ಉತ್ತರ ಕೊರಿಯಾದಲ್ಲಿ 10 ದಿನ ನಗುವಂತಿಲ್ಲ, ಹೊರ ಹೋಗುವಂತೆಯೂ ಇಲ್ಲ!

ತಂದೆ ನಿಧನದ ಶೋಕಾಚರಣೆ.ಉತ್ತರ ಕೊರಿಯಾದಲ್ಲಿ 10 ದಿನ ನಗುವಂತಿಲ್ಲ, ಹೊರ ಹೋಗುವಂತೆಯೂ ಇಲ್ಲ!

ಉತ್ತರಕೊರಿಯಾ: ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ, ದಿವಂಗತ ಕಿಮ್ ಜಾಂಗ್ ಇಲ್ ನಿಧನವಾಗಿ ಇಂದಿಗೆ (ಡಿಸೆಂಬರ್ 17) ಹತ್ತು ವರ್ಷವಾಗಿದೆ. ದೇಶದಲ್ಲಿ 11 ದಿನಗಳ ಕಾಲ ಶೋಕಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ನಾಗರಿಕರು ನಗುವುದನ್ನು, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕಿಮ್ ಜಾಂಗ್ ಉನ್ ಫರ್ಮಾನು ಹೊರಡಿಸಿರುವುದಾಗಿ ವರದಿ ತಿಳಿಸಿದೆ.

ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕಿಮ್ ಜಾಂಗ್ ಇಲ್ 2011ರ ಡಿಸೆಂಬರ್ 17ರಂದು ಸಾವನ್ನಪ್ಪಿದ್ದರು. ಕಿಮ್ ಜಾಂಗ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶಾದ್ಯಂತ ನಗುವುದು ಸೇರಿದಂತೆ ಹಲವಾರು ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.

ಶೋಕಾಚರಣೆ ನಡೆಯಲಿರುವ ಹತ್ತು ದಿನಗಳ ಕಾಲ ಉತ್ತರ ಕೊರಿಯಾದ ಜನರು ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ, ಶಾಪಿಂಗ್ ಗೆ ಹೋಗುವಂತಿಲ್ಲ, ವಿರಾಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತಿಲ್ಲ ಎಂದು ಗಡಿ ನಗರವಾದ ಸಿನುಯಿಜು ನಿವಾಸಿಯೊಬ್ಬರು  ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

12 ವರ್ಷದ ಹಿಂದೆ ಕಳೆದುಹೋದ ಗಂಡ, ಸತ್ತ ಎಂದು ಬೇರೆ ಮದ್ವೆಯಾಗಿದ್ದ ಪತ್ನಿ

Fri Dec 17 , 2021
ಬಕ್ಸರ್: 12 ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ನಂಬಲಾಗಿದ್ದ ಮಗ ಈಗ ಜೀವಂತವಾಗಿದ್ದಾನೆ. ಆತನನ್ನು ಸತ್ತನೆಂದು ಪರಿಗಣಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ ಕುಟುಂಬ ಸದಸ್ಯರಿಗೆ ಈಗ ಅವನು ಜೀವಂತವಾಗಿದ್ದಾನೆ ಎಂಬ ಸುದ್ದಿ ತಿಳಿದು ಮೂಕ ವಿಸ್ಮಿತರಾಗಿದ್ದಾರೆ. ಆದರೆ, ಆತ ಬಾರ್ಡರ್ ಪ್ರವೇಶಿಸಿದ್ದರಿಂದ ಪಾಕಿಸ್ತಾನದ ಜೈಲಿನಲ್ಲಿ ಇರಿಸಲಾಗಿದೆ. ಯುವಕ ಮೃತಪಟ್ಟಿರುವ ವಿಷಯ ತಿಳಿದ ಆತನ ಪತ್ನಿ ಮತ್ತೆ ಮದುವೆಯಾಗಿ ಮಕ್ಕಳೊಂದಿಗೆ ತೆರಳಿದ್ದಾಳೆ. ಯುವಕ ಜೀವಂತವಾಗಿರುವ ಮತ್ತು ಪಾಕಿಸ್ತಾನದಲ್ಲಿ ಇರುವ ಸುದ್ದಿ ತಿಳಿದ […]

Advertisement

Wordpress Social Share Plugin powered by Ultimatelysocial