ಥಾಮಸ್ ಆಲ್ವಾ ಎಡಿಸನ್ ಅಮೇರಿಕನ್ ಸಂಶೋಧಕ ಮತ್ತು ಉದ್ಯಮಿ.

ಥಾಮಸ್ ಆಲ್ವಾ ಎಡಿಸನ್ ಅವರು ಇಂದು ನಾವೇನೇನನ್ನು ಉಪಯೋಗಿಸುತ್ತಿದ್ದೇವೋ ಅಂತಹ ಬಹುತೇಕ ವಸ್ತುಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಾರಣಕರ್ತರಾಗಿ ಹಾಗೂ ಮುಂದೆ ಬಂದ ಹಲವಾರು ಬುದ್ಧಿವಂತ ಸಾಹಸಿಗಳಿಗೆ ಪ್ರೇರಕರೂ ಆದವರು. ಪರಿಶ್ರಮ, ಬುದ್ಧಿವಂತಿಕೆ, ವ್ಯವಹಾರ ಚಾತುರ್ಯ ಇವುಗಳ ಸಂಗಮವೇ ಯಶಸ್ಸು ಎನ್ನುವುದಕ್ಕೆ ಮಾದರಿ ಥಾಮಸ್ ಆಲ್ವಾ ಎಡಿಸನ್.
ಥಾಮಸ್ ಆಲ್ವಾ ಎಡಿಸನ್ ಅವರು ಕಂಡು ಹಿಡಿದಷ್ಟು ಹೊಸ ಹೊಸ ಆವಿಷ್ಕಾರಗಳನ್ನು ಇತ್ತೀಚಿನವರೆಗೆ ಯಾರೂ ಮಾಡಿರಲಿಲ್ಲ. ಅವರು ಸದಾ ಪರಿಶ್ರಮಿ. ಅವರೊಮ್ಮೆ ಘೋಷಣೆ ಮಾಡಿದ್ದರು, ‘ಪ್ರಯೋಜನವಿಲ್ಲದ್ದನ್ನು, ಲಾಭವಿಲ್ಲದ್ದನ್ನು ನಾನು ಕಂಡು ಹಿಡಿಯುವುದೇ ಇಲ್ಲ’. ಅವರ ಹೆಸರಿನಲ್ಲಿರುವಷ್ಟು ಪೇಟೆಂಟುಗಳು ಮತ್ತಾರ ಹೆಸರಿನಲ್ಲಿಯೂ ಇರಲಿಲ್ಲ.
ಎಡಿಸನ್ ತುಂಬ ಪರಿಶ್ರಮಪಟ್ಟು ವಿದ್ಯುತ್ ಬಲ್ಬನ್ನು ಕಂಡು ಹಿಡಿದರು. ಅದಕ್ಕಾಗಿ ಅವರು ಸುಮಾರು ಎರಡು ಸಾವಿರ ಪ್ರಯೋಗಗಳನ್ನು ಮಾಡಿದ್ದರಂತೆ. ಅಷ್ಟು ಪ್ರಯೋಗಗಳಾದ ಮೇಲೆ ಸಫಲತೆ ದೊರಕಿತ್ತು. ಯಾರೋ ಅವರನ್ನು ಕೇಳಿದರಂತೆ, “ನೀವು ಎರಡು ಸಾವಿರ ಬಾರಿ ವಿಫಲರಾದಿರಂತೆ, ಹೌದಾ?”. ಅದಕ್ಕೆ ಎಡಿಸನ್, “ನಾನು ಎರಡು ಸಾವಿರ ಬಾರಿ ಸೋಲಲಿಲ್ಲ. ಯಾವ ರೀತಿ ಮಾಡಿದರೆ ಬಲ್ಬನ್ನು ಮಾಡುವುದು ಸಾಧ್ಯವಿಲ್ಲ ಎಂಬುದನ್ನು ದಾಖಲಿಸಿ ಇಟ್ಟಿದ್ದೇನೆ” ಎಂದರಂತೆ. ಇದು ಅವರ ಸಕಾರಾತ್ಮಕತೆಯ ಪ್ರತೀಕ.ಬಲ್ಬನ್ನೇನೋ ಕಂಡು ಹಿಡಿದಿದ್ದಾಯಿತು. ಅದರ ತಯಾರಿಕೆ ಪ್ರಾರಂಭವಾಯಿತು. ಫ್ಯಾಕ್ಟರಿ ಶುರುವಾಗಿ ಬಲ್ಬುಗಳು ಮಾರುಕಟ್ಟೆಗೆ ಬರತೊಡಗಿದವು. ಎಡಿಸನ್ ಲೆಕ್ಕ ಹಾಕಿದರು. ಒಂದು ಬಲ್ಬು ತಯಾರಾಗಲು ಒಂದು ಡಾಲರ್ ಖರ್ಚಾಗುತ್ತಿತ್ತು. ಆದರೆ ಎಡಿಸನ್ ಬಲ್ಬನ್ನು ನಲವತ್ತು ಸೆಂಟಿಗೆ ಮಾರತೊಡಗಿದರು. ಅಂದರೆ ಪ್ರತಿಯೊಂದು ಬಲ್ಬಿನಿಂದಲೂ ಅರವತ್ತು ಸೆಂಟು ನಷ್ಟವಾಗುತ್ತಿತ್ತು. ಕಂಪೆನಿಯ ಜನ ಎಡಿಸನ್‌ರಿಗೆ ಬುದ್ಧಿ ಹೇಳಿ ಬೆಲೆಯನ್ನು ಒಂದು ಡಾಲರನ್ನಾದರೂ ಇಡಲು ಹೇಳಿದರು. ಆದರೆ ಅವರು ಕೇಳಲಿಲ್ಲ. ನಂತರ ಮತ್ತೆ ಬ್ಯಾಂಕಿಗೆ ಹೋಗಿ ಸಾಲ ಪಡೆದು ಮತ್ತಷ್ಟು ಹೆಚ್ಚು ಬಲ್ಬುಗಳನ್ನು ತಯಾರಿಸಿದರು. ತಯಾರಿಕೆ ಹೆಚ್ಚಾದ್ದರಿಂದ ಪ್ರತಿ ಬಲ್ಬಿನ ತಯಾರಿಕಾ ವೆಚ್ಚ ಕಡಿಮೆಯಾಗಿ ಅರವತ್ತು ಸೆಂಟಾಯಿತು. ಆದರೂ ಎಡಿಸನ್ ಅವುಗಳನ್ನು ನಲವತ್ತು ಸೆಂಟಿಗೇ ಮಾರತೊಡಗಿದರು.ಈಗ ಬೃಹತ್ ಪ್ರಮಾಣದಲ್ಲಿ ಬಲ್ಬು ತಯಾರಿಸಲು ಮತ್ತೆ ಬ್ಯಾಂಕಿಗೆ ಸಾಲಕ್ಕಾಗಿ ಹೋದರು. ಅವರು ಇವನಿಗೆ ಸಾಲ ಕೊಡಲು ಸಾಧ್ಯವಿಲ್ಲವೆಂದರು, ‘ನಿಮಗೇನಾದರೂ ವ್ಯವಹಾರ ಜ್ಞಾನ ಇದೆಯಾ? ತಯಾರಿಕೆಯ ವೆಚ್ಚ ಒಂದು ಡಾಲರ್ ಇದ್ದಾಗ ನೀವು ನಲವತ್ತು ಸೆಂಟಿಗೆ ಮಾರಿದಿರಿ. ನಂತರ ತಯಾರಿಕೆ ವೆಚ್ಚ ಅರವತ್ತು ಸೆಂಟ್ ಆದಾಗಲೂ ನಲವತ್ತಕ್ಕೇ ಮಾರುತ್ತಿದ್ದೀರಿ. ನೀವು ದಿವಾಳಿಯಾಗಲೇಬೇಕು ಎಂದು ಹಟ ತೊಟ್ಟಂತೆ ಕಾಣುತ್ತದೆ. ಇಂಥ ಕಂಪೆನಿಗೆ ನಾವು ಧನಸಹಾಯ ಮಾಡಲಾರೆವು’ ಎಂದು ಖಡಾಖಂಡಿತವಾಗಿ ಹೇಳಿದರು. ಎಡಿಸನ್ ಬಿಟ್ಟಾರೆಯೇ? ಅವರೊಂದಿಗೆ ವಾದ ಮಾಡಿದರು, ಬೇಡಿಕೊಂಡರು. ತನ್ನ ಕಾರ್ಖಾನೆಯನ್ನೇ ಒತ್ತೆ ಇಡುವುದಾಗಿ ಹೇಳಿದರು. ಅವರೂ ಒಪ್ಪಿ ಸಾಲ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು!

Sat Feb 11 , 2023
ಸ್ಯಾಂಡಲ್​ವುಡ್ನ ಟಿ, ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ಅ ವರು ಸಿಂಗಲ್ ಅಂತೆ. ಸದ್ಯ ನಟಿ ಬಾಯ್​ಫ್ರೆಂಡ್​ಗಾಗಿ  ಹುಡುಕುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ   ತೀರ್ಪುಗಾರಳಾಗಿ ಮಿಂಚುತ್ತಿರುವ ನಟಿ ಇತ್ತೀಚೆಗೆ ಹಂಚಿಕೊಂಡ ವಿಡಿಯೋ  ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ. ನಟಿ ಡೇಟಿಂಗ್ಮಾ ಡೋಕೆ ಪರ್ಫೆಕ್ಟ್ ಬಾಯ್​ಫ್ರೆಂಡ್​ನ ಹುಡುಕಾಟದಲ್ಲಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್  ಖಾತೆಯಲ್ಲಿ ವಿಡಿಯೋವನ್ನು  ಶೇರ್ ಮಾಡಿದ್ದು ಇದರಲ್ಲಿ ನಟಿ ಡೇಟಿಂಗ್ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ  ಕುತೂಹಲ ಮೂಡಿಸಿದೆ. ನಟಿ ಹಲವು […]

Advertisement

Wordpress Social Share Plugin powered by Ultimatelysocial