ಮುಂಬೈನಲ್ಲಿ ವಿವಾಹ ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಪತ್ನಿ

ಮುಂಬೈ: ನಗರದಲ್ಲಿ ಶೇ.3ರಷ್ಟು ವಿಚ್ಛೇದನಕ್ಕೆ ಮುಂಬೈನ ಟ್ರಾಫಿಕ್ ಕಾರಣ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಇಂದು ಹೇಳಿದ್ದಾರೆ.ವಾಣಿಜ್ಯ ರಾಜಧಾನಿಯಲ್ಲಿ ರಸ್ತೆಗಳ ಸ್ಥಿತಿ ಮತ್ತು ಟ್ರಾಫಿಕ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಚಿತ್ರವಾದ ಹೇಳಿಕೆಯನ್ನು ನೀಡಿದರು.ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ಅಮೃತಾ ಫಡ್ನವಿಸ್ ಹೆಸರನ್ನು ಎತ್ತದೆ ಅವರ ಹೇಳಿಕೆಯನ್ನು ತಮಾಷೆ ಮಾಡಿದರು. ” ಇದು ದಿನದ ಅತ್ಯುತ್ತಮ ತರ್ಕ” ಎಂದು ಕರೆದರು.ಅಮೃತಾ ಫಡ್ನವಿಸ್ ಅವರ ಹೇಳಿಕೆಯನ್ನು ಅಪಹಾಸ್ಯ ಮಾಡುತ್ತಿರುವ ಅನೇಕ ಜೋಕ್ ಗಳು ಹಾಗೂ ಮೀಮ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.”ಮುಂಬೈನಲ್ಲಿ ಮೂರು ಪ್ರತಿಶತದಷ್ಟು ವಿಚ್ಛೇದನಗಳು ಟ್ರಾಫಿಕ್ ಜಾಮ್‌ನಿಂದ ಉಂಟಾಗುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಟ್ರಾಫಿಕ್ ನಿಂದಾಗಿ ಜನರು ತಮ್ಮ ಕುಟುಂಬಗಳಿಗೆ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದರು.ರಸ್ತೆಗಳಲ್ಲಿನ ಗುಂಡಿಗಳಿಂದ ಹಾಗೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವುದರಿಂದ ವೈಯಕ್ತಿಕವಾಗಿ ತೊಂದರೆಗೊಳಗಾಗಿದ್ದೇನೆ ಎಂದು ಅಮೃತಾ ಫಡ್ನವಿಸ್ ಹೇಳಿದ್ದಾರೆ.”ನಾನು ದೇವೇಂದ್ರ ಫಡ್ನವಿಸ್ ಅವರ ಪತ್ನಿ ಎಂಬುದನ್ನು ಮರೆತುಬಿಡಿ. ನಾನು ಮಹಿಳೆಯಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನನಗೂ ಟ್ರಾಫಿಕ್ ಬಿಸಿ ತಟ್ಟಿದೆ. ರಸ್ತೆ ಹೊಂಡಗಳು ನಮಗೆ ಹೇಗೆ ತೊಂದರೆ ನೀಡುತ್ತದೆ ಎಂದು ತಿಳಿದಿದೆ” ಎಂದರು.”3 ಶೇ. ಮುಂಬೈಕರ್‌ಗಳು ರಸ್ತೆಗಳಲ್ಲಿನ ಟ್ರಾಫಿಕ್‌ನಿಂದಾಗಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳುವ ಮಹಿಳೆಗೆ ದಿನದ ಅತ್ಯುತ್ತಮ ತರ್ಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ದಯವಿಟ್ಟು ಮನಸ್ಸಿನ ಮೇಲೆ ಬ್ರೇಕ್ ಹಾಕುವುದಕ್ಕಿಂತ ರಜೆ ತೆಗೆದುಕೊಳ್ಳಿ. ಬೆಂಗಳೂರಿನಕುಟುಂಬಗಳು ಇದನ್ನು ಓದುವುದನ್ನು ತಪ್ಪಿಸಿ. ಇದು ನಿಮ್ಮ ಮದುವೆಗೆ ಮಾರಕವಾಗಬಹುದು” ಎಂದು ನಗುವ ಎಮೋಜಿಯೊಂದಿಗೆ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KERALA:30% ಕ್ಕಿಂತ ಹೆಚ್ಚು TPR ನೊಂದಿಗೆ ಶಾಲೆಗಳನ್ನು ಪುನಃ ತೆರೆಯಲು ಕೇರಳ;

Sat Feb 5 , 2022
ಆದರೆ ಕೆಲವು ರಾಜ್ಯಗಳು ಇನ್ನೂ ದೇಶದಲ್ಲಿ ಹೆಚ್ಚಿನ ಸಕಾರಾತ್ಮಕ ದರವನ್ನು ತೋರಿಸುತ್ತಿವೆ. ಕೇರಳದ ಟಿಪಿಆರ್ ಒಂದು ವಾರದೊಳಗೆ ಶೇಕಡಾ 32 ಕ್ಕೆ ಇಳಿದಿದೆ, ಇದು ಇನ್ನೂ ಹೆಚ್ಚಾಗಿದೆ, ಕಳೆದ ವಾರ ಶೇಕಡಾ 50 ರಿಂದ. ಆದರೆ, ಸೋಮವಾರದಿಂದ ಶಾಲೆಗಳನ್ನು ತೆರೆಯಲು ರಾಜ್ಯ ನಿರ್ಧರಿಸಿದೆ. ಅದೇ ರೀತಿ ಮುಂದಿನ ವಾರದಿಂದ ಎಲ್ಲಾ ಪೂಜಾ ಸ್ಥಳಗಳು ಭಕ್ತರಿಗಾಗಿ ತೆರೆದಿರುತ್ತವೆ. ಕೇಂದ್ರದ ಪ್ರಕಾರ, ಓಮಿಕ್ರಾನ್ ಈಗ ದೇಶದಲ್ಲಿ ಪ್ರಬಲ ತಳಿಯಾಗಿದೆ. ಓಮಿಕ್ರಾನ್ ನಿರ್ದಿಷ್ಟ ಲಸಿಕೆ […]

Advertisement

Wordpress Social Share Plugin powered by Ultimatelysocial