ʼಟೊಮೆಟೊʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ

ʼಟೊಮೆಟೊʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ

ಟೊಮೆಟೊ ಹಣ್ಣು ಹಾಗು ತರಕಾರಿಯಾಗಿ ಬಳಕೆಯಾಗುವ ಏಕೈಕ ಪ್ರಬೇಧ. ಹಾಗಾಗಿ ಇದರಲ್ಲಿ ಹಣ್ಣಿನ ಹಾಗೂ ತರಕಾರಿಯ ಪೌಷ್ಟಿಕಾಂಶಗಳು ಹೇರಳವಾಗಿವೆ. ದಿನನಿತ್ಯ ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಪ್ರಮಾಣದ ವಿಟಮಿನ್ ಅನ್ನು ಪಡೆಯಬಹುದು.

ಟೊಮೆಟೊ ಹಣ್ಣಿನಲ್ಲಿರುವ ಕೆಲವು ಅಂಶಗಳು ಹೃದಯಾಘಾತವನ್ನು ತಡೆಯುವ ಗುಣವನ್ನು ಹೊಂದಿದೆ.

ದಿನನಿತ್ಯ ಇದನ್ನು ಸೇವಿಸುವುದರಿಂದ ಕ್ಯಾನ್ಸರ್ ನಂತಹ ಮಹಾಮಾರಿಯನ್ನು ತಡೆಗಟ್ಟಬಹುದು ಎಂಬುದನ್ನು ಕೆಲವು ಸಂಶೋಧನೆಗಳು ದೃಢಪಡಿಸಿವೆ.

ನಿತ್ಯದ ಊಟದಲ್ಲಿ ಟೊಮೆಟೊ ಸೂಪ್ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ ಅಲ್ಲದೆ ಇದು ಮಲಬದ್ಧತೆಯನ್ನು ತಡೆಯುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲು ಇದು ಸಹಕಾರಿ. ಊಟಕ್ಕಿಂತ ಮೊದಲು ಸೂಪ್ ಸೇವಿಸುವುದರಿಂದ ಕಡಿಮೆ ಪ್ರಮಾಣದ ಆಹಾರ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳಬಹುದು ಹಾಗೂ ದೇಹ ತೂಕವನ್ನು ನಿಯಂತ್ರಿಸಬಹುದು.

ಪ್ಲೇಟ್ಲೇಟ್ ಕೌಂಟ್ ಗಳನ್ನು ಸಾಮಾನ್ಯ ಪ್ರಮಾಣಕ್ಕಿಳಿಸುವ ಇವು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿರುವವರಿಗೆ ಟೊಮೆಟೊ ಹಣ್ಣು ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ.

ಮೂಳೆಗಳನ್ನು ಬಲಗೊಳಿಸುವ ವಿಟಮಿನ್ ಕೆ ಶಕ್ತಿಯೂ ಟೊಮೆಟೊದಲ್ಲಿದೆ. ಇದು ಮೂಳೆಗಳು ಶಿಥಿಲವಾಗದಂತೆ ತಡೆಯುತ್ತದೆ ಮಾತ್ರವಲ್ಲ ಗಟ್ಟಿಯಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ. ನಿಮ್ಮ ತ್ವಚೆಯ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುವ ಟೊಮೆಟೊವನ್ನು ಪ್ರತಿ ನಿತ್ಯ ಬಳಸಿ ಹಾಗೂ ಆಕರ್ಷಕವಾಗಿ ಕಾಣಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Health Tips: ಇಮ್ಯೂನಿಟಿ ಹೆಚ್ಚಿಸೋಕೆ ಮಕ್ಕಳನ್ನು ಮಣ್ಣಿಗೆ ಬಿಡಿ..

Tue Dec 28 , 2021
ಬೀದಿ ಬದಿಯಲ್ಲಿ, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮಣ್ಣು-ಮರಳಿನಲ್ಲಿ  ಆಡುತ್ತಿರುವ ಮಕ್ಕಳ ನ್ನು ಕಂಡು ಬಹುತೇಕ ಅಮ್ಮಂದಿರಿಗೆ ಅಚ್ಚರಿಯಾಗುತ್ತದೆ. ಇಂತಹ ಮಣ್ಣಿನಲ್ಲಿ ಆಟವಾಡುತ್ತಿದ್ದರೂ ಈ ಮಕ್ಕಳು ಚೆನ್ನಾಗಿರುತ್ತಾರಲ್ಲ ಎನಿಸುತ್ತದೆ. ಏಕೆಂದರೆ, ಎಷ್ಟೇ ಸ್ವಚ್ಛತೆ  ಪರಿಪಾಲನೆ ಮಾಡಿದರೂ ತಮ್ಮ ಮನೆಗಳಲ್ಲಿ ನೆಗಡಿ, ಜ್ವರ  ಎಂದು ತಿಂಗಳಿಗೆ ಒಮ್ಮೆಯಾದರೂ ಮಲಗುವ ಮಕ್ಕಳನ್ನು ಅವರು ಕಂಡಿರುತ್ತಾರೆ. ನಿಮಗೆ ಗೊತ್ತೇ? ಬಾಲ್ಯಕಾಲದಲ್ಲಿ ಕೆಲವು ಸೂಕ್ಷ್ಮಾಣುಜೀವಿ  ಗಳ ಒಡನಾಟಕ್ಕೆ ಬಂದಾಗಲೇ ಮುಂದಿನ ದಿನಗಳಲ್ಲಿ ರೋಗ ನಿರೋಧಕತೆ  ಸದೃಢಗೊಳ್ಳುತ್ತದೆ. […]

Advertisement

Wordpress Social Share Plugin powered by Ultimatelysocial