ಕೇರಳತಿ v/s ಕನ್ನಡತಿ.

 

 

 

 

 

ಬೆಂಗಳೂರು: ಮಲಗಿದ್ದಾಗ ವಿಡಿಯೋ ಮಾಡಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕಳುಹಿಸಿದರೆ ಹೇಗೆ ಆಗಬಹುದು? ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಬಂದು ನಿದ್ದೆ ಮಾಡೋಣ ಎಂದು ತಲೆ ಒರಗಿಸಿದಾಗ ಪಕ್ಕದಲ್ಲಿದ್ದವರು ಜೋರಾಗಿ ಮಾತನಾಡಿದರೆ ಹೇಗಾಗಬಹುದು?

ಇಂತಹದೇ ಪರಿಸ್ಥಿತಿಯನ್ನು ವೈದ್ಯೆಯೊಬ್ಬರು ಅನುಭವಿಸಿರುವ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡಿದ್ದರು. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಬಹುಷಃ ಇದೇ ಕಾರಣಕ್ಕೆ ಇರಬೇಕು.

ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಈ ವೈದ್ಯೆಯ ವಿಡಿಯೋ ಈಗ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ. ಈಗ ಈ ಪ್ರಕರಣ ಈಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಸೃಷ್ಟಿ, ಬೆಳಗ್ಗೆ 8ರಿಂದ ರಾತ್ರಿ 9.30ರ ವರೆಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುತ್ತಾರೆ. ನಂತರ ರೂಮಿಗೆ ಬಂದು ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ನಿದ್ದೆ ಹೋಗುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೆಯೂ ಇವರು ಪಿ.ಜಿಯ ವಾರ್ಡನ್​ಗೆ ಮೌಖಿಕವಾಗಿ ದೂರು ನೀಡಿದ್ದರು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಇಷ್ಟಾದರೂ ಜನವರಿ 10ರ ಮುಂಜಾನೆ 2-3 ಗಂಟೆ ಹೊತ್ತಿಗೆ ವೈದ್ಯೆಯ ರೂಂ ಮೇಟ್​ ಆಗಿರುವ ಅಸೀಲಾ ಅಡಯೋಡಿ, ವಿಡಿಯೋ ಕಾಲಿನಲ್ಲಿದ್ದ ಆ ಬದಿಯ ವ್ಯಕ್ತಿಗೆ ಅಸಭ್ಯವಾಗಿ ತೋರಿಸಿದ್ದಾಳೆ. ಇದನ್ನು ಪ್ರಶ್ನಿಸಿದಕ್ಕೆ ವೈದ್ಯೆ ದೃಷ್ಟಿಗೆ ಈ ರೂಂ ಮೇಟ್ ‘ನಾನು ಕೇರಳದವಳು. ಹೆಚ್ಚು ಮಾತನಾಡಿದರೆ ವಾಮಾಚಾರ ಮಾಡುತ್ತೇನೆ’ ಎಂದು ಬೆದರಿಕೆ ಕೂಡ ಹಾಕಿದ್ದಳು.

ಹೀಗೆಲ್ಲಾ ಮಾಡಿದ್ದ ಅಸೀಲಾಳನ್ನು ಪ್ರಶ್ನಿಸಿದ್ದ ಡಾ.ಸೃಷ್ಟಿ ಇದನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ‘ಇದು ಬಿಟಿಎಂ ಲೇಔಟ್, ಇಲ್ಲಿ ಕೇರಳದವರು ಜಾಸ್ತಿ. ನಾವೆಲ್ಲರು ಸೇರಿ ನಿನ್ನನ್ನು ನೋಡಿಕೊಳ್ತೀವಿ. ಕನ್ನಡದವರು ಯೋಗ್ಯತೆ ಮತ್ತು ಕುಶಲತೆ ಇಲ್ಲದವರು. ನೀನು ಕನ್ನಡದಲ್ಲಿ ಮಾತನಾಡಬೇಡ’ ಎಂದು ಬೆದರಿಕೆ ಕೂಡ ಹಾಕಿದ್ದಾಳೆ ಎಂದು ವೈದ್ಯರು ಆರೋಪಿಸಿದ್ದಾರೆ. ಅದಲ್ಲದೇ, ಯೂ ಆಯಂಡ್​ ಯುವರ್​ ಕನ್ನಡ,ಫ* ಇಟ್​ ಎಂದು ಅಶ್ಲೀಲವಾಗಿ ಬೈದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ.ಇಷ್ಟೆಲ್ಲಾ ಬೈದ ಅಸೀಲಾ, ಹಲ್ಲೆ ಕೂಡ ಮಾಡಿರುವ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ಪಾರ್ಟ್‌ ಟೈಮ್‌, ವರ್ಕ್‌ ಫ್ರಮ್ ಹೋಮ್ ಜಾಬ್‌

Fri Jan 13 , 2023
ಇಂದು ಇಂಟರ್ನೆಟ್‌ ಜಗತ್ತು ಸಂಪಾದನೆಯನ್ನು ಸುಲಭಗೊಳಿಸಿದೆ. ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ತಮ್ಮ ಖರ್ಚು ವೆಚ್ಚಗಳಿಗೆ ತಾವೇ ಸಂಪಾದನೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಗೃಹಿಣಿ ಮನೆಯಲ್ಲೇ ಸಂಸಾರ ನಿಭಾಯಿಸಿಕೊಂಡು ಜತೆಗೆ ಪಾರ್ಟ್‌ ಟೈಮ್‌ ಉದ್ಯೋಗವನ್ನು ಮನೆಯಿಂದಲೇ ಮಾಡಬಹುದಾಗಿದೆ. ಅಂತಹ ಅವಕಾಶವನ್ನು ಇಂದಿನ ಜಗತ್ತು ನೀಡಿದೆ. ಅದಕ್ಕೆಲ್ಲಾ ಮೂಲಕ ಕಾರಣ ಇಂಟರ್ನೆಟ್, ಡಿಜಿಟಲೈಜೇಷನ್ ಆಗಿದೆ. ಈ ರೀತಿ ಆನ್‌ಲೈನ್‌ ವರ್ಕ್‌ ಫ್ರಮ್ […]

Advertisement

Wordpress Social Share Plugin powered by Ultimatelysocial