ಶಾಸಕ, ಸಚಿವರಿಗೇ ಬಿಜೆಪಿ ಟಿಕೆಟ್ ಇಲ್ಲ? ಘಟಾನುಘಟಿಗಳಿಗೂ ತಪ್ಪದ ನಡುಕ!.

 

ಎಲೆಕ್ಷನ್ ಹತ್ತಿರ ಬರ್ತಿದೆ. ಮಾರ್ಚ್ 1 ರಿಂದ ರಾಜ್ಯವ್ಯಾಪಿ ಯಾತ್ರೆ ನಡೆಸೋಕೆ ಬಿಜೆಪಿ ರೆಡಿ ಆಗ್ತಿದೆ. ಬಿಜೆಪಿ ಟಿಕೆಟ್ ಘೋಷಣೆ ಆಗೋ ಮುನ್ನವೇ ಅಭ್ಯರ್ಥಿಗಳೂ ಅಬ್ಬರದ ಪ್ರಚಾರ ನಡೆಸ್ತಿದ್ಧಾರೆ. ಆದ್ರೆ, ಟಿಕೆಟ್ ಆಕಾಂಕ್ಷಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಏನಂದ್ರೆ, 10ಕ್ಕೂ ಹೆಚ್ಚು ಹಾಲಿ ಶಾಸಕರು, ಸಚಿವರಿಗೇ ಈ ಬಾರಿ ಟಿಕೆಟ್ ಸಿಗೋದಿಲ್ವಂತೆ..! ಬಿಜೆಪಿ ಈ ರೀತಿ ನಿರ್ಧಾರ ಮಾಡಿರೋದು ಏಕೆ? ಇದರ ಹಿಂದೆ ಇರುವ ಚುನಾವಣಾ ತಂತ್ರಗಾರಿಕೆ ಏನು?ಕೆಲವೇ ತಿಂಗಳ ಹಿಂದೆ ಗುಜರಾತ್‌ನಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಅದೂ ಕೂಡಾ ಪ್ರಚಂಡ ಬಹುಮತದೊಂದಿಗೆ..! ಇದಕ್ಕೆ ಕಾರಣವಾಗಿದ್ದು, ಬಿಜೆಪಿಯ ಟಿಕೆಟ್ ಹಂಚಿಕೆ ಸೂತ್ರ..! ಹೌದು..! ಬರೋಬ್ಬರಿ 45 ಮಂದಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೊಡಲ್ಲ ಅಂತಾ ಹೇಳಿತ್ತು. ಅವರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಬಿಜೆಪಿಯ ಈ ಪ್ಲಾನ್ ಭರ್ಜರಿ ಯಶಸ್ಸು ಕಂಡಿತ್ತು. ಯಾಕಂದ್ರೆ, ಶೇ. 95ರಷ್ಟು ಹೊಸ ಮುಖಗಳು ಗೆಲುವು ಕಂಡಿದ್ದವು. ಅಂದರೆ 45 ಹೊಸಬರ ಪೈಕಿ 43 ಮಂದಿ ಗೆಲುವು ಸಾಧಿಸಿದ್ರು. ಈ ತಂತ್ರಗಾರಿಕೆ ಕೇವಲ ಗುಜರಾತ್ ಮಾತ್ರವಲ್ಲ, ಹಿಮಾಚಲ ಪ್ರದೇಶದಲ್ಲೂ ಜಾರಿಯಾಗಿತ್ತು. ಬಿಜೆಪಿಯ 8 ಹೊಸ ಮುಖಗಳು ಶಾಸಕರಾಗಿ ಆಯ್ಕೆಯಾದರು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಎದುರಾಗಿದೆ. ಇಲ್ಲೂ ಕೂಡಾ 10ಕ್ಕೂ ಹೆಚ್ಚು ಹೊಸ ಮುಖಗಳಿಗೆ ಮಣೆ ಹಾಕೋ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇರಬಹುದಾದ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವ ತಂತ್ರವನ್ನೂ ಹೈಕಮಾಂಡ್ ಮಾಡುತ್ತಿರಬಹುದು.ನಾವು ಗೆಲ್ಲಬೇಕು, ಮತ್ತೆ ಅಧಿಕಾರ ಹಿಡಿಯಬೇಕು.. ವಿರೋಧಿಗಳಿಗೆ ಮತ್ತೆ ಮಣ್ಣು ಮುಕ್ಕಿಸಬೇಕು  ಇದು ಬಿಜೆಪಿಯ ಸಿಂಗಲ್ ಲೈನ್ ಅಜೆಂಡಾ ಈ ಹಂತದಲ್ಲಿ ಹೊಸಬರು, ಹಳಬರು ಅನ್ನೋ ಪ್ರಶ್ನೆಯೇ ಬರೋದಿಲ್ಲ. ಇಲ್ಲಿ ಗೆಲ್ಲೋದಷ್ಟೇ ಮುಖ್ಯ.. ಆದ್ರೂ ಟಿಕೆಟ್ ಕೊಡುವ ಹಂತದಲ್ಲಿ ಇನ್ನೂ ಕೆಲವು ವಿಚಾರಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತೆ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದ ಸಚಿವರು, ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ. ಜನರ ಸಮಸ್ಯೆಗೆ ಸ್ಪಂದಿಸದೆ ಉಡಾಫೆ ಪ್ರವೃತ್ತಿ ತೋರಿದವರಿಗೂ ಟಿಕೆಟ್ ಸಿಗೋದು ಡೌಟು. ಇನ್ನು, ಪಕ್ಷದ ವೇದಿಕೆಗಳಲ್ಲಿ ಅಶಿಸ್ತು ತೋರುವವರಿಗೆ ಟಿಕೆಟ್ ಸಿಗೋದಿರಲಿ, ಶಿಸ್ತು ಕ್ರಮ ಗ್ಯಾರಂಟಿ. ಎಲ್ಲಕ್ಕಿಂತಾ ಹೆಚ್ಚಾಗಿ, 75ಕ್ಕೂ ಹೆಚ್ಚು ವರ್ಷ ಮೀರಿದವರು ಹಾಗೂ ವಯೋವೃದ್ಧರಿಗೆ ಟಿಕೆಟ್ ಸಿಗೋದೇ ಇಲ್ಲ. ಇನ್ನು ಕಾರ್ಯಕರ್ತರ ಜೊತೆಗಿನ ಒಡನಾಟವೂ ಪ್ರಮುಖ ಮಾನದಂಡವಾಗಿರುತ್ತೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದರೆ ಟಿಕೆಟ್ ಸಿಗೋದೇ ಇಲ್ಲ. ಪ್ರಮುಖವಾಗಿ ಜನಪ್ರಿಯತೆಯ ಕೊರತೆ ಇದ್ದರೆ ಹಾಗೂ ಗೆಲ್ಲುವ ಸಾಧ್ಯತೆ ಇಲ್ಲವಾದ್ರೆ ಟಿಕೆಟ್ ಸಿಗೋದಿಲ್ಲ. ಅಂತಿಮವಾಗಿ ಸರ್ವೆ ಆಧಾರಿತವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಹಂಚಿಕೆ ಮಾಡಲಾಗುತ್ತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಗುವ ಮೊದಲು ವೈನ್‌ ಕುಡಿದ್ರೆ ಹೀಗೆಲ್ಲಾ ಆಗುತ್ತಾ?

Mon Feb 27 , 2023
ದ್ರಾಕ್ಷಾರಸ ಅಥವಾ ವೈನ್‌ ಅನಾದಿ ಕಾಲದಿಂದಲೂ ಜನರಿಗೆ ಪ್ರೀಯವಾದ ಪಾನಿಯ ಅಂದ್ರೆ ತಪ್ಪಾಗೋದಿಲ್ಲ. ವೈನ್‌ ಕೇವಲ ಮನೋರಂಜನಾ ಉದ್ದೇಶದಿಂದ ಮಾತ್ರ ಕುಡಿಯೋದಲ್ಲ. ಇದರಿಂದ ಅನೇಕ ರೀತಿಯ ಆರೋಗ್ಯಕರ ಲಾಭಗಳು ಕೂಡ ಇದೆ.ನಮೆಗೆಲ್ಲಾ ಗೊತ್ತಿರುವ ಹಾಗೆ ದ್ರಾಕ್ಷಿಯನ್ನು ಹುದುಗಿಸಿ ವೈನ್‌ ತಯಾರಿಸಲಾಗುತ್ತದೆ.ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳು ಕೂಡ ಇದೆ. ಆದ್ರೆ ಮಲಗುವ ಮೊದಲು ವೈನ್‌ ಕುಡಿಯುವ ಅಭ್ಯಾಸ ಒಳ್ಳೆಯದಾ? ಅಷ್ಟಕ್ಕೂ ರಾತ್ರಿ ಮಲಗುವ ಮೊದಲು ಎರಡು ಲೋಟ ವೈನ್‌ […]

Advertisement

Wordpress Social Share Plugin powered by Ultimatelysocial