ಅರಣ್ಯ ಇಲಾಖೆ ಹಾಗೂ ಆಂಧ್ರ ಮೂಲದ ಹರೀಶ್ ರವರಿಂದ ನಮ್ಮ ಜಮೀನು ಗಳನ್ನು ಬಿಡಿಸಿಕೊಡಿ ಎಂದು ಸಾಗುವಳಿದಾರರಿಂದ ಪ್ರತಿಭಟನೆ…

ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಗ್ರಾಮದ ಪರಿಶಿಷ್ಟ ಜನಾಂಗದ 72 ಎಕರೆ ಜಮೀನನ್ನು ಅರಣ್ಯ ಇಲಾಖೆ ಹಾಗೂ ಹರೀಶ್ ಎಂಬುವವರು ವಶಪಡಿಸಿ ಕೊಂಡಿರುವುದನ್ನು ಖಂಡಿಸಿ ಸಾಗುವಳಿದಾರರು ಜಮೀನಿನಲ್ಲಿ ಪ್ರತಿಭಟನೆ ಮಾಡಿದರು…..1960ರಲ್ಲಿ ಘನ ಸರ್ಕಾರವು ತಿಮ್ಮೆಗೌಡನ ಪಾಳ್ಯದಲ್ಲಿ ಇರಸವಾಡಿ ಗ್ರಾಮದ ಪರಿಶಿಷ್ಟ ಜನಾಂಗದ ಬಡತನ ರೇಖೆಯಡಿಯಲ್ಲಿದ್ದ ಕುಟುಂಬಗಳಿಗೆ ಮಂಜೂರು ಮಾಡಿರುತ್ತದೆ….ನಂತರ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುತ್ತಾರೆ. ಬರಗಾಲದ ತಾಂಡವದಿಂದ ಜೀವನೋಪಾಯಕ್ಕೆ ಬೇರೆ ಕಡೆ ಕೂಲಿ ಮಾಡಿ ಜೀವನ ಮಾಡುತ್ತಿರುವಾಗ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ….ಈ ಸಮಯವನ್ನು ಸದುಪಯೋಗ ಮಾಡಿಕೊಂಡು ಅರಣ್ಯ ಇಲಾಖೆ ಹಾಗೂ ಬಂಡವಾಳ ಶಾಹಿಗಳು ಒತ್ತುವರಿ ಮಾಡಿಕೊಂಡು ಕಂದಕವನ್ನು ನಿರ್ಮಾಣ ಮಾಡಿರುತ್ತಾರೆ…..ಪ್ರತಿ ಭಾರಿವು ತಡೆಯಲು ಹೋದಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎದರಿಸಿ ನಮ್ಮ ಹೋರಾಟಕ್ಕೆ ತಡೆ ಮಾಡುತ್ತ ಬಂದಿದ್ದಾರೆ ಎಂದು ಗ್ರಾಮಸ್ಥರು ದೂರಿದರು……ಈ ಭಾರಿ ಎಲ್ಲಾ ಹೋರಾಟಕ್ಕೂ ಸಿದ್ದವಾಗಿ ಬಂದಿದ್ದೇವೆ, ನಮ್ಮ ಜಮೀನು ನಮಗೆ ವ್ಯವಸಾಯ ಮಾಡಲು ಬೇಕು.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ವರ್ಷಗಳಿಂದಲೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ. ಆಗಾಗಿ ನಾವು ನಮ್ಮ ಜಮೀನಿಗಾಗಿ ಜಿಲ್ಲಾ ಕಚೇರಿವರೆಗೂ ಪಾದಯಾತ್ರೆ ಮಾಡಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಾಗುವಳಿದಾರರು ತಿಳಿಸಿದರು…….ಮುಖಂಡರಾದ ನಾಗರಾಜು, ನಂಜುಂಡಸ್ವಾಮಿ, ಪ್ರಸನ್ನ ಇರಸವಾಡಿ, ವೆಂಕಟೇಶ್, ಶಿವಕುಮಾರ್, ನಾಗಪ್ಪ, ಶಿವು ಮುಂತಾದವರು ಹಾಜರಿದ್ದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪ್ರತಿಭಾ ನಂದಕುಮಾರ್ ಕನ್ನಡದ ಪ್ರಸಿದ್ಧ ಬರಹಗಾರ್ತಿ.

Mon Dec 26 , 2022
ಪ್ರತಿಭಾ ನಂದಕುಮಾರ್ ಬೆಂಗಳೂರಿನವರು. ಅವರು 1955ರ ಡಿಸೆಂಬರ್ 25ರಂದು ಜನಿಸಿದರು. ತಂದೆ ವಿ. ಎಸ್. ರಾಮಚಂದ್ರರಾವ್. ತಾಯಿ ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದರು. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದರು.ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ […]

Advertisement

Wordpress Social Share Plugin powered by Ultimatelysocial