ಕಲ್ಲಹಳ್ಳಿ ಚೆಕ್‌ ಪೋಸ್ಟ್‌ನಲ್ಲಿ 5ಲಕ್ಷ ರೂಪಾಯಿ ವಶ

 

ವಿಜಯನಗರ ಜಿಲ್ಲೆಯ ಕಲ್ಲಹಳ್ಳಿ ಚೆಕ್‌ ಪೋಸ್ಟ್‌ ಬಳಿ ಸೋಮವಾರ ವಾಹನವೊಂದರಲ್ಲಿ ದಾಖಲೆ ಇಲ್ಲದೆ ಸಾಗುಸುತ್ತಿದ್ದ 5ಲಕ್ಷ ರೂಪಾಯಿ ಹಣವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು ಜಿಲ್ಲಾಡಳಿತ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ, ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುತ್ತಿದೆ. ಸೋಮವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5ಲಕ್ಷ ರೂಪಾಯಿ ಹಣವನ್ನು ತಾಲೂಕಿನ ಕಲ್ಲಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಹನವೊಂದು ಸಂಡೂರಿನಿಂದ ಜಿಲ್ಲಾ ಕೇಂದ್ರ ಹೊಸಪೇಟೆ ಕಡೆ ತೆರಳುತ್ತಿತ್ತು. ಈಸಂದರ್ಭದಲ್ಲಿ ವಾಹನವನ್ನು ತಪಾಸಣೆ ನಡೆಸಿದಾಗ ಐದು ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.ಹೊಸಪೇಟೆ ಪಟ್ಟಣ ಪೊಲೀಸ್‌ ಠಾಣೆ ಪಿಎಸ್ಐ ಬಾಳನಗೌಡ, ಚಿತ್ತವಾಡ್ಗಿ ಪಿಎಸ್‌ಐ ಉಮೇಶ್‌ ಕಾಮಬ್ಳೆ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.. ಕಳೆದ ಎರಡು ದಿನಗಳ ಇದೇ ಕಲ್ಲಹಳ್ಳಿ ಚೆಕ್‌ಪೋಸ್ಟ್ ನಲ್ಲಿ 2.50ಲಕ್ಷ ರೂಪಾಯಿ ನಗದು ಪತ್ತೆಯಾಗಿತ್ತು..

 

https://play.google.com/store/apps/details?id=com.speed.newskannada

Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು : ಮತದಾನದ ಹೊತ್ತಲ್ಲೇ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದ್ದು, ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

Tue Apr 25 , 2023
  ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ಜಾಫರ್ ಅಲಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಆದರೆ ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಜಾಫರ್ ಅಲಿ ಮತದಾರರ ಚೀಟಿ ಹೊಂದಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಅವರ ನಾಮಪತ್ರ ತಿರಸ್ಕರಿಸಿದ್ದಾರೆ. ಇನ್ನು ಅಬ್ಧುಲ್ ಜಾಫರ್ ನಂತರ ಮಂಜುನಾಥ್ ಎಂಬುವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ನಾಮಪತ್ರದ ಜೊತೆಗೆ ಮಂಜುನಾಥ್ […]

Advertisement

Wordpress Social Share Plugin powered by Ultimatelysocial