ಕನ್ನಡದಲ್ಲಿ ಎನ್‍ಇಟಿ ಪರೀಕ್ಷೆ ನಡೆಸುವಂತೆ ನಾಗಾಭರಣ ಒತ್ತಾಯ

ಬೆಂಗಳೂರು, ಮಾ.11- ಮಕ್ಕಳು ತಮ್ಮ ಹಕ್ಕುಗಳಿಂದ ಭಾಷಾ ಕಾರಣಕ್ಕಾಗಿ ವಂಚಿತ ರಾಗುತ್ತಿರುವುದರಿಂದ ಯುಜಿಸಿ ಇನ್ನು ಮುಂದೆ ಎನ್‍ಇಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ (ಪ್ರಾದೇಶಿಕ ಭಾಷೆ) ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.

 

ನಾಗಾಭರಣ ಒತ್ತಾಯಿಸಿದ್ದಾರೆ.

ಕನ್ನಡದ ಮಕ್ಕಳು ಈ ಪರೀಕ್ಷೆಗಳನ್ನು ಅವರಿಗೆ ಬರದ ಭಾಷೆಗಳಲ್ಲಿ ಬರೆಯುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫೆಲೋಶಿಪ್‍ಗೆ ಆಯ್ಕೆಯಾಗುತ್ತಿಲ್ಲ. ಯುಜಿಸಿ ಕನ್ನಡದಲ್ಲಿ (ಪ್ರಾದೇಶಿಕ ಭಾಷೆಯಲ್ಲಿ) ಪರೀಕ್ಷೆಗಳನ್ನು ನಡಿಸದೇ ಇರುವುದರಿಂದ ಹಿಂದಿಯೇತರ ಭಾಷೆಯ ಮಕ್ಕಳು ತಮ್ಮ ಹಕ್ಕುಗಳಿಂದ ಭಾಷಾ ಕಾರಣಕ್ಕಾಗಿ ವಂಚಿತರಾಗುತ್ತಿದ್ದಾರೆ.

ಈ ಬಾರಿಯ ಎನ್‍ಇಟಿ/ಜೆಆರ್‍ಎಫ್ ಪರೀಕ್ಷೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು ಎದುರಿಸಿದ ಸಮಸ್ಯೆಗಳು ತೀವ್ರ ಸ್ವರೂಪದವು. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಬಂದವು. ಕೆಲವು ಅಭ್ಯರ್ಥಿಗಳಿಗೆ ಕಂಪ್ಯೂಟರ್‍ನಲ್ಲಿ ಪ್ರಶ್ನೆಪತ್ರಿಕೆಯೇ ತೆರೆದು ಕೊಳ್ಳಲಿಲ್ಲ. ಯುಜಿಸಿಯು ಹಲವು ಕನ್ನಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶ ನಿರಾಕರಿಸಿತು, ಕೊನೆಗೆ ಪ್ರಕಟವಾದ ಕೀ ಉತ್ತರಗಳಲ್ಲೂ ಈ ಸಮಸ್ಯೆ ಉಂಟಾಯಿತು.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ 2-3 ಬಾರಿ ಪತ್ರ ಬರೆದು ಗಮನ ಸೆಳೆದಿತ್ತು. ಈ ಕುರಿತು ರಾಜ್ಯಸಭಾ ಸದಸ್ಯ ಎಲï.ಹನುಮಂತಯ್ಯನವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಇವೆಲ್ಲವನ್ನು ಕಡೆಗಣಿಸಿದ ಯುಜಿಸಿ ಫೆ.19ರಂದು ಫಲಿತಾಂಶ ಪ್ರಕಟಿಸಿತು. ಕನ್ನಡದಲ್ಲಿ 100 ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ 15 ಅಭ್ಯರ್ಥಿಗಳು ಫೆಲೊಶಿಪ್‍ಗೆ ಆಯ್ಕೆಯಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕøತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡುಬಂದರೆ, ಕನ್ನಡದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹಿಂದಿಗೆ ಅಂದಾಜು 182 ಕೋಟಿ ರೂ., ಸಂಸ್ಕøತಕ್ಕೆ ಅಂದಾಜು 47 ಕೋಟಿ ರೂ.ಮೀಸಲಿಡಲಾಗಿದೆ. ಕನ್ನಡ ಭಾಷೆಗೆ ಕೇವಲ 3.3 ಕೋಟಿ ಮೀಸಲಿಟ್ಟಿದೆ.

ಕನ್ನಡವೂ ಸೇರಿದಂತೆ ಇತರ ದೇಶಭಾಷೆಗಳ ಅಧ್ಯಯನಗಳ ಅವಕಾಶಗಳನ್ನು ಹೀಗೆ ಮುಚ್ಚುತ್ತಾ ಬರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿಯೇ ಆಗಿದೆ. ಯುಜಿಸಿಯಿಂದ ಕನ್ನಡ ಸಂಶೋಧನೆಗೆ ಪ್ರೋತ್ಸಾಹವೇ ಇಲ್ಲವಾದಲ್ಲಿ ಸಹಜವಾಗಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳ ಮೌಲ್ಯಾಂಕನ ಕುಸಿದು, ಯುಜಿಸಿಯಿಂದ ಬರುವ ಧನಸಹಾಯ ಕಡಿಮೆಯಾಗಿ ವಿಶ್ವ ವಿದ್ಯಾಲಯಗಳು ದುರ್ಬಲಗೊಳ್ಳುತ್ತವೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಮತ್ತೊಮ್ಮೆ ಸಿಎಂ ಆಗೋ ಪ್ರಶ್ನೆಯೇ ಇಲ್ಲ : ಬಿಎಸ್‌ವೈ ಸ್ಪಷ್ಟನೆ

Fri Mar 11 , 2022
ಬೆಂಗಳೂರು,ಮಾ.11- ಮತ್ತೊಮ್ಮೆ ತಾವು ರಾಜ್ಯದ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸಭೆಯಲ್ಲಿಂದು ಆಯವ್ಯಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಸಿಎಂ ಆಗುತ್ತೇನೆಂದು ಹೇಳಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದರು. ರಾಜ್ಯಾದ್ಯಂತ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್, ಪಕ್ಷದ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಎಲ್ಲ ಮುಖಂಡರೊಂದಿಗೆ ಪ್ರವಾಸ ಮಾಡಿ ಮತ್ತೆ […]

Advertisement

Wordpress Social Share Plugin powered by Ultimatelysocial