ಕೈವಾರ ರಾಜಾರಾವ್ ನಾಟಕಕಾರ.

 

ಕೈವಾರ ರಾಜಾರಾವ್ ನಾಟಕಕಾರರಾಗಿ ದೊಡ್ಡ ಹೆಸರು. ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರಲ್ಲಿ ಒಬ್ಬರು. ಗಂಟೆಗಟ್ಟಳೆ ಕುಳಿತು ನೋಡಬೇಕಾದ ಸ್ಥಳದಲ್ಲಿ ಒಂದು-ಒಂದುವರೆ ಗಂಟೆಯ ಸಾಮಾಜಿಕ ನಾಟಕಗಳು ಆಕ್ರಮಿಸತೊಡಗಿದಾಗ 1940-50ರ ದಶಕದಲ್ಲಿ ಕೈಲಾಸಂ, ಕೆ. ಗುಂಡಣ್ಣ, ಕೈವಾರ ರಾಜಾರಾಯರು ಮುಂತಾದವರುಗಳು ಸಾಮಾಜಿಕ ನಾಟಕಗಳ ರಚನೆಗೆ ಕೈಹಾಕಿದರು.ರಾಜಾರಾಯರು ಹುಟ್ಟಿದ್ದು 1912ರ ಫೆಬ್ರವರಿ 29ರಂದು ಜನಿಸಿದರು. ತಂದೆ ಕೈವಾರ ರಾಮಚಂದ್ರರಾವ್‌. ತಾಯಿ ಸುಂದರಾಬಾಯಿ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಶೀಘ್ರಲಿಪಿಯಲ್ಲಿ ಕರ್ನಾಟಕಕ್ಕೆ ಎರಡನೆಯವರಾಗಿ (ಮೊದಲನೆಯವರು ಕಾದಂಬರಿಕಾರ ಮ.ನ. ಮೂರ್ತಿ) ಸಾಧನೆ ಮಾಡಿದರು.ರಾಜಾರಾಯರು ಉದ್ಯೋಗ ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 1934ರಲ್ಲಿ. ಆಗ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದವರು ಡಿ.ವಿ.ಜಿ. ಯವರು. ಡಿ.ವಿ.ಜಿ., ಎ.ಆರ್‌.ಕೃ., ವಿ.ಸೀ., ಸಿ.ಕೆ. ವೆಂಕಟರಾಮಯ್ಯ, ಎಸ್‌.ವಿ. ರಂಗಣ್ನ,ಎಂ.ವಿ. ಸೀತಾರಾಮಯ್ಯ ಇವರುಗಳ ಮಧ್ಯೆ ವ್ಯವಹರಿಸಬೇಕಾಗಿ ಬಂದಾಗ ರಾಜಾರಾಯರಿಗೂ ಸಾಹಿತ್ಯದಲ್ಲಿ ಆಸ್ಥೆ ಬೆಳೆಯಿತು.ಮುಂದೆ ರಾಜಾರಾವ್ ಅವರಿಗೆ ಖಾಯಂ ಉದ್ಯೋಗ ಮೈಸೂರು ರಾಜ್ಯ ವಿದ್ಯುತ್‌ ಇಲಾಖೆಯಲ್ಲಿ ದೊರೆಯಿತು. ಇಲಾಖಾ ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣರಾಗಿ ಭಡ್ತಿ ಪಡೆದು ಲೆಕ್ಕಪತ್ರಾಧಿಕಾರಿಯಾಗಿ 1967ರಲ್ಲಿ ನಿವೃತ್ತರಾದರು. ಪ್ರೊ. ಜಿ. ವೆಂಕಟಸುಬ್ಬಯ್ಯನವರು (1964-67) ಕಸಾಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜಾರಾಯರನ್ನು ವ್ಯವಸ್ಥಾಪಕರನ್ನಾಗಿ ನೇಮಿಸಿಕೊಂಡರು. ವೆಂಕಟಸುಬ್ಬಯ್ಯನವರ ನಂತರ ಅಧ್ಯಕ್ಷರಾಗಿ ಬಂದ ಜಿ. ನಾರಾಯಣ, ಹಂಪನಾಗರಾಜಯ್ಯರವರ ಅಧ್ಯಕ್ಷತೆ ಅವಧಿಯಲ್ಲೂ ಕಾರ್ಯನಿರ್ವಹಿಸಿ 1980ರಲ್ಲಿ ರಾಜೀನಾಮೆ ನೀಡಿದರು. ನಿಟ್ಟೂರು ಶ್ರೀನಿವಾಸರಾಯರ ನೇತೃತ್ವದಲ್ಲಿ ನಡೆಯುತ್ತಿದ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಗೌರವ ಸಹಾಯಕರಾಗಿ ಜೀವನದ ಕೊನೆಯವರೆಗೂ ದುಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

44 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ,

Wed Mar 1 , 2023
ಬೆಂಗಳೂರು, ಫೆ. 28: ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಗದ ಸೂಚನೆಯನ್ನು ಆಧರಿಸಿ ಒಟ್ಟು 44 ಮಂದಿ ತಹಶಿಲ್ದಾರ್ ಗಳನ್ನು ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಬೆಳಗಾವಿಯ ಬೈಲಹೊಂಗಲ ತಾಲೂಕು ಕಚೇರಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಸಂಗಮನಾಥ ಮೆಳ್ಳಿಗೇರಿ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಎಸ್.ಮಂದಲಮನಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಟಿ.ಜಿ.ಸುರೇಶಾಚಾರ್, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ಗ್ರೇಡ್-1 […]

Advertisement

Wordpress Social Share Plugin powered by Ultimatelysocial