ವಿದ್ಯಾರ್ಥಿಗಳೇ ಗಮನಿಸಿ : `ಬಸ್ ಪಾಸ್’ ಮಾನ್ಯತಾ ಅವಧಿ ವಿಸ್ತರಣೆ!

ಹಾವೇರಿ : ಕಳೆದ 2021-22 ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವೃತ್ತಿಪರ ಹಾಗೂ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆದಿರುವ ಬಸ್ ಪಾಸ್ ಮಾನ್ಯತಾ ಅವಧಿಯನ್ನು ಜುಲೈ 03ರ ವರೆಗೆ ವಿಸ್ತರಿಸಲಾಗಿದೆ.

ಸದರಿ ವಿದ್ಯಾರ್ಥಿಗಳ ಪಾಸ್ ಅವಧಿ ದಿನಾಂಕ 30-06-2022 ರಂದು ಮುಕ್ತಾಯಗೊಳ್ಳಲಿದೆ. ಆದರೆ ಇನ್ನೂ ತರಗತಿ, ಪರೀಕ್ಷೆಗಳು ಬಾಕಿ ಇರುವದರಿಂದ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲು ವಿದ್ಯಾರ್ಥಿಗಳು ಕಾಲಾವಕಾಶ ನೀಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ.

2021-22 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸುಗಳನ್ನು ದಿನಾಂಕ 03-07-2022 ರ ವರೆಗೆ ಸಂಸ್ಥೆಯ ಬಸ್ಸುಗಳಲ್ಲಿ ತೋರಿಸಿ ಉಚಿತ ಪ್ರಯಾಣಕ್ಕೆ ಅನುಮತಿಸಲಾಗಿದೆ. ದಿನಾಂಕ 03-07-2022 ರೊಳಗಾಗಿ ಸದರಿ ಬಸ್ ಪಾಸುಗಳನ್ನು ನವೀಕರಿಸಿಕೋಳ್ಳಲು ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಠಾಕ್ರೆ ನಿರ್ಧಾರ ರದ್ದು; ಸಿಎಂ ಆದ ಬಳಿಕ ಶಿಂಧೆ ಕೈಗೊಂಡ ಮೊದಲ ಹೆಜ್ಜೆ ಇದು!

Fri Jul 1 , 2022
ಮುಂಬೈ, ಜುಲೈ 1: ಏಕನಾಥ್ ಶಿಂಧೆ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮೊದಲ ಪ್ರಮುಖ ಕ್ರಮವಾಗಿ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂಬೈನ ಆರೆ ಮಿಲ್ಕ್ ಕಾಲೊನಿಗೆ ಮತ್ತೊಮ್ಮೆ ವರ್ಗಾಯಿಸಿದೆ. ಹಿಂದೆ ದೇವೇಂದ್ರ ಫಡ್ನವಿಸ್ ಸಿಎಂ ಅಗಿದ್ಧಾಗ ಅವರ ಕನಸಿನ ಯೋಜನೆಗಳಲ್ಲಿ ಇದೂ ಒಂದು ಭಾಗವಾಗಿತ್ತು. ಉದ್ಧವ್ ಠಾಕ್ರೆ ಸಿಎಂ ಆದ ಬಳಿಕ ಈ ಯೋಜನೆಗೆ ತಡೆ ಹಾಕಿದ್ದರು. ಈಗ ಏಕನಾಥ್ ಶಿಂಧೆ ಸಿಎಂ ಆಗಿ ಈ ಯೋಜನೆಗೆ ಮತ್ತೆ […]

Advertisement

Wordpress Social Share Plugin powered by Ultimatelysocial