ಕೊಡಗಿನ ಗೌರಮ್ಮನವರು ಕನ್ನಡದ ಮಹತ್ವದ ಕತೆಗಾರ್ತಿ.

 

 

ಕೊಡಗಿನ ಗೌರಮ್ಮನವರು ಕನ್ನಡದ ಮಹತ್ವದ ಕತೆಗಾರ್ತಿ.ಕೊಡಗಿನ ಗೌರಮ್ಮನವರು 1912ರ ಮಾರ್ಚ್ 5ರಂದು ಜನಿಸಿದರು. ಗೌರಮ್ಮನವರು ಮಡಿಕೇರಿಯ ಕಾನ್ವೆಂಟ್ನಲ್ಲಿ ಎಸ್ಎಸ್ಎಲ್ಸಿ ವರೆಗೆ ಓದಿದ್ದರು. ಆಧುನಿಕ ಮನೋಭಾವದ ಗೌರಮ್ಮನವರು ಈಜುತ್ತಿದ್ದರು ಮತ್ತು ಟೆನ್ನಿಸ್ ಆಡುತ್ತಿದ್ದರು. ಅವರಿಗೆ ಆ ಕಾಲದ ಹಲವಾರು ಹಿರಿಯ ಕಿರಿಯ ಸಾಹಿತಿಗಳೊಂದಿಗೆ ಒಡನಾಟವಿತ್ತು. ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಯುತ್ತಿದ್ದ ಪದ್ಮಾವತಿ ರಸ್ತೋಗಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಆರ್. ಕಲ್ಯಾಣಮ್ಮ, ಮಾಸ್ತಿ, ಬೇಂದ್ರೆ, ಶಿವರಾಮಕಾರಂತರ ಪರಿಚಯ ಇವರಿಗಿತ್ತು.ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದ ಗೌರಮ್ಮ ಗಾಂಧಿ ಭಕ್ತೆಯಾಗಿದ್ದು ಖಾದಿ ಬಟ್ಟೆ ತೊಡುತ್ತಿದ್ದರು. ತಾವಿದ್ದ ಮಡಿಕೇರಿಗೆ ಗಾಂಧಿ ಬರುವರೆಂದು ತಿಳಿದು ಅವರನ್ನು ತನ್ನ ಮನೆಗೇ ಕರೆಸಿಕೊಳ್ಳಬೇಕೆಂದು ಉಪವಾಸ ಕುಳಿತ ಛಲವಂತೆ ಈಕೆ. ವಿಷಯ ತಿಳಿದು ಆಕೆಯ ಪ್ರೀತಿಗೆ ಓಗೊಟ್ಟ ಗಾಂಧಿ ಗೌರಮ್ಮನವರ ಮನೆಗೆ ಬಂದು ಆಕೆಗೆ ಕಿತ್ತಲೆ ಹಣ್ಣು ಕೊಟ್ಟು ಆಕೆಯನ್ನು ಉಪವಾಸದಿಂದ ಬಿಡುಗಡೆ ಮಾಡಿದರು.ಗಾಂಧಿಯವರ ಆಗಮನದಿಂದ ಧನ್ಯತೆ ಅನುಭವಿಸಿದ ಗೌರಮ್ಮ ಮಂಗಳಸೂತ್ರವೊಂದನ್ನುಳಿದು ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ಗಾಂಧಿಗೆ ಧಾರೆಯೆರೆದು ಕೊಟ್ಟರಂತೆ. ಅವರ ಬಳಿಯೇ ನಿಂತಿದ್ದ ಗೌರಮ್ಮನವರ ಪತಿಯನ್ನು ಗಾಂಧಿ, ‘ಈಕೆ ಒಡವೆ ಕೊಡಬೇಕೆನ್ನುವುದು ಸ್ವಬುದ್ಧಿಯೋ ಹ್ಯಾಗೆ?’ ಎಂದು ಕೇಳಿದರಂತೆ. ಆ ತರುಣ ಪತಿ, ‘ಆಕೆಯ ಸ್ವಬುದ್ಧಿಯಿಂದಲೇ. ಅದಕ್ಕೆ ನನ್ನ ಒಪ್ಪಿಗೆಯೂ ಇದೆ’ ಎಂದರಂತೆ. ಈಗ ಕೊಟ್ಟ ಒಡವೆಗಳನ್ನು ಮತ್ತೆ ಮುಂದೆ ಮಾಡಿಸಿಕೊಳ್ಳುವುದಿಲ್ಲವೆಂದು ಆಕೆ ಗಾಂಧೀಜಿಗೆ ಹೇಳಿದರಂತೆ. ಈ ಪ್ರಸಂಗವನ್ನು ಗಾಂಧಿ ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದಿದ್ದಾರೆ. ಆಗ ಗೌರಮ್ಮನವರಿಗೆ 21 ವರ್ಷ ವಯಸ್ಸು.ಭಾರತಿಸುತ, ಮುಳಿಯ ತಿಮ್ಮಪ್ಪಯ್ಯ ಹಾಗೂ ದ.ಬಾ. ಕುಲಕರ್ಣಿಯವರು ಗೌರಮ್ಮನವರ ಕೆಲವು ಕತೆಗಳನ್ನು ಮೆಚ್ಚಿದ್ದರು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಲಯದ ಚರ್ಚೆಗಳೊಂದಿಗೆ ಈಕೆ ಹೊಂದಿದ್ದ ಸಂಪರ್ಕ ಅವರ ಬರವಣಿಗೆಗೆ ಹೆಚ್ಚು ಕಸುವನ್ನು ತುಂಬಿತು. ದೂರದ ಜಮಖಂಡಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ.

Mon Mar 6 , 2023
  ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದವರು.ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ದಿನ ಮಾರ್ಚ್ 5. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂದೂಸ್ಥಾನಿ ಸಂಗೀತದ ಹೆಚ್ಚು ಪರಿಚಯವಿರಲಿಲ್ಲ. ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ದೀಪಗಳೆಲ್ಲಾ ಜಗಮಗಿಸುತ್ತಿದ್ದ ಒಂದು ದಿನ ಆ ಇಡೀ ವಾತಾವರಣವನ್ನೆಲ್ಲಾ ತಮ್ಮ ದೇವಗಾನದಲ್ಲಿ ತುಂಬಿಸುತ್ತಿದ್ದ ಗಂಗೂಬಾಯಿ ಹಾನಗಲ್ಲರ ಮೋಡಿ ನಮ್ಮನ್ನೆಲ್ಲಾ ಮೈಮರೆಸಿದ್ದು ಇಂದು ನೆನೆದರೂ ರೋಮಾಂಚನವೆನಿಸುತ್ತಿದೆ. ಈ ಭಾವದಲ್ಲಿ ಚಿಂತಿಸುವಾಗ ಹಿಂದೊಮ್ಮೆ ಓದಿದ […]

Advertisement

Wordpress Social Share Plugin powered by Ultimatelysocial