದ ಪ್ರತಿಭಟನೆ...

Mon Dec 26 , 2022
ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಗ್ರಾಮದ ಪರಿಶಿಷ್ಟ ಜನಾಂಗದ 72 ಎಕರೆ ಜಮೀನನ್ನು ಅರಣ್ಯ ಇಲಾಖೆ ಹಾಗೂ ಹರೀಶ್ ಎಂಬುವವರು ವಶಪಡಿಸಿ ಕೊಂಡಿರುವುದನ್ನು ಖಂಡಿಸಿ ಸಾಗುವಳಿದಾರರು ಜಮೀನಿನಲ್ಲಿ ಪ್ರತಿಭಟನೆ ಮಾಡಿದರು…..1960ರಲ್ಲಿ ಘನ ಸರ್ಕಾರವು ತಿಮ್ಮೆಗೌಡನ ಪಾಳ್ಯದಲ್ಲಿ ಇರಸವಾಡಿ ಗ್ರಾಮದ ಪರಿಶಿಷ್ಟ ಜನಾಂಗದ ಬಡತನ ರೇಖೆಯಡಿಯಲ್ಲಿದ್ದ ಕುಟುಂಬಗಳಿಗೆ ಮಂಜೂರು ಮಾಡಿರುತ್ತದೆ….ನಂತರ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುತ್ತಾರೆ. ಬರಗಾಲದ ತಾಂಡವದಿಂದ ಜೀವನೋಪಾಯಕ್ಕೆ ಬೇರೆ ಕಡೆ ಕೂಲಿ ಮಾಡಿ ಜೀವನ ಮಾಡುತ್ತಿರುವಾಗ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ….ಈ […]

Advertisement

Wordpress Social Share Plugin powered by Ultimatelysocial