ಜಿಎಸ್‌ಟಿ ಏರಿಕೆ: ಪಾದರಕ್ಷೆ, ಬಟ್ಟೆ ಹೊಸ ವರ್ಷದಿಂದ ದುಬಾರಿ

ಜಿಎಸ್‌ಟಿ ಏರಿಕೆ: ಪಾದರಕ್ಷೆ, ಬಟ್ಟೆ ಹೊಸ ವರ್ಷದಿಂದ ದುಬಾರಿ!

ಕೇಂದ್ರ ಸರ್ಕಾರವವು ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಅನ್ನು ಅಧಿಕ ಮಾಡಿದ ಕಾರಣದಿಂದಾಗಿ ಜನವರಿ 1, 2022 ರಿಂದ ಬಟ್ಟೆಗಳು ಹಾಗೂ ಪಾದರಕ್ಷೆಗಳು ದುಬಾರಿ ಆಗಲಿದೆ. ಬಟ್ಟೆಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗು‌ತ್ತದೆ.

ಈ ಏರಿಕೆಯು ಪ್ರಮುಖವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಇನ್ನು ವ್ಯಾಪಾರಿಗಳು ಆಧಾರ್‌ ಕಾರ್ಡ್‌ನ ವೆರಿಫಿಕೇಶನ್‌ ಅನ್ನು ಮಾಡಿದ್ದರೆ ಮಾತ್ರ ಜಿಎಸ್‌ಟಿ ಮರು ಪಾವತಿ ಆಗಲಿದೆ. ತೆರಿಗೆ ಪಾವತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇನ್ನು ಆಧಾರ್‌ನ ವೆರಿಫಿಕೇಶನ್‌ ಮಾಡದಿದ್ದರೆ, ಆಧಾರ್‌ನಲ್ಲಿ ಜಿಎಸ್‌ಟಿಆರ್‌-1 ಸಲ್ಲಿಕೆಯು ಸಾಧ್ಯವಾಗಲಾರದು. ಇದರಿಂದಾಗಿ ವ್ಯಾಪಾರಿಗಳಿಗೆ ಐಟಿ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗಲಾರದು

ಈಗಾಗಲೇ ಕೇಂದ್ರ ಸರ್ಕಾರವು ಜಿಎಸ್‌ಟಿ ಪಾವತಿಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರು ಜೊಮ್ಯಾಟೊ ಹಾಗೂ ಸ್ವಿಗ್ಗಿ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್‌ ಮಾಡಿದರೆ, ಆಹಾರದ ಮೇಲೆ ಶೇಕಡ 5 ರಷ್ಟು ತೆರಿಗೆಯನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್‌ಗಳಿಗೆ ನೀಡುತ್ತಿದ್ದವು. ಆದರೆ ಕೆಲವು ರೆಸ್ಟೋರೆಂಟ್‌ಗಳು ಈ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಲ್ಲ. ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಆದರೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿಲ್ಲ. ಕೆಲವು ರೆಸ್ಟೋರೆಂಟ್‌ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಫುಡ್‌ ಡೆಲಿವರಿ ಆಪ್ಲಿಕೇಷನ್‌ಗಳು ಜನವರಿ 1 ರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯವನ್ನು ಮಾಡಲಿದೆ.

ಜನವರಿ ಒಂದರಿಂದ ಶೇಕಡ 12 ರಷ್ಟು ಜಿಎಸ್‌ಟಿ

ಜನವರಿ ಒಂದರಿಂದ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಈ ಹಿನ್ನೆಲೆಯಿಂದಾಗಿ ಮುಂದಿನ ವರ್ಷದಿಂದ ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆಯು ದುಬಾರಿಯಾಗಲಿದೆ. ಇನ್ನ ಈ ವೇಳೆ ಹತ್ತಿಯ ವಸ್ತುಗಳಿಗೆ ವಿನಾಯತಿ ನೀಡಲಾಗಿದೆ. ಹಾಗಾಗಿ ಹತ್ತಿಯ ಬಟ್ಟೆಗಳ ಬೆಲೆಯಲ್ಲಿ ಯಾವುದೇ ಏರಿಕೆ ಆಗುವ ಸಾಧ್ಯತೆ ಇಲ್ಲ. ಹತ್ತಿಯ ಬಟ್ಟೆಗಳ ಮೇಲಿನ ಜಿಎಸ್‌ಟಿ ಈ ಹಿಂದಿನಂತೆಯೇ ಶೇಕಡ 5 ಆಗಿರುತ್ತದೆ.

ಸಿದ್ಧ ಉಡುಪುಗಳು, ಜವಳಿಗಳು ಹಾಗೂಪಾದರಕ್ಷೆಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯನ್ನು (ಜಿಎಸ್‌ಟಿ) ಕೇಂದ್ರ ಸರ್ಕಾರವು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕ ಘೋಷಣೆ ಮಾಡಿದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ನವೆಂಬರ್‌ 18 ರಂದು ಈ ಸೂಚನೆಯನ್ನು ನೀಡಿದೆ. ಉಡುಪುಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯು 2022 ರ ಜನವರಿ ತಿಂಗಳಿನಿಂದ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಬಟ್ಟೆಗಳು ಅಥವಾ ಸರ್ವಿಯೆಟ್‌ಗಳು, ರಗ್ಗುಗಳು ಮತ್ತು ಟೇಪ್‌ಸ್ಟ್ರಿಗಳಂತಹ ಪರಿಕರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ಜಿಎಸ್‌ಟಿ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ಯಾವುದೇ ಬೆಲೆಯ ಚಪ್ಪಲಿಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ ಅದಿತಿ ಪ್ರಭುದೇವ?; ಕನಸು ನನಸಾಯ್ತು ಎಂದ ನಟಿ

Mon Dec 27 , 2021
ಅದಿತಿ ಹೊಸ ಫೋಟೋ ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ ಉಂಗುರ ಹೈಲೈಟ್​ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ.ನಟಿ ಅದಿತಿ ಪ್ರಭುದೇವ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಈಗ ಅವರ ಕಡೆಯಿಂದ ಗುಡ್​ನ್ಯೂಸ್​ ಸಿಕ್ಕಿದೆ! ಅವರು ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಅವರು ಹುಡಗನೊಬ್ಬನ ಜತೆ ಇರುವ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಉಂಗುರ […]

Advertisement

Wordpress Social Share Plugin powered by Ultimatelysocial