ಕನಕಪುರ: ತೆರಿಗೆ ವಂಚನೆ ಗ್ರಾಮಸ್ಥರ ಪ್ರತಿಭಟನೆ

ಕನಕಪುರ: ನಾರಾಯಣಪುರ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆ ಹಣವನ್ನು ಸರ್ಕಾರಕ್ಕೆ ಜಮೆ ಮಾಡದೆ ಕರ ವಸೂಲಿಗಾರ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇತ್ತೀಚೆಗೆ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಪಂಚಾಯಿತಿಯಲ್ಲಿ ಕರ ವಸೂಲಿಗಾರನಾಗಿರುವ ವೈರಮುಡಿ ಎಂಬುವರು ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೆ ವಂಚಿಸಿದ್ದಾರೆ ಎಂದು ದೂರಿದರು.ತೆರಿಗೆ ಹಣ ದುರ್ಬಳಕೆ ಸಂಬಂಧ ವೈರಮುಡಿ ವಿರುದ್ಧ ತನಿಖೆ ನಡೆಸಬೇಕೆಂದು ಇತ್ತೀಚೆಗೆ ನಡೆದ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಣಯಕೈಗೊಂಡಿದ್ದರು. ಈ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕರ ವಸೂಲಿಗಾರನನ್ನು ಸೇವೆಯಿಂದ ಅಮಾನತುಗೊಳಿಸಬೇಕು. ತನಿಖೆ ನಡೆಸಿ ಹಣವನ್ನು ಅವರಿಂದ ಕಟ್ಟಿಸಬೇಕೆಂದು ಒತ್ತಾಯಿಸಿದರು.ವೈರಮುಡಿ ಎರಡು ರಸೀದಿ ಪುಸ್ತಕ ಇಟ್ಟುಕೊಂಡಿದ್ದಾರೆ. ರೈತರೊಬ್ಬರಿಂದ ₹2,400 ತೆರಿಗೆ ಪಡೆದು ಸರ್ಕಾರಕ್ಕೆ ₹400 ಮಾತ್ರ ಕಟ್ಟಿದ್ದಾರೆ. ಇದೇ ರೀತಿ ನೂರಾರು ರೈತರಿಂದ ಹಣ ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿದರು.ಪಿಡಿಒ ಆಶಾ ಮಾತನಾಡಿ, ‘ಕರ ವಸೂಲಿಗಾರ ವೈರಮುಡಿ ಹಣ ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಈಗಾಗಲೇ ಎಸ್‌ಡಿಎ ರಮೇಶ್‌ ಅವರು ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಗ್ರಾಮಸ್ಥರು ನೀಡಿರುವ ದೂರನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನಕಪುರ: ಇಂದು ಕಬ್ಬಾಳಮ್ಮ ದೇಗುಲ ಹುಂಡಿ ಹಣ ಎಣಿಕೆ

Tue Feb 1 , 2022
ಕನಕಪುರ: ಕಬ್ಬಾಳಮ್ಮ ದೇವಾಲಯದ ಹುಂಡಿ ಎಣಿಕೆ ನಡೆಯಿತು. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.ಹುಂಡಿಯಲ್ಲಿ ₹ 42,67,649 ಸಂಗ್ರಹವಾಗಿದೆ. ಭಕ್ತರಿಂದ ಸಂಗ್ರಹಗೊಂಡಿರುವ ಹಣವನ್ನು ಯೂನಿಯನ್‌ ಬ್ಯಾಂಕ್‌ನಲ್ಲಿ ದೇವಾಲಯದ ಹೆಸರಿನಲ್ಲಿರುವ ಖಾತೆಗೆ ಜಮಾ ಮಾಡ ಲಾಗಿದೆ ಎಂದು ಅಧಿಕಾರಿ ಲಕ್ಷ್ಮೀನಾರಾಯಣ ಮಾಹಿತಿ ನೀಡಿದರು.ರೆವಿನ್ಯೂ ಇನ್‌ಸ್ಪೆಕ್ಟರ್‌ ಬಸವರಾಜು, ಚನ್ನೇಗೌಡ, ಗ್ರಾಮ ಲೆಕ್ಕಿಗರಾದ ಮಹೇಶ್, ಶಿವಲಿಂಗಯ್ಯ, ಈಶ್ವರ ರಾವ್, ಅಶೋಕ್ ರಾಥೋಡ್, ಮೀನಾಕ್ಷಿ, ಮಂಜುನಾಥ್, ದೇವಾಲಯದ ಸಿಬ್ಬಂದಿ ಎಣಿಕೆ […]

Advertisement

Wordpress Social Share Plugin powered by Ultimatelysocial