ಸ್ಯಾಂಡಲ್​ವುಡ್​ನ ಹಾಸ್ಯನಟ ಕೋಮಲ್ ಜನ್ಮದಿನದ !

 

ಸ್ಯಾಂಡಲ್​ವುಡ್​ನ ಹಾಸ್ಯನಟ ಕೋಮಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಕಾಮಿಡಿ ಪಾತ್ರಗಳ ಮೂಲಕವೇ ಜನಮನ ಗೆದ್ದ ನಟ ಕೋಮಲ್. ಹಾಸ್ಯಭರಿತ ಪಾತ್ರಗಳು ಮಾತ್ರವಲ್ಲ, ಸಿನಿಮಾ ನಾಯಕನಾಗಿಯೂ ಕೋಮಲ್ ಸಾಕಷ್ಟು ಮನ್ನಣೆ ಪಡೆದಿದ್ದಾರೆ.

‘ಗೋವಿಂದಾಯ ನಮಃ’ ಸೇರಿದಂತೆ ವಿವಿಧ ಕಾಮಿಡಿ ಸಿನಿಮಾಗಳ ಮೂಲಕ ಜನರ ಮನಗೆದ್ದಿರುವ ನಟ.

ಆದರೆ ಕಳೆದ ಕೆಲ ಸಮಯದಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಮತ್ತೆ ಯಾವಾಗ ತೆರೆಮೇಲೆ ಕಾಮಿಡಿಯ ರಸದೌತಣ ಬಡಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರನ್ನು ರಂಜಿಸಿದ ನಟ. ಕೋಮಲ್ ಎಂದರೆ ಹಾಸ್ಯ, ಹಾಸ್ಯ ಎಂದರೆ ಕೋಮಲ್ ಎನ್ನುವಷ್ಟರ ಮಟ್ಟಿಗೆ ಫೇಮಸ್​ ಆದವರು ಇವರು.

ಹೀರೋ ಆಗಿ ಮಿಂಚಿದ ಕೋಮಲ್!
ಕನ್ನಡದ ನವರಸನಾಯಕ ಜಗ್ಗೇಶ್ ಅವರ ಸಹೋದರ ಕೋಮಲ್. ಕೋಮಲ್ ತಮ್ಮ ಸಿನಿಮಾ ಜರ್ನಿ ಆರಂಭದಲ್ಲಿ ಹಲವು ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೋಮಲ್ ಇದ್ದರೆ ಆ ದೃಶ್ಯದ ಕಳೆ ಹೆಚ್ಚುತ್ತಿತ್ತು ಎನ್ನುವುದರಲ್ಲಿ ನೋ ಡೌಟ್. ನಂತರ ಕೋಮಲ್ ಹೀರೋ ಆಗಿ ಮಿಂಚಿದರು. ‘ಗೋವಿಂದಾಯ ನಮಃ’ ಸಿನಿಮಾ ಎಂದಿಗೂ ಮರೆಯದ ಸಿನಿಮಾ ಆಗಿ ಉಳಿದಿದೆ.

ತುಮಕೂರಿನವರು ಕೋಮಲ್!

ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ ಜನಿಸಿದರು ಕೋಮಲ್. ಸ್ಯಾಂಡಲ್​ವುಡ್​ನ ನವರಸ್ ನಾಯಕ ಜಗ್ಗೇಶ್​ ಅವರ ಸಹೋದರ. ಕಾಮಿಡಿ ಪಾತ್ರ ಮಾಡುವ ಮುನ್ನ, ಕೋಮಲ್ ಖಳ ನಟನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟವರು. ಹಲವು ಬಗೆಯ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ ಕೋಮಲ್. 2008ರ ‘ಮಿಸ್ಟರ್ ಗರಗಸ’ ಸಿನಿಮಾ ಮೂಲಕ ಹೀರೊ ಆದ ಕೋಮಲ್, ‘ಗೋವಿಂದಾಯ ನಮಃ’, ‘ಪುಂಗಿದಾಸ’, ‘ಡೀಲ್ ರಾಜ’ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಕೆಂಪೇಗೌಡ’ ಆದ ಕೋಮಲ್!

ನಟ ಕೋಮಲ್ ಹೀರೊ ಆದರೂ ಕೂಡ, ತಮ್ಮ ಕಾಮಿಡಿಯನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ‘ಕೆಂಪೇಗೌಡ 2’ ಸಿನಿಮಾಕ್ಕಾಗಿ ಬೇರೆ ರೀತಿಯ ಶೇಡ್‌ನಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮಾಸ್ ಲುಕ್‌ನಲ್ಲಿ ಮಿಂಚಿದರು. ಇದೇ ಸಿನಿಮಾಗಾಗಿ ದೈಹಿಕವಾಗಿ ತಮ್ಮ ಲುಕ್ ಬದಲಿಸಿಕೊಂಡರು ಕೋಮಲ್. ಆದರೆ ಈ ಸಿನಿಮಾ ಅಂದುಕೊಂಡ ಮಟ್ಟಿಗೆ ಅವರಿಗೆ ಯಶಸ್ಸು ತಂದುಕೊಡಲಿಲ್ಲ.

ಬ್ರೇಕ್ ತೆಗೆದುಕೊಂಡ ನಟ ಕೋಮಲ್!

ನಟ ಕೋಮಲ್ ಅವ್ರನ್ನ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. ಬಹಳ ದಿನಗಳಿಂದ ತೆರೆಯ ಮೇಲೆ ಕೋಮಲ್ ಕಾಣಿಸಿಕೊಂಡಿಲ್ಲ. ಹಾಗಾಗಿ ಅವರ ಮುಂದಿನ ಸಿನಿಮಾ ಯಾವುದೆಂದು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಕೋಮಲ್ ಅದ್ಭುತ ನಟ. ಅವರ ಮುಂದಿನ ಸಿನಿಮಾ ಆದಷ್ಟು ಬೇಗ ಸೆಟ್ಟೇರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚನ್ನರಾಯಪಟ್ಟಣ: ಮಕ್ಕಳ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಸಾಂಸ್ಕೃತಿಕ ಕಾರ್ಯ

Mon Jul 4 , 2022
ಚನ್ನರಾಯಪಟ್ಟಣ: ಮಕ್ಕಳ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪತ್ರಕರ್ತ ಐ.ಕೆ.ಮಂಜುನಾಥ್ ನೇಮಕ ಚನ್ನರಾಯಪಟ್ಟಣ:ಮಕ್ಕಳ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ನೂತನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪತ್ರಕರ್ತ ಐ.ಕೆ.ಮಂಜುನಾಥ ಅವರನ್ನು ನೇಮಕ ಮಾಡಲಾಗಿದೆ. ಪತ್ರಕರ್ತ ಐ.ಕೆ.ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಗುರುತಿಸಿ ಮಕ್ಕಳ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನೇಮಕ […]

Advertisement

Wordpress Social Share Plugin powered by Ultimatelysocial