44 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ,

ಬೆಂಗಳೂರು, ಫೆ. 28: ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಗದ ಸೂಚನೆಯನ್ನು ಆಧರಿಸಿ ಒಟ್ಟು 44 ಮಂದಿ ತಹಶಿಲ್ದಾರ್ ಗಳನ್ನು ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಬೆಳಗಾವಿಯ ಬೈಲಹೊಂಗಲ ತಾಲೂಕು ಕಚೇರಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಸಂಗಮನಾಥ ಮೆಳ್ಳಿಗೇರಿ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಎಸ್.ಮಂದಲಮನಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಟಿ.ಜಿ.ಸುರೇಶಾಚಾರ್, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ಚಂದ್ರಶೇಖರ್ ಶಂಬಣ್ಣ ಗಾಳಿ, ತುಮಕೂರು ಜಿಲ್ಲೆಯ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾಗಿ ಅನಿತಾ ಲಕ್ಷ್ಮೀ ಎಸ್., ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಗ್ರೇಡ್-1 ತಹಶಿಲ್ದಾರ್ ಎಸ್.ಬಿ.ಕೂಡಲಗಿ ಸೇರಿದಂತೆ ಒಟ್ಟು 44 ಮಂದಿ ತಹಶಿಲ್ದಾರ್ ಗಳನ್ನು ವಿವಿಧ ಸ್ಥಳಗಳನ್ನು ನಿಗದಿಗೊಳಿಸಿ ವರ್ಗಾವಣೆ ಮಾಡಲಾಗಿದೆ.

ಆಯೋಗದ ಮಾರ್ಗಸೂಚಿಯಂತೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆ ವರ್ಗಾವಣೆಗೆ ಆದೇಶಿಸಿದ್ದು, ಮುಂದಿನ ಆದೇಶದ ವರೆಗೆ ನಿಗದಿಸಿರುವ ಸ್ಥಳಗಳಲ್ಲಿ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸಿಟಿಸಿ ಪ್ರತಿಯನ್ನು ಇಲಾಖೆಗೆ ಇ-ಮೇಲ್ ಮೂಲಕ ಕಳುಹಿಸುವಂತೆ ತಿಳಿಸಿದೆ. ನಿಯುಕ್ತಿಗೊಳಿಸಿರುವ ಹುದ್ದೆಗಳ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೇರಿ ಕೋಮ್ ಭಾರತದ ಕ್ರೀಡಾ ಇತಿಹಾಸದಲ್ಲಿನ ಮಹತ್ವಪೂರ್ಣ ತಾರೆ.

Wed Mar 1 , 2023
  ಮೇರಿ ಕೋಮ್ ಭಾರತದ ಕ್ರೀಡಾ ಇತಿಹಾಸದಲ್ಲಿನ ಮಹತ್ವಪೂರ್ಣ ತಾರೆ.ಮೇರಿ ಕೋಮ್ 1983ರ ಮಾರ್ಚ್ 1ರಂದು ಜನಿಸಿದರು. ಅವರ ಹೆಸರು ಮಂಗ್ಟೆ ಚುಂಗ್ನೇಜಾಂಗ್ ಮೇರಿ ಕೋಮ್. ಇಂದು ಅವರು ತಮ್ಮ ಸಾಧನೆಗಳಿಂದ ಮೆಗ್ನಿಫಿಷಿಯಂಟ್ ಮೇರಿ ಎನಿಸಿದ್ದಾರೆ. ಮಣಿಪುರದ ಚುರಾಚನಪುರದ ಕಂಗಾಥೈ ಎಂಬ ಗ್ರಾಮದಲ್ಲ್ಲಿ ಬುಡಕಟ್ಟು ಜನಾಂಗದ ಕುಟುಂಬದಿಂದ ಬಂದವರು ಈ ಮೇರಿ ಕೋಮ್. ತಂದೆ ತಾಯಿಯರು ಜೂಮ್ ತೋಟಗಳಲ್ಲಿನ ಕಾರ್ಮಿಕರು.ಮೊಯಿರಾಂಗ್ ಗ್ರಾಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣಗಳನ್ನು ನಡೆಸಿದ ಮೇರಿ ಮುಂದೆ […]

Advertisement

Wordpress Social Share Plugin powered by Ultimatelysocial