ಕಬ್ಜ… ಡೇ ಬೈ ಡೇ ತುಂಬಾ ಸುದ್ದಿಯಲ್ಲಿರೋ ಸಿನಿಮಾ.

ಬೆಂಗಳೂರು: ಕಬ್ಜ… ಡೇ ಬೈ ಡೇ ತುಂಬಾ ಸುದ್ದಿಯಲ್ಲಿರೋ ಸಿನಿಮಾ. ಕಬ್ಜ ಚಿತ್ರವನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ದೊಡ್ಡ ದೊಡ್ಡ ಸ್ಟಾರ್‍ಗಳಿಂದ ಹಿಡಿದು ಪ್ರತಿಯೊಬ್ಬ ಅಭಿಮಾನಿಯೂ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಜೊತೆಗೆ ದಿನವೂ ಲೆಕ್ಕಾಚಾರ ಮಾಡುತ್ತಿದ್ದಾರೆ.

ಇದೀಗ ಸಿನಿಮಾ ಬಗೆಗಿನ ಒಂದೊಂದೇ ಇಂಟ್ರೆಸ್ಟಿಂಗ್ ಮ್ಯಾಟರ್ಸ್ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟು ಮಾಡುತ್ತಿದೆ.

ಕಬ್ಜಡೈರೆಕ್ಟರ್ ಮುಂದೆ ಸ್ಟಾರ್ ಡೈರೆಕ್ಟರ್‍ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡ್ಕೊಳ್ಳೋ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಕೂಡ ಅಷ್ಟೇ ಜೋರಾಗಿ ನಡೆಯುತ್ತಿದೆ. ಕಬ್ಜ ಟೈಟಲ್ ಸಾಂಗ್ ಕೇಳಿ ಫ್ಯಾನ್ಸ್ ಹುಚ್ಚರಂತೆ ಇಷ್ಟಪಟ್ಟಿರೋ ವಿಚಾರ ನಿಮ್ಗೆ ಗೊತ್ತೇ ಇದೆ. ಇದೀಗ ಮತ್ತೊಂದು ಸ್ವೀಟ್ ಮ್ಯಾಟರ್ ನಿಮಗೆ ಖುಷ್ ಕೊಡುತ್ತೆ ಅದೇನು ಅಂತ ಮುಂದೆ ಓದಿ.

ನಾರ್ತ್​ ಅಮೆರಿಕದಲ್ಲಿ ಈ ಸಿನಿಮಾ ಭರ್ಜರಿ ಓಪನಿಂಗ್​ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಿದೆ. ಅಷ್ಟೇ ಅಲ್ಲ ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್​ ಪಂಡಿತ್​ ಸಜ್ಜಾಗಿದ್ದಾರೆ. ಇವೆಲ್ಲವೂ ಕನ್ನಡದ ಸಿನಿಮಾಗೆ ಹೊರ ಭಾಗದಲ್ಲಿ ಸಿಗುತ್ತಿರೋ ಗೌರವ ಅಲ್ಲದೇ ಇನ್ನೇನು ಅಲ್ವಾ..

‘ಕಬ್ಜ’ದಲ್ಲಿ ರಿಯಲ್ ಸ್ಟಾರ್ ಉಪೇಂದ್ರನಿಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎ.ಜೆ.ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, , ‘ಕೆಜಿಎಫ್’ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಾಮಸ್ ಆಲ್ವಾ ಎಡಿಸನ್ ಅಮೇರಿಕನ್ ಸಂಶೋಧಕ ಮತ್ತು ಉದ್ಯಮಿ.

Sat Feb 11 , 2023
ಥಾಮಸ್ ಆಲ್ವಾ ಎಡಿಸನ್ ಅವರು ಇಂದು ನಾವೇನೇನನ್ನು ಉಪಯೋಗಿಸುತ್ತಿದ್ದೇವೋ ಅಂತಹ ಬಹುತೇಕ ವಸ್ತುಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಾರಣಕರ್ತರಾಗಿ ಹಾಗೂ ಮುಂದೆ ಬಂದ ಹಲವಾರು ಬುದ್ಧಿವಂತ ಸಾಹಸಿಗಳಿಗೆ ಪ್ರೇರಕರೂ ಆದವರು. ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್. ಥಾಮಸ್ ಆಲ್ವಾ ಎಡಿಸನ್ ಅವರು ಕಂಡು ಹಿಡಿದಷ್ಟು ಹೊಸ ಹೊಸ ಆವಿಷ್ಕಾರಗಳನ್ನು ಇತ್ತೀಚಿನವರೆಗೆ ಯಾರೂ ಮಾಡಿರಲಿಲ್ಲ. ಅವರು ಸದಾ ಪರಿಶ್ರಮಿ. ಅವರೊಮ್ಮೆ […]

Advertisement

Wordpress Social Share Plugin powered by Ultimatelysocial