ಕೆಂಪೇಗೌಡ ಲೇಔಟ್‌ ಸೈಟ್‌ ಸದ್ಯಕ್ಕೆ ಹರಾಜಿಲ್ಲ.

 

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುವವರು ಮತ್ತಷ್ಟು ತಿಂಗಳು ಕಾಯಲೇ ಬೇಕು. ಏಕೆಂದರೆ, ಈ ಬಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಇ-ಹರಾಜಿನಲ್ಲಿ ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಸೇರ್ಪಡೆ ಮಾಡದಿರಲು ನಿರ್ಧರಿಸಿದೆ.ಸದ್ಯಕ್ಕೆ ಇಲ್ಲಿನ ನಿವೇಶನಗಳನ್ನು ಇ-ಹರಾಜಿನಲ್ಲಿ ಸೇರಿಸಿದಲ್ಲಿ, ಬಹಳ ಕಡಿಮೆ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡಬೇಕಾದ ಪ್ರಮೇಯ ಉದ್ಭವಿಸುವುದರಿಂದ ಮತ್ತಷ್ಟು ತಿಂಗಳು ತಡ ಮಾಡಿ ಒಳ್ಳೆಯ ಬೆಲೆಗೆ ಮಾರಾಟ ಮಾಡುವಂತೆ ತಜ್ಞರು ಬಿಡಿಎಗೆ ಸಲಹೆ ನೀಡಿದ್ದಾರೆ. ಇದನ್ನು ಪರಿಗಣಿಸಿರುವ ಬಿಡಿಎ ಕೆಲ ತಿಂಗಳ ನಂತರ ಹರಾಜು ಪ್ರಕ್ರಿಯೆ ನಡೆಸಿ ಉತ್ತಮ ಲಾಭ ಗಳಿಸಲು ತೀರ್ಮಾನಿಸಿದೆ. ಇದರಿಂದ 2023ರ ಫೆಬ್ರವರಿಯಲ್ಲಿ ಕರೆದಿರುವ ಇ-ಹರಾಜು ಪ್ರಕ್ರಿಯೆಯಲ್ಲಿ ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳನ್ನು ಸೇರಿಸದೇ ಇರಲು ನಿರ್ಧರಿಸಿದೆ.2023ರ ಮೊದಲ ಇ-ಹರಾಜು ಪ್ರಕ್ರಿಯೆಯಲ್ಲಿ 308 ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. ಸರ್‌ ಎಂ.ವಿ.ಬಡಾವಣೆ, ಎಚ್‌.ಎಸ್‌.ಆರ್‌ ಬಡಾವಣೆ, ಬನಶಂಕರಿ ಮತ್ತು ಜೆ.ಪಿ.ನಗರ, ಅಂಜನಾಪುರದ ಹಲವು ಬ್ಲಾಕ್‌ಗಳಲ್ಲಿರುವ ನಿವೇಶನಗಳನ್ನು ಮಾರಾಟಕ್ಕಿಡಲಾಗಿದೆ.2022ರಲ್ಲಿ ಬಿಡಿಎ ಇ-ಹರಾಜು ಪ್ರಕ್ರಿಯೆ ಮೂಲಕ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಹರಾಜಿಗಿಟ್ಟಾಗ 7 ಮತ್ತು 9ನೇ ಬ್ಲಾಕ್‌ನಲ್ಲಿ ನಿಗದಿ ಮಾಡಿದ್ದ ಪ್ರಾರಂಭಿಕ ಬೆಲೆ 1 ಚದರ ಮೀಟರ್‌ಗೆ 32,370 ರೂ.ಗಳಷ್ಟಿತ್ತು. ಅದೇ ರೀತಿ ಆ ವೇಳೆಯಲ್ಲಿ ಹರಾಜು ಮಾಡಿದವರಿಗೆ 32 ಮತ್ತು 33 ಲಕ್ಷ ರೂ.ಗಳಿಗೆ 54 ಚದರ ಮೀಟರ್‌ನ ನಿವೇಶನ ಸಿಕ್ಕಿದೆ. ಬನಶಂಕರಿ 6ನೇ ಹಂತ, 4 ನೇ ಬ್ಲಾಕ್‌ನಲ್ಲಿ ಪ್ರಾರಂಭಿಕ ಬೆಲೆ 1 ಚದರ ಮೀಟರ್‌ಗೆ 46,150 ರೂ. ಇತ್ತು. ಈ ಬಾರಿ ಅದೇ ಬ್ಲಾಕ್‌ನಲ್ಲಿರುವ ನಿವೇಶನಗಳ ಪ್ರಾರಂಭಿಕ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಹಳೇ ದರವನ್ನೇ ನಿಗದಿ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಸಕ, ಸಚಿವರಿಗೇ ಬಿಜೆಪಿ ಟಿಕೆಟ್ ಇಲ್ಲ? ಘಟಾನುಘಟಿಗಳಿಗೂ ತಪ್ಪದ ನಡುಕ!.

Mon Feb 27 , 2023
  ಎಲೆಕ್ಷನ್ ಹತ್ತಿರ ಬರ್ತಿದೆ. ಮಾರ್ಚ್ 1 ರಿಂದ ರಾಜ್ಯವ್ಯಾಪಿ ಯಾತ್ರೆ ನಡೆಸೋಕೆ ಬಿಜೆಪಿ ರೆಡಿ ಆಗ್ತಿದೆ. ಬಿಜೆಪಿ ಟಿಕೆಟ್ ಘೋಷಣೆ ಆಗೋ ಮುನ್ನವೇ ಅಭ್ಯರ್ಥಿಗಳೂ ಅಬ್ಬರದ ಪ್ರಚಾರ ನಡೆಸ್ತಿದ್ಧಾರೆ. ಆದ್ರೆ, ಟಿಕೆಟ್ ಆಕಾಂಕ್ಷಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಏನಂದ್ರೆ, 10ಕ್ಕೂ ಹೆಚ್ಚು ಹಾಲಿ ಶಾಸಕರು, ಸಚಿವರಿಗೇ ಈ ಬಾರಿ ಟಿಕೆಟ್ ಸಿಗೋದಿಲ್ವಂತೆ..! ಬಿಜೆಪಿ ಈ ರೀತಿ ನಿರ್ಧಾರ ಮಾಡಿರೋದು ಏಕೆ? ಇದರ ಹಿಂದೆ ಇರುವ ಚುನಾವಣಾ ತಂತ್ರಗಾರಿಕೆ […]

Advertisement

Wordpress Social Share Plugin powered by Ultimatelysocial