ಕರಿಯ ಚಿತ್ರಕ್ಕೆ 5000 ಪಡೆದಿದ್ದ ದರ್ಶನ್ ಮೊದಲ ಸಿನಿಮಾ ಮೆಜೆಸ್ಟಿಕ್‌ಗೆ ಪಡೆದ ಹಣವೆಷ್ಟು.

ದ್ಯ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮಿಂಚುತ್ತಿರುವ ನಟ ದರ್ಶನ್ ಎಂದರೆ ನಿರ್ಮಾಪಕರಿಗೆ ಫೇವರಿಟ್. ದರ್ಶನ್ ಸಿನಿಮಾ ಎಂದರೆ ಎಷ್ಟೇ ಖರ್ಚು ಮಾಡಿದರೂ ಹಣ ವಾಪಸ್ ಕೈಸೇರಲಿದೆ ಎನ್ನುವ ಖಾತರಿ ನಿರ್ಮಾಪಕರಲ್ಲಿದೆ. ಹೀಗಾಗಿಯೇ ದರ್ಶನ್ ಸಿನಿಮಾಗೆ ಬಂಡವಾಳ ಹೂಡಲು ನಿರ್ಮಾಪಕರು ಮುಗಿಬೀಳುತ್ತಾರೆ. ಹೀಗೆ ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿರುವ ದರ್ಶನ್ ಸಿನಿ ಜರ್ನಿ ಸುಲಭದ್ದಾಗಿರಲಿಲ್ಲ. ಕನ್ನಡ ಚಲನಚಿತ್ರರಂಗದ ಅನೇಕ ದೊಡ್ಡ ಸಿನಿಮಾಗಳಲ್ಲಿ ನಟಿಸಿ, ಬಹುತೇಕ ಎಲ್ಲಾ ದಿಗ್ಗಜ ನಟರ ಜತೆಯೂ ಕೆಲಸ ಮಾಡಿದ್ದಂತಹ ಹಿರಿಯ ಕಲಾವಿದ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಸಹ ದರ್ಶನ್ ಸಿನಿಮಾ ಕ್ಷೇತ್ರ ಪ್ರವೇಶಿಸಬೇಕೆಂದುಕೊಂಡಾಗ ಯಾರೂ ಸಹ ರೆಡ್ ಕಾರ್ಪೆಟ್ ಹಾಸಲಿಲ್ಲ.ಮೊದಲಿಗೆ ಲೈಟ್ ಬಾಯ್ ಆಗಿ ಸಿನಿಮಾ ಕ್ಷೇತ್ರಕ್ಕೆ ಧುಮುಕಿದ ದರ್ಶನ್ ಬಳಿಕ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿದರು. 1997ರಲ್ಲಿ ಮಹಾಭಾರತ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕಲಾವಿದನಾಗಿ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ ದರ್ಶನ್ ಬಳಿಕ ದೇವರ ಮಗ, ವಲ್ಲರಸು, ಎಲ್ಲರ ಮನೆ ದೋಸೇನೂ, ಮಿಸ್ಟರ್ ಹರಿಶ್ಚಂದ್ರ ಹಾಗೂ ಭೂತಯ್ಯನ ಮಕ್ಕಳು ಚಿತ್ರಗಳಲ್ಲಿ ದರ್ಶನ್ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ಹೀಗೆ ಒಟ್ಟು ಆರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ ನಟ ದರ್ಶನ್ 2002ರ ಫೆಬ್ರವರಿ 8ರಂದು ಬಿಡುಗಡೆಗೊಂಡ ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದುಕೊಂಡರು. ಇನ್ನು ಈ ಚಿತ್ರ ತೆರೆಕಂಡು 21 ವರ್ಷಗಳು ಕಳೆದಿದ್ದು, ದರ್ಶನ್ ಅಭಿಮಾನಿಗಳು ಚಿತ್ರದ ವಾರ್ಷಿಕೋತ್ಸವದ ಕುರಿತು ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿರುವ ದರ್ಶನ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ಮೆಜೆಸ್ಟಿಕ್‌ಗೆ ಪಡೆದಿದ್ದ ಸಂಭಾವನೆಯನ್ನು ಎಷ್ಟು ಎಂಬುದನ್ನು ಕೇಳಿದ್ರೆ ಒಮ್ಮೆ ಆಶ್ಚರ್ಯವಾಗುವುದಂತೂ ಖಚಿತ. ಇನ್ನು ಈ ಚಿತ್ರಕ್ಕಾಗಿ ಎಷ್ಟು ಸಂಭಾವನೆ ಪಡೆದಿದ್ದೆ ಎಂಬುದನ್ನು ಸ್ವತಃ ದರ್ಶನ್ ಅವರೇ ಈ ಹಿಂದಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿನಿಗೆ ನಡು ರಸ್ತೆಯಲ್ಲಿ ತಾಳಿ ಕಟ್ಟಿದ ವಿಡಿಯೋ ವೈರಲ್.

Thu Feb 9 , 2023
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವಿಡಿಯೋ ಒಂದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ.ಇದು ಮಂಡ್ಯದ ರೋಟರಿ ಭವನದ ಮುಂದೆ ನಡೆದಿರುವ ಘಟನೆ ಎಂದು ಹೇಳಿ ವಿಡಿಯೋ ಶೇರ್‌ ಮಾಡಲಾಗುತ್ತಿದ್ದು, ನಡು ರಸ್ತೆಯಲ್ಲೇ ವಿದ್ಯಾರ್ಥಿನಿಗೆ ತಾಳಿ ಕಟ್ಟಿದರೂ ಪೊಲೀಸರೇಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಲಾಗುತ್ತಿದೆ. ಇದಕ್ಕೆ ಈಗ ಮಂಡ್ಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದು 2021 ರಲ್ಲಿ ನಡೆದ ಘಟನೆಯಾಗಿದ್ದು, ಈ ಬಗ್ಗೆ ಮಂಡ್ಯ […]

Advertisement

Wordpress Social Share Plugin powered by Ultimatelysocial