ಆರೋಗ್ಯ ಸಮಸ್ಯೆ ಇರುವವರು ಮೊಟ್ಟೆಯನ್ನು ಸೇವಿಸಬಾರದು ಎಂದು ತಿಳಿಯಿರಿ.

ಬೆಂಗಳೂರು: ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧ ಮೂಲವಾಗಿರುವ ಅನೇಕ ಜೀವಸತ್ವಗಳು ಮತ್ತು ಖನಿಜಗಳ ನೈಸರ್ಗಿಕ ಮೂಲವೂ ಆಗಿರುವ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವು ಕಾಯಿಲೆ ಇರುವವರಿಗೆ ಮೊಟ್ಟೆ ಸೇವನೆ ತುಂಬಾ ಡೇಂಜರ್ ಎಂದು ನಿಮಗೆ ತಿಳಿದಿದೆಯೇ?

ಹಾಗಿದ್ದರೆ ಯಾವ ಆರೋಗ್ಯ ಸಮಸ್ಯೆ ಇರುವವರು ಮೊಟ್ಟೆಯನ್ನು ಸೇವಿಸಬಾರದು ಎಂದು ತಿಳಿಯಿರಿ.

ಮೊಟ್ಟೆ ಸೂಪರ್ ಫುಡ್, ಆದರೆ ಈ ಐದು ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಮೊಟ್ಟೆ ತಿನ್ನಲೇಬಾರದು:
ಅಜೀರ್ಣ ಸಮಸ್ಯೆ:
ಕೆಲವು ಆಹಾರಗಳು ಕೆಲವರಿಗೆ ಸರಿಯಾಗಿ ಜೀರ್ಣವಾಗುವುದಿಲ್ಲ. ಅಂತಹವರು ಮೊಟ್ಟೆ ಸೇವನೆಯನ್ನು ತಪ್ಪಿಸುವುದು ಉತ್ತಮ ಎನ್ನಲಾಗುತ್ತದೆ. ಏಕೆಂದರೆ, ಮೊಟ್ಟೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಬಳಿಕ ಉದರ ಸಂಬಂಧಿತ ಹಲವು ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.

ಹೃದ್ರೋಗ:
ಹೃದಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ಇರುವವರಿಗೂ ಕೂಡ ಮೊಟ್ಟೆ ಉತ್ತಮ ಆಹಾರವಲ್ಲ. ಅದರಲ್ಲೂ ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದರಿಂದ ಇದು ರಕ್ತನಾಳಗಳಲ್ಲಿ ಹೋಗುವುದರಿಂದ ರಕ್ತ ಪರಿಚಲನೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಆಕ್ಸಿಜನ್ ಪೂರೈಕೆಯಾಗದೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕೊಲೆಸ್ಟ್ರಾಲ್:
ಮೇಲೆ ಉಲ್ಲೇಖಿಸಿದಂತೆ ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತದೆ. ಹಾಗಾಗಿ ,ಕೊಲೆಸ್ಟ್ರಾಲ್ ಸಮಸ್ಯೆಇರುವವರು ಮೊಟ್ಟೆಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಮಿಸ್ ಆಗಿ ಸಹ ಮೊಟ್ಟೆ ತಿನ್ನದಿರುವುದು ಉತ್ತಮ ಎಂದು ಹೇಳಲಾಗುತ್ತದೆ.

ಅತಿಸಾರ:
ಅತಿಸಾರ ಅಥವಾ ಉದರ ಸಂಬಂಧಿತ ಯಾವುದೇ ಸಮಸ್ಯೆ ಇದ್ದರೂ ಕೂಡ ಮೊಟ್ಟೆ ಸೇವನೆ ಒಳ್ಳೆಯದಲ್ಲ. ಅತಿಸಾರದ ಪರಿಸ್ಥಿತಿಯಲ್ಲಿ ಮೊಟ್ಟೆಯನ್ನು ಸೇವಿಸುವುದನ್ನು ವಿಷಕ್ಕೆ ಸಮಾನ ಎಂದು ಹೇಳಲಾಗುತ್ತದೆ.

ಮಲಬದ್ಧತೆ ಸಮಸ್ಯೆಗೆ ಮನೆಮದ್ದು

ಕ್ಯಾನ್ಸರ್:
ಮೊಟ್ಟೆಯ ಅತಿಯಾದ ಸೇವನೆಯಿಂದ ಕ್ಯಾನ್ಸರ್ ಅಪಾಯ ದುಪ್ಪಟ್ಟಾಗಲಿದೆ. ಅಧಿಕ ಮೊಟ್ಟೆ ಸೇವನೆಯು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದ ಈ ಭಾಗಕ್ಕೆ ನೀವು ಪ್ರವಾಸ ಮಾಡಿದ್ದೀರಾ?

Fri Feb 17 , 2023
ನಿಮಗೆ ಕರ್ನಾಟಕದಲ್ಲಿರುವ ಹಾಗೂ ಹೆಚ್ಚಿನ ಪ್ರವಾಸಿಗರಿಗೆ ತಿಳಿಯದ ಕೆಲವೊಂದು ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ. ಈ ಪ್ರವಾಸಿ ಸ್ಥಳಗಳಿಗೆ ನೀವು ಕೂಡ ಪ್ರವಾಸವನ್ನು ಕೈಗೊಳ್ಳುವ ಮೂಲಕ ಹೊಸ ಸ್ಥಳದ ಅನ್ವೇಷಣೆ ಮಾಡಬಹುದು.ನಿಮಗೆ ಕರ್ನಾಟಕದಲ್ಲಿರುವ ಹಾಗೂ ಹೆಚ್ಚಿನ ಪ್ರವಾಸಿಗರಿಗೆ ತಿಳಿಯದ ಕೆಲವೊಂದು ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ. ಈ ಪ್ರವಾಸಿ ಸ್ಥಳಗಳಿಗೆ ನೀವು ಕೂಡ ಪ್ರವಾಸವನ್ನು ಕೈಗೊಳ್ಳುವ ಮೂಲಕ ಹೊಸ ಸ್ಥಳದ ಅನ್ವೇಷಣೆ ಮಾಡಬಹುದು. ಈ ವಿಕೇಂಡ್ ಈ ಪ್ರದೇಶಗಳಿಗೆ ಹೋಗಲು […]

Advertisement

Wordpress Social Share Plugin powered by Ultimatelysocial