ಅಕ್ಕಿಗೆ ಸರ್ಪ್ರೈಸಿಂಗ್ ಗಿಫ್ಟ್ ಕೊಟ್ಟ ಕಪಿಲ್ ಶರ್ಮಾ

ಬಾಲಿವುಡ್ ನ ಈ ನಟನ ಸಿನಿಮಾಗಳು ಅಂದ್ರೆ ಸಿನಿಪ್ರಿಯರು ಹುಚ್ಚೆದ್ದು ಕುಣೀತಾರೆ.. ಚಿತ್ರರರಂಗಕ್ಕೆ ಎಂಟ್ರಿ ಕೊಟ್ಟು ಮೂರು ದಶಕಗಳೆ ಆದ್ರೂ ಇವತ್ತಿಗೂ ಬಿಟೌನ್ ನಲ್ಲಿ ಅವರಿಗಿರುವ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ.. ಎಸ್ ನಾನ್ ಹೇಳ್ತಿರೋದು ಅದೇ ಕಿಲಾಡಿ ಅಕ್ಷಯ್ ಕುಮಾರ್ ಅವರ ಬಗ್ಗೆ.. ಅಂದಹಾಗೆ ಇತ್ತೀಚೆಗೆ ಅಕ್ಕಿ ಕಪಿಲ್ ಶರ್ಮಾ ಶೊಗೆ ಹೋದಾಗ ಕಪಿಲ್ ಅಕ್ಕಿಗೆ ಒಂದು ಸರ್ಪ್ರೈಸಿಂಗ್ ಗಿಫ್ಟ್ ಕೊಟ್ಟಿದ್ದಾರೆ.. ಆ ಗಿಫ್ಟ್ ನೋಡಿ ಅಕ್ಕಿ ಶಾಕ್ ಆಗಿದ್ದಾರೆ.. ಅಷ್ಟಕ್ಕೂ ಕಪಿಲ್ ಅಕ್ಷಯ್ ಗೆ ಕೊಟ್ಟ ಆ ಸರ್ಪ್ರೈಸಿಂಗ್ ಗಿಫ್ಟ್ ಏನು..? ಅದರ ಹಿಂದಿನ ಸೀಕ್ರೆಟ್ ಏನು..?

ಅಕ್ಕಿಗೆ ಸರ್ಪ್ರೈಸಿಂಗ್ ಗಿಫ್ಟ್ ಕೊಟ್ಟ ಕಪಿಲ್ ಶರ್ಮಾ

೯೦ರ ದಶಕದಿಂದ ಇಲ್ಲಿವರೆಗೂ ತಮ್ಮದೇ ಡಿಫರೆಂಟ್ ಮ್ಯಾನರಿಸಂ ಹಾಗೂ ವಿಭಿನ್ನ ಶೈಲಿಯ ನಟನೆಯ ಮೂಲಕ ಬಾಲಿವುಡ್ ಸಿನಿ ದುನಿಯಾದಲ್ಲಿ ಸ್ಟಾರ್ ನಟರಾಗಿ ಮಿಂಚ್ತಿರುವ ನಟ ಅಕ್ಷಯ್ ಕುಮಾರ್.. ಕಿಲಾಡಿ ಅಕ್ಕಿ ಸಿನಿಮಾಗಳು ಅಂದ್ರೆ ಆ ಚಿತ್ರಗಳಲ್ಲಿ ಸಂತಿAಗ್ ಸ್ಪೆಷಾಲಿಟಿ ಇದ್ದೇ ಇರುತ್ತೆ.. ಅದ್ಯಾವ ರೀತಿಯ ಚಿತ್ರಕತೆಯೇ ಇದ್ರೂ ಅಲ್ಲಿ ಅಕ್ಷಯ್ ನಟನೆ ಇದೆ ಅಂದ್ಮೇಲೆ ಆ ಸಿನಿಮಾಗಳ ಗಮ್ಮತ್ತೇ ಬೇರೆಯಾಗಿರುತ್ತೆ.. ಅದ್ಭುತ ನಟನಾಗಿ ಬಣ್ಣದ ಲೋಕದಲ್ಲಿ ಸ್ಟಾರ್ಡಮ್ ಕ್ರಿಯೇಟ್ ಮಾಡಿರುವ ನಟ ಅಕ್ಷಯ್ ಕೇವಲ ಬಿಗ್ ಸ್ಕ್ರೀನ್ ನಲ್ಲಿ ಮಾತ್ರ ಹೀರೋ ಅಲ್ಲಾ, ಸಾಮಾಜಿಕ ಕಳಕಳಿಯ ಕೆಲಸಗಳನ್ನ ಮಾಡೋದ್ರ ಮೂಲಕ ರಿಯಲ್ ಲೈಫ್ ನಲ್ಲೂ ಹೀರೋ ಅಗಿ ತಮ್ಮ ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ.. ಇಂತಹ ಸ್ಟಾರ್ ಸೆಲೆಬ್ರೆಟಿ ಅಕ್ಷಯ್ ಕುಮಾರ್ ಗೆ ಇತ್ತೀಚೆಗೆ ನಿರೂಪಕ ಕಪಿಲ್ ಶರ್ಮಾ ಸರ್ಪ್ರೈಸಿಂಗ್ ಗಿಫ್ಟ್ ವೊಂದನ್ನ ಕೊಟ್ಟಿದ್ದಾರೆ..

ಅಕ್ಷಯ್ ಗೆ ಕಪಿಲ್ ಈ ಗಿಫ್ಟ್ ಕೊಡೋದ್ರ ಹಿಂದಿನ ಸೀಕ್ರೆಟ್ ಏನ್ ಗೊತ್ತಾ..?

ಎಸ್, ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಹಿಂದಿ ಕಿರುತೆರೆಯ ಪ್ರಸಿದ್ಧ ಕಾಮಿಡಿ ಶೋ ದಿ ಕಪಿಲ್ ಶರ್ಮಾ ಶೋಗೆ ಭೇಟಿ ನೀಡಿದ್ರು.. ಈ ಸಂದರ್ಭದಲ್ಲಿ ಕಪಿಲ್ ಶರ್ಮಾ ಅಕ್ಕಿಗೆ ಹಣ ಎಣಿಸುವ ಮಿಷಿನ್ ನ್ನ ಗಿಫ್ಟ್ ಅಗಿ ಕೊಡುವುದರ ಮೂಲಕ ಸರ್ಪ್ರೈಸ್ ನೀಡಿದ್ದಾರೆ.. ಅಕ್ಕಿಗೆ ಕಪಿಲ್ ಈ ಗಿಫ್ಟ್ ನೀಡೋದಕ್ಕೆ ಕಾರಣಾನೂ ಇದೆ.. ಅಂದಹಾಗೆ ಅಕ್ಕಿ ಕೇವಲ ಬಾಲಿವುಡ್ ನ ಸ್ಟಾರ್ ನಟರಷ್ಟೇ ಅಲ್ಲಾ.. ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರೂ ಕೂಡ ಇದೆ.. ಅದ್ರಲ್ಲೂ ೨೦೨೦ ರ ಫೋರ್ಬ್ಸ್ ಪಟ್ಟಿಯ ಪ್ರಕಾರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಬಿಟೌನ್ ನ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ೬ಮೇ ಸ್ಥಾನದಲ್ಲಿದ್ದಾರೆ.. ವಿಲ್ ಸ್ಮಿತ್, ಜಾಕಿ ಚಾನ್ ಸೇರಿದಂತೆ ಅನೇಕ ಹೆಸರಾಂತ ನಟರನ್ನೆಲ್ಲಾ ಹಿಂದಿಕ್ಕಿ ಅಕ್ಕಿ ಉನ್ನತ ಸ್ಥಾನಕ್ಕೇರಿದ್ದಾರೆ.. ಅಕ್ಕಿ ಹೀಗೆ ಹೆಚ್ಚು ರೆನ್ಯೂಮರೇಶನ್ ಪಡೆದುಕೊಳ್ಳೋ ಕಾರಣಕ್ಕೆ ಕಪಿಲ್ ಬಿಟೌನ್ ಕಿಲಾಡಿಗೆ ಇಂತಹ ಗಿಫ್ಟ್ ಕೊಟ್ಟಿದ್ದಾರೆ..

ಅಂದಹಾಗೆ ನಟ ಅಕ್ಷಯ್ ಕುಮಾರ್ ಪ್ರತೀ ವರ್ಷ ಕೂಡ ಸಾಕಷ್ಟು ಸೂಪರ್ ಚಿತ್ರಗಳನ್ನ ಕೊಡ್ತಾನೇ ಬರ್ತಿದ್ದಾರೆ.. ಹೀಗಾಗಿಯೇ ಬಾಲಿವುಡ್ ನಲ್ಲಿ ಅಕ್ಕಿಗೆ ಈಗ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದೀಗ ಅಕ್ಕಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಅವರ ನಟನೆಯ ಮೋಸ್ಟ್ ಅವೇಯ್ಟೆಡ್ ಅಪ್ ಕಮಿಂಗ್ ಸಿನಿಮಾ ಅಂದ್ರೆ ಅದು ಲಕ್ಷ್ಮಿ ಬಾಂಬ್.. ಸದ್ಯ ನಟ ಅಕ್ಷಯ್ ಕುಮಾರ್ ಈ ಚಿತ್ರದ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ..

ಗಿಫ್ಟ್ ನೋಡಿ ಕಪಿಲ್ ಗೆ ಕಾಲೆಳೆದ ಬಿಟೌನ್ ಕಿಲಾಡಿ

ಕಪಿಲ್ ಶರ್ಮಾ ಕೊಟ್ಟ ಗಿಫ್ಟ್ ನೋಡಿ ಅಚ್ಚರಿಗೊಂಡ ಅಕ್ಕಿ, ಕಪಿಲ್ ಗೆ ಕಾಲೆಳೆದಿದ್ದಾರೆ.. ಇದು ಹಣ ಎಣಿಸುವ ಯಂತ್ರ, ಇದನ್ನ ಕಪಿಲ್ ಶರ್ಮಾ ಅವರ ಮನೆಯಿಂದ ತಂದಿದ್ದಾರೆ.. ಚಿತ್ರರಂಗದಲ್ಲಿ ಗಳಿಸುವ ಹಣದ ಅರ್ಧದಷ್ಟು ಅವರೇ ತಿನ್ನುತ್ತಾರೆ ಎಂದು ಹಾಸ್ಯ ಮಾಡಿದ್ದಾರೆ.. ಅಲ್ಲದೆ ಅಕ್ಷಯ್ ಕುಮಾರ್ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದ ಫೋಟೋ ಶೇರ್ ಮಾಡಿ, ನಿಮ್ಮ ಶೋ ಇಲ್ಲದೆ ಸಿನಿಮಾ ಪ್ರೊಮೋಷನ್ ಪೂರ್ಣವಾಗಲ್ಲ ಎಂದು ಟ್ವೀಟ್ ಮಾಡಿದ್ದಾರೆ.. ಅಂದಹಾಗೆ ಅಕ್ಕಿ ನಟನೆಯ ಬಹುನಿರೀಕ್ಷಿತ ಲಕ್ಷ್ಮಿ ಬಾಂಬ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಅಗ್ತಿದೆ.. ಇದು ತಮಿಳಿನ ಕಾಂಚನ ಚಿತ್ರದ ರಿಮೇಕ್ ಆಗಿದ್ದು, ಈ ಚಿತ್ರದಲ್ಲಿ ಅಕ್ಕಿಗೆ ಜೋಡಿಯಾಗಿ ನಟಿ ಕಿಯಾರಾ ಅಡ್ವಾನಿ ಬಣ್ಣಹಚ್ಚಿದ್ದಾರೆ.. ರಾಘವ್ ಲಾರೆನ್ಸ್ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.. ಇದೇ ನವೆಂಬರ್ ೯ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ.. ಒಟ್ಟಾರೆ ಅಕ್ಕಿಗೆ ಕಪಿಲ್ ಸರ್ಪ್ರೈಸ್ ಗಿಫ್ಟ್ ಕೊಟ್ಟಿರೋದನ್ನ ನೋಡಿ ಅವರ ಫ್ಯಾನ್ಸ್ ಕೂಡ ಖುಷಿ ಪಡ್ತಿದ್ದಾರೆ..

 

 

Please follow and like us:

Leave a Reply

Your email address will not be published. Required fields are marked *

Next Post

ಡ್ರಗ್ ಜಾಲದಲ್ಲಿ ಸದ್ದು ಮಾಡಿತ್ತು ಕರಣ್ ಮನೆಯ ಪಾರ್ಟಿ ವೀಡಿಯೋ

Thu Oct 29 , 2020
ಪಾರ್ಟಿ ಕಂಟಕದಿಂದ ಕರಣ್ ಸೇಫ್  ಡ್ರಗ್ ಮಾಫಿಯಾ ವಿಚಾರದಲ್ಲಿ ಬಾಲಿವುಡ್ ಬಣ್ಣದ ಲೋಕದ ಬಗ್ಗೆ ಇತ್ತೀಚೆಗೆ ಹೆಚ್ಚು ಸುದ್ದಿಗಳು ಹರಿದಾಡಿದ್ವು.. ಬಿಟೌನ್ ನ ನಟ, ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ, ಬಾಲಿವುಡ್ ಚಿತ್ರರಂಗದ ಸಾಕಷ್ಟು ಜನ ಸೆಲೆಬ್ರೆಟಿಗಳಿಗೆ ಕಂಟಕವನ್ನ ತಂದಿತ್ತು.. ಇದೀಗ ಕರಣ್ ಅವರ ಪಾರ್ಟಿ ವೀಡಿಯೋದ ಸಮಸ್ಯೆಗೆ ಅಧಿಕೃತವಾಗಿ ಪರಿಹಾರ ಸಿಕ್ಕಂತಾಗಿದೆ.. ಕರಣ್ ಜೋಹರ್ ಪಾರ್ಟಿ ವೀಡಿಯೋ ವಿವಾದಕ್ಕೆ ಅಧಿಕೃತ ಕ್ಲೀನ್ ಚಿಟ್ […]

Advertisement

Wordpress Social Share Plugin powered by Ultimatelysocial