ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿವೆ ಅಕ್ರಮ ಮರಳು ಧಂದೆ ಇದಕ್ಕೆ ಮುಕ್ತಿಯಾವಾಗ?

 

ಕಾಗವಾಡ : ಮತಕ್ಷೇತ್ರದ ಶಿವನೂರು.ಸಂಬರಗಿ.ಜಂಬಗಿ.ಕಲ್ಲೂತಿ ಗ್ರಾಮಗಳ ಸುಮಾರು 30 ಕಿ.ಮೀಟರ್ ವ್ಯಾಪ್ತಿಯ ಅಗ್ರಾಣಿ ಹಳ್ಳ ದಡದಲ್ಲಿ ಎಗ್ಗಿಲ್ಲದೆ ಹಾಡು ಹಗಲಲ್ಲೆ ಅಕ್ರಮ ಮರಳು ದಂದೆ ನಡೆಯತ್ತಿದ್ದರು ಮಾತ್ರ ತಾಲೂಕು ಆಡಳಿತ ಕಂಡು ಕಾಣದಂತೆ ಜಾಣ ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿದೆ.ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಅವರು ಕ್ಷೇತ್ರದ ಜನರಿಗೆ ಅನುಕೂಲ ವಾಗಲಿ ಎಂದು ಸಂಬರಗಿ, ಜಂಬಗಿ,ಕಲ್ಲೂತಿ,ಶಿವನೂರು,ಗ್ರಾಮಗಳ ಅಗ್ರಾಣಿ ಹಳ್ಳ ಕ್ಕೆ ಬಾಂದರ ಕಮ್ಮ್ ಬ್ರೀಜ್ ನಿರ್ಮಾಣ ಮಾಡಿ ಅನಕೂಲ ಮಾಡಿದ್ದಾರೆ ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮರಳು ಕಳ್ಳರು ಇಲ್ಲಿ ಹಳ್ಳದ ನೀರು ನಿಂತು ಹರಿಯುವದರಿಂದ ಇದನೆ ಮರಳು ಕಳ್ಳರು ಅಲ್ಲಿಂದ ಮರಳು ಎತ್ತಿ ಅಲ್ಲಿಯೇ ಪಿಲ್ಟರ್ ಮಾಡಿ ಹಾಡು ಹಗಲ್ಲೇ ಮಹಾರಾಷ್ಟ್ರದ ರಾಜ್ಯದ ಊರುಗಳಿಗೆ ಸಾಕಾಣಿಕೆ ಮಾಡುತ್ತಿದ್ದಾರೆ. ತಾಲೂಕಿನ ಎಲ್ಲ ಗಡಿ ಭಾಗದಲ್ಲಿ ಕೋರೊನಾ ಚೆಕ್ಕ ಪೋಸ್ಟ್ ಗಳು ಇದ್ದು ಈ ಚೆಕ್ಕ ಪೋಸ್ಟ್ ಮೂಲಕವೇ ಮರಳು ಅಕ್ರಮ ವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸರಬರಾಜ ಆಗುತ್ತಿರುವದು ಇಲ್ಲಿನ ಬ್ರಷ್ಟ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೆ ಮರಳು ಕಳ್ಳರು ಅಷ್ಟೊಂದು ಪ್ರಭಾವಿಗಳೆ ಎನ್ನುವು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಇದಕ್ಕೆ ಸಂಭಂದಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸಿ ಕರ್ನಾಟಕದ ಅಮೂಲ್ಯ ಮರಳು ಮಹಾರಾಷ್ಟ್ರ ಪಾಲಾಗುತ್ತಿರುವುದನ್ನು ತಡೆಯ ಬೇಕು ಇದರಲ್ಲಿ ಶಾಮೀಲಾಗಿರುವ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎನ್ನುವದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಪಿ, ಪಂಜಾಬ್‌ನಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಯುವಜನತೆ, ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮೋದಿ, ಶಾ ಪ್ರೋತ್ಸಾಹಿಸಿದರು

Sun Feb 20 , 2022
  ಹೊಸದಿಲ್ಲಿ: ಪಂಜಾಬ್ ಮತ್ತು ಉತ್ತರ ಪ್ರದೇಶದ ಮತದಾರರು, ವಿಶೇಷವಾಗಿ ಯುವಕರು ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ 2022ರ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. ತಮ್ಮ ಮುಂಜಾನೆ ಟ್ವೀಟ್‌ನಲ್ಲಿ, ಪಿಎಂ ಮೋದಿ, “ಇಂದು ಪಂಜಾಬ್ ಚುನಾವಣೆ ಮತ್ತು ಯುಪಿ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ನಾನು ಕರೆ ನೀಡುತ್ತೇನೆ, […]

Advertisement

Wordpress Social Share Plugin powered by Ultimatelysocial