ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗುತ್ತೆ 6000 ರೂಪಾಯಿ

 

ರೈತರು, ಮಹಿಳೆಯರು, ಬಡವರು, ನಿರ್ಗತಿಕರಿಗಾಗಿ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇವಲ‌ ಮಹಿಳೆಯರಿಗಾಗಿ ಎಂದೇ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು‌ ಹಮ್ಮಿಕೊಂಡಿದ್ದು, ಇದರ ಅಡಿಯಲ್ಲಿ ನೇರವಾಗಿ ಮಹಿಳೆಯರ ಖಾತೆಗೆ 6000 ರೂ. ವರ್ಗಾಯಿಸಲಾಗುತ್ತದೆ.ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ (PMMVY), ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಫಲಾನುಭವಿಗಳಿಗೆ 6000 ರೂ. ವರ್ಗಾಯಿಸುತ್ತದೆ. ಈ ಯೋಜನೆಯ ಪ್ರಯೋಜನವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ, ಯಾವುದೇ ಪುರುಷ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದನ್ನು ಗಮನಿಸಬೇಕು.

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು ?

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು, ಜನವರಿ 1, 2017 ರಲ್ಲಿ ಪ್ರಾರಂಭಿಸಲಾಯಿತು.

ಎಲ್ಲಾ ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪೋಷಕರ ಆಧಾರ್ ಕಾರ್ಡ್, ಪೋಷಕರ ಗುರುತಿನ ಚೀಟಿ, ಮಗುವಿನ ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ಪಾಸ್ ಬುಕ್ ಸಲ್ಲಿಸಿ ಅರ್ಜಿ‌ ಹಾಕಬಹುದು.‌

ಯೋಜನೆಯ ಉದ್ದೇಶ

ತಾಯಿ ಮತ್ತು ಮಗುವಿನ ಸರಿಯಾದ ಆರೈಕೆಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸರ್ಕಾರವು 6000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಸರ್ಕಾರವು ಈ ಹಣವನ್ನು 3 ಹಂತಗಳಲ್ಲಿ ನೀಡುತ್ತದೆ. ಗರ್ಭಿಣಿಯ ಮಹಿಳೆಯರಿಗೆ, ಮೊದಲ ಹಂತದಲ್ಲಿ 1000, ಎರಡನೇ ಹಂತದಲ್ಲಿ 2000 ಹಾಗೂ ಮೂರನೇ ಹಂತದಲ್ಲಿ 2000 ರೂ. ನೀಡಲಾಗುತ್ತದೆ. ಉಳಿದ ಒಂದು ಸಾವಿರ ರೂಪಾಯಿಯನ್ನು, ಮಗು ಹುಟ್ಟಿದಾಗ ಆಸ್ಪತ್ರೆಗೆ ವರ್ಗಾಯಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

‘ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ…ಮನ ಮುಟ್ಟುತ್ತಿದೆ ದಿವಾಕರ್ ಸಾಹಿತ್ಯದ ‘ಇಂಥವರ ಸಂತಾನ ಭಾಗ್ಯ’ ಹಾಡು

Thu Mar 10 , 2022
ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡ್ತಿರುವ ಜುಗಲ್ ಬಂದಿ ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಸುದ್ದಿ ಮಾಡುತ್ತಿದೆ. ರಿಲೀಸ್ ಗೂ ಮೊದಲೇ ಭಾರೀ ಮೊತ್ತಕ್ಕೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿ ಗಮನಸೆಳೆದಿದ್ದ ಜುಗಲ್ ಬಂದಿ ಸಿನಿಮಾ ಅಂಗಳದಿಂದ ಮನಮುಟ್ಟುವ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಇಂಥವರ ಸಂತಾನ ಭಾಗ್ಯ ಎಂದು ಶುರುವಾಗುವ ಅದ್ಭುತ ಸಾಹಿತ್ಯ ಎಂತಹ ಕಲ್ಲು ಮನಸನ್ನು ಕರಿಸುವಂತಿದೆ. ನಿರ್ದೇಶಕ […]

Advertisement

Wordpress Social Share Plugin powered by Ultimatelysocial