Kabzaa Movie: ʻಕಬ್ಜʼ ಚಿತ್ರದ ಧ್ವನಿ ಸುರುಳಿ ಅದ್ಧೂರಿ ಬಿಡುಗಡೆ: ಸದ್ದು ಮಾಡುತ್ತಿದೆ ‘ಚುಂ ಚುಂ ಚಳಿʼ ಸಾಂಗ್‌!

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಪ್ಯಾನ್‌ ಇಂಡಿಯಾ ಸಿನಿಮಾವಾದ ʼಕಬ್ಜʼ (Kabzaa Movie) ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದೆ.

ಕಬ್ಜ ಸಿನಿಮಾದ ಮೂರನೇ ಹಾಡನ್ನು ಗೀತಾ ಶಿವರಾಜ್ ಕುಮಾರ್ ದಂಪತಿ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್‌.ಚಂದ್ರು ಊರಿನಲ್ಲೇ ‘ಕಬ್ಜ’ ಆಡಿಯೊ ಲಾಂಚ್ ಮಾಡಲಾಗಿದೆ.

ಈಗ ಬಿಡುಗಡೆ ಆಗಿರುವ ‘ಚುಂ ಚುಂ ಚಳಿ..’ ಹಾಡಿನಲ್ಲಿ ತಾನ್ಯಾ ಹೋಪ್​ ಹೆಜ್ಜೆ ಹಾಕಿದ್ದಾರೆ. ಗಾಯಕ ಗುರುಕಿರಣ್ ಮ್ಯೂಸಿಕಲ್ ನೈಟ್ಸ್ ನಡೆದಿದ್ದು, ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ನಟಿ ಶ್ರೇಯಾ ಶರಣ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್ ಭಾಗಿ ಆಗಿದ್ದಾರೆ. ಅಪ್ಪು ಜನ್ಮದಿನವಾದ ಮಾ.17ರಂದು ಕಬ್ಜ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಅಪ್ಪುಗೆ ಅರ್ಪಿಸುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರ ಜತೆಯಲ್ಲಿ ಕಿಚ್ಚ ಸುದೀಪ್‌ ಅವರೂ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಕ್ಕೆ ನಿರ್ದೇಶಕ ಆರ್‌.ಚಂದ್ರು ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಐಎಂಡಿಬಿ ಬಿಡುಗಡೆ ಮಾಡಿರುವ 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇರುವ ಕನ್ನಡದ ಏಕೈಕ ಸಿನಿಮಾ ಇದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿದೆ ನೀವು ನೋಡಿರದ '3 ಈಡಿಯಟ್ಸ್' ನ ಕರೀನಾ ಕಪೂರ್ ಚಿತ್ರಗಳು

Mon Feb 27 , 2023
ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು. ಈ ಚಿತ್ರದಲ್ಲಿ ರಾಂಚು ಪಾತ್ರದಲ್ಲಿ ಅಮೀರ್ ಖಾನ್, ಫರಾನ್ ಪಾತ್ರದಲ್ಲಿ ಮಾಧವನ್ ಹಾಗೂ ರಾಜು ಪಾತ್ರದಲ್ಲಿ ಶರ್ಮಾನ್ ಜೋಶಿ ಕಾಣಿಸಿಕೊಂಡಿದ್ದು, ಕರೀನಾ ಕಪೂರ್ ಪಿಯಾ ಪಾತ್ರದಲ್ಲಿ ಮಿಂಚಿದ್ದರು. ನಟ ಬೊಮನ್ ಇರಾನಿ ವೀರೂ ಸಹಸ್ರಬುದ್ಧಿ ಪಾತ್ರದಲ್ಲಿ ಅಭಿನಯಿಸಿದ್ದು, […]

Advertisement

Wordpress Social Share Plugin powered by Ultimatelysocial