ಕೊನೆಗೂ ನಟಿ ಕತ್ರಿನಾ ಕೈಫ್ – ವಿಕ್ಕಿ ಕೌಶಲ್ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

ಬಿಗ್​ಬಾಸ್ ಸೀಸನ್ 15ರ ಗ್ರ್ಯಾಂಡ್ ಫಿನಾಲೆ ವೇಳೆ ಈ ಮೊದಲು ಗ್ರ್ಯಾಂಡ್ ಫಿನಾಲೆ ಗೆದ್ದ ಸ್ಪರ್ಧಿಗಳೆಲ್ಲ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ತೇಜಸ್ವಿ ಪ್ರಕಾಶ್ ಈ ಆವೃತ್ತಿಯಲ್ಲಿ ಜಯಗಳಿಸಿದ್ದು ಒಂದು ಸುದ್ದಿಯಾದರೆ, ನಟ ಸಲ್ಮಾನ್ ಖಾನ್ ಕತ್ರಿಕಾ ಕೈಫ್​ಗೆ ವಿವಾಹಕ್ಕೆ ಶುಭಾಶಯಗಳನ್ನು ಕೋರಿದ್ದು ಅಭಿಮಾನಿಗಳ ಕುತೂಹಲವನ್ನು ತಣಿಸಿದೆ.ಹೌದು.. ಭಾನುವಾರ ರಾತ್ರಿ ನಡೆದ ಬಿಗ್​ ಬಾಸ್ 15ನೇ ಆವೃತ್ತಿಯ ಫಿನಾಲೆ ಸಮಾರಂಭದಲ್ಲಿ ಗೌತಮ್ ಗುಲಾಟಿ, ಶ್ವೇತಾ ತಿವಾರಿ, ಗೌಹಾರ್ ಖಾನ್,ರುಬಿನಾ ದಿಲಾಯಿಕ್ ಮತ್ತು ಊರ್ವಶಿ ಧೋಲಾಕಿಯಾ ಅವರು ಕುಣಿದು ಕುಪ್ಪಳಿಸಿದರು.ಶ್ವೇತಾ ತಿವಾರಿ ನದಿಯೋಂನ್ ಪಾರ್ ಎಂಬ ಹಾಡಿಗೆ ಕುಣಿಯುವಾಗ, ಊರ್ವಶಿ ಮತ್ತು ರುಬಿನಾ ಕೂಡಾ ಜೊತೆಯಾಗಿದ್ದಾರೆ. ನಂತರ ಕತ್ರಿನಾ ಅವರ ಚಕ್ನಿ ಚಮೇಲಿ ಸಾಂಗ್​ಗೆ ಕೂಡಾ ರಾಖಿ ಸಾವಂತ್ ಮತ್ತು ರುಬಿನಾ ಡ್ಯಾನ್ಸ್​ ಮಾಡಿದ್ದು, ಹಾಡಿನ ಕೊನೆಯಲ್ಲಿ ಸಲ್ಮಾನ್ ಖಾನ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ವಿವಾಹಕ್ಕೆ ಶುಭಾಶಯ ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಶೋಭಾಯಾತ್ರೆʼ : 5 ಸಾವಿರ ಪಂಡಿತರಿಂದ ಮಂತ್ರಪಠಣ, ಫೆ.14ರವರೆಗೆ ಧಾರ್ಮಿಕ ಕಾರ್ಯಕ್ರಮ

Wed Feb 2 , 2022
ಹೈದರಾಬಾದ್‌ : ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಪ್ರಯುಕ್ತ ಇಂದು ಹೈದರಾಬಾದ್‌ನ ಮುಚ್ಚಿಂತಲ್‌ನಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ನೆರವೇರಿತು.ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ವೇದಪಂಡಿತರಿಂದ ಮಂತ್ರಪಠಣ ಮಾಡಲಾಯ್ತು.ಶ್ರೀ ತ್ರಿದಂಡ ಚಿನ್ನಜೀಯರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ಸಂಜೆ 5.30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಆರಂಭವಾಗಲಿದೆ. ಇನ್ನು ಸಂಜೆ 6 ಗಂಟೆಗೆ ಶ್ರೀಲಕ್ಷ್ಮೀನಾರಾಯಣ ಮಹಾಯಾಗ ನಡೆಯಲಿದೆ.ಅಂದ್ಹಾಗೆ, ಇಂದಿನಿಂದ ಫೆಬ್ರವರಿ 14ರವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಇಂದು ಅದ್ಧೂರಿಯಾಗಿ ಶೋಭಾಯಾತ್ರೆ ನೆರವೇರಿತು. ಇತ್ತೀಚಿನ […]

Advertisement

Wordpress Social Share Plugin powered by Ultimatelysocial