ಪುರಸಭೆ ಅಧ್ಯಕ್ಷರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆ : ಶ್ರೀನಿವಾಸಪುರ ಪಟ್ಟಣದ ಪುರಸಭೆ ಅಧ್ಯಕ್ಷರಾದ ಲಲಿತಾ ಶ್ರೀನಿವಾಸ್ ಸೇರ್ಪಡೆ

ಪುರಸಭೆ ಅಧ್ಯಕ್ಷರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್  ಸೇರ್ಪಡೆಯಾಗಿದ್ದಾರೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಪುರಸಭೆ ಅಧ್ಯಕ್ಷರಾದ ಲಲಿತಾ ಶ್ರೀನಿವಾಸ್ ರವರು ಜೆಡಿಎಸ್ ಪಕ್ಷವನ್ನು ತೊರೆದು ತಾಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ವಿಧಾನ ಸಭಾಧ್ಯಕ್ಷರಾದ ಕೆಆರ್ ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಶ್ರೀನಿವಾಸಪುರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ .  ಈ ಸಮಯದಲ್ಲಿ ನಡೆದ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್  ಮಾತನಾಡಿ ಶ್ರೀನಿವಾಸಪುರ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಸುಮಾರು ಒಂದುವರೆ ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ.  ನಾನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ . ಯಾವುದೇ ನನ್ನ ಮೇಲೆ ಯಾವುದೇ ಆರೋಪಗಳು ಇರುವುದಿಲ್ಲ.  ಮಾಜಿ ಶಾಸಕರಾದ ಜಿಕೆ ವೆಂಕಟಶಿವಾರೆಡ್ಡಿ ರಾಜಕೀಯಕ್ಕಾಗಿ ನಮ್ಮನ್ನು ಬಳಸಿಕೊಂಡು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಪಡುತ್ತಿದ್ದಾರೆ .

ಮಾಜಿ ಶಾಸಕರು ಹಾಲಿ ಮಾನ್ಯ ಶಾಸಕ ವಿರುದ್ಧ ನನ್ನನ್ನು ಎತ್ತಿಕಟ್ಟಿ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಿರುತ್ತಾರೆ . ಆದ್ದರಿಂದ ಮಾಜಿ ಶಾಸಕರ ವರ್ತನೆಯನ್ನು ಮನನೊಂದು ಮಾನ್ಯ ಶಾಸಕರ ಪ್ರಗತಿಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆಂದು ಹೇಳಿಕೆ ನೀಡಿದ್ದಾರೆ.  ನಂತರ ಶಾಸಕರಾದ ರಮೇಶ್ ಕುಮಾರ್ ರವರು ಮಾತನಾಡಿ  ಯಾವುದೇ ಅಧಿಕಾರದ ಆಮಿಷದಿಂದ ಯಾವುದೇ ಷರತ್ತುಗಳನ್ನು ವಿಧಿಸಿ ನಮ್ಮ ಪಕ್ಷಕ್ಕೆ ಬರುತ್ತಿಲ್ಲಾ ನಾವು ಮಾಡಿರುವ ಜನಪರ ಕೆಲಸಗಳನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಹೆಣ್ಣುಮಗಳು ಸೇರ್ಪಡೆಯಾಗುತ್ತಿದ್ದಾಳೆ . ಯಾರೇ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತವೆಂದರೆ ಅದ್ದೂರಿಯಾಗಿ ಸ್ವಾಗತಿಸುತ್ತೇವೆಂದು ಶಾಸಕರು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹನೂರು: ಧೂಪ , ಕರ್ಪೂರ ಮಾರುತ್ತಿದ್ದ ಮಹಿಳೆಯಿಂದ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ

Sat Jul 2 , 2022
ಹನೂರು: ಧೂಪ , ಕರ್ಪೂರ ಮಾರುತ್ತಿದ್ದ ಮಹಿಳೆಯಿಂದ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 20 ವರ್ಷಗಳಿಂದ ಧೂಪ ಕರ್ಪೂರ ಮಾರುತ್ತಿದ್ದ ರಾಮನಗರ ಜಿಲ್ಲೆ ಕನಕಪುರದ ಶಿವಮ್ಮ ಎಂಬಾಕೆ ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಈಕೆ ಬೆಳಗ್ಗಿನ ಜಾವ ಕನಕಪುರಕ್ಕೆ ತೆರಳಲು ಆಕೆಯ ಬಳಿಯಿದ್ದ 2.5ಲಕ್ಷ ನಗದು, 12 ಗ್ರಾಂ ಚಿನ್ನದ ನೆಕ್ಲೆಸ್ ಮತ್ತು 14ಗ್ರಾಂ […]

Advertisement

Wordpress Social Share Plugin powered by Ultimatelysocial